ಇತ್ತೀಚಿಗೆ ಜನರು ಕೈ ತುಂಬಾ ದುಡಿದರೂ ಕೂಡ ಸಾಮಾನ್ಯ ಜೀವನ ಸಾಗಿಸೋದು ಕೂಡ ಕಷ್ಟವಾಗಿದೆ ಯಾಕೆ ಗೊತ್ತೇ?? ಮೂಲ ಕಾರಣವೇನು ಗೊತ್ತೇ??

ಇತ್ತೀಚಿಗೆ ಜನರು ಕೈ ತುಂಬಾ ದುಡಿದರೂ ಕೂಡ ಸಾಮಾನ್ಯ ಜೀವನ ಸಾಗಿಸೋದು ಕೂಡ ಕಷ್ಟವಾಗಿದೆ ಯಾಕೆ ಗೊತ್ತೇ?? ಮೂಲ ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲಾ ಗೊತ್ತಿರಬಹುದು, ಕರೋನಾ ಎನ್ನುವ ಮಹಾಮಾರಿ ದೇಶ ಮಾತ್ರವಲ್ಲದೇ ಜಗತ್ತಿನಾದ್ಯಂತ ಎಷ್ಟು ಅವಾಂತರವನ್ನು ಸೃಷ್ಟಿಸಿದೆ ಎಂಬುದಾಗಿ. ಜನರು ಜೀವ ಕಳೆದುಕೊಂಡಿದ್ದರಿಂದ ಹಿಡಿದು ಜೀವನ ಮಾಡುವುದಕ್ಕೇ ಕಷ್ಟವಾಗುವಷ್ಟರ ಮಟ್ಟಿಗೆ ಸಮಸ್ಯೆಯನ್ನು ಸೃಷ್ಟಿಸಿದೆ. ಇದರ ಜೊತೆಗೆ ಇನ್ನೂ ಹಲವಾರು ಕಾರಣಗಳಿವೆ ಮನುಷ್ಯನ ಜೀವನ ದುಃಸ್ಥಿತಿಗೆ ತಲುಪಲು! ಬನ್ನಿ ಈ ಬಗ್ಗೆ ಸ್ವಲ್ಪ ಚರ್ಚಿಸೋಣ.

ಇಂದು ಹಣದುಬ್ಬರ ಎನ್ನುವುದು ಬಹುದೊಡ್ಡ ಸಮಸ್ಯೆಯಾಗಿ ಕೂತಿದೆ. ಪ್ರತಿಯೊಂದರ ಬೆಲೆಯೂ ಗಗನಕ್ಕೇರುತ್ತಿದೆ. ಗೃಹೋಪಯೋಗಿ ವಸ್ತುಗಳ ಜೊತೆಗೆ ಕಂಪ್ಯೂಟರ್ ಒಳಗೊಂಡ ಹಲವು ಎಲೆಕ್ಟ್ರಾನಿಕ್ ವಸ್ತುಗಳೂ ಹೂಡ ಸಾಕಷ್ಟು ದುಬಾರಿಯಾಗಿವೆ. ದುಡಿಮೆ ಕಡಿಮೆ, ಖರ್ಚು ಜಾಸ್ತಿ ಎನ್ನುವಂತಾಗಿದೆ. ಹೀಗಾಗೈ ಜನರಿಗೆ ಬದುಕು ನಡೆಸುವುದಕ್ಕೂ ಕಷ್ಟವಾಗುತ್ತಿದೆ.

ಇನ್ನು ಇಂಧನ ಬೆಲೆಯನ್ನು ನೋಡುವುದಾದರೆ, ವಾಹನವನ್ನು ಬಳಸುವುದರಿಂದ ಹಿಡಿದು ಕಾರ್ಖಾನೆ ನಡೆಸುವವರು ಕೂಡ ತಲೆಮೇಲೆ ಕೈಹೊತ್ತು ಕೂತಿದ್ದಾರೆ. ಖರ್ಚಿಗೆ ತಕ್ಕ ಸಂಭಾವನೆಯೂ ಸಿಗದೆ ಇಂಧನದ ಬೆಲೆಯೂ ಹೆಚ್ಚಿದ್ದಕ್ಕೆ ಸಂಕಷ್ಟ ಎದುರಿಸುತ್ತಿದ್ದಾರೆ. ಸಾಂಕ್ರಾಮಿಕ ರೋಗದ ಆರಂಭದಲ್ಲಿ ತೈಲದ ಬೇಡಿಕೆ ಕಡಿಮೆಯಾಗಿತ್ತು, ಆದರೆ ತೈಲ ಬೆಲೆ ಮಾತ್ರ ವೇಗವಾಗಿ ಏರಿಕೆಯಾಗುತ್ತಿದೆ. ಅಮೆರಿಕ, ಯುಕೆ, ಇಯು ಸೇರಿದಂತೆ ಎಲ್ಲ ಕಡೆ ತೈಲ ಬೆಲೆ ಏರಿಕೆ ಆಯಾ ದೇಶದ ಆರ್ಥಿಕತೆಯ ಮೇಲೆ ಹೆಚ್ಚು ಪರಿಣಾಮ ಬೀರಿದೆ.

ಇನ್ನು ನಿತ್ಯ ಗೃಹೋಪಯೋಗಿ ವಸ್ತುಗಳ ಬೆಲೆಯ ಏರಿಕೆಯ ಹಿನ್ನೆಲೆಯಲ್ಲಿ ಮಹಿಳೆಯರೂ ಸಂಕಷ್ಟ ಎದುರಿಸುತ್ತಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಹಲವರು ಮನೆಯಲ್ಲಿ ಕುಳಿತರು. ಮಾರುಕಟ್ಟೆ ಸ್ಥಬ್ಧವಾಯಿತು. ಇದರಿಂದ ಯಾವುದೇ ವಸ್ತುವಿನ ಬೇಡಿಕೆ ಹಾಗೂ ಪೂರೈಕೆ ಕಡಿಮೆಯಾಯಿತು. ಅಷ್ಟೇ ಅಲ್ಲ, ರೆಸ್ಟೋರೆಂಟ್ ಮತ್ತು ಆಹಾರ ಉದ್ಯಮದ ಮೇಲೂ ಹೊಡೆತ ಬಿತ್ತು. ಜೊತೆಗೆ ಹಲವು ಕಾರ್ಖಾನೆಗಳು ಕೆಲಸವನ್ನು ನಿಲ್ಲಿಸಿದವು, ಪರಿಣಾಮವಾಗಿ ಕಚ್ಚಾವಸ್ತುಗಳ ಪೂರೈಕೆ ಸರಿಯಾಗಿ ಆಗಲಿಲ್ಲ. ಪ್ಲಾಸ್ಟಿಕ್, ಕಾಂಕ್ರೀಟ್, ಸ್ಟೀಲ್ ಇತ್ಯಾದಿಗಳ ಬೆಲೆಗಳು ಏರಿಕೆಯಾಗಲು ಇವೇ ಕಾರಣವಾದವು.

ಒಂದು ಕಡೆ ತೈಲ ಬೆಲೆ ಏರಿಕೆಯಾದರೆ, ಈ ಕಡೆ ವಿಶದಾದ್ಯಂತ ಹಡಗು ಕಂಪನಿಗಳು ಕೂಡ ಕೊರೊನಾ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದವು. ಸರಕು ಸಾಗಣೆ ಸ್ಥಗಿತಗೊಂಡಿತ್ತು. ಇದರಿಂದಾಗಿ ಹಡಗು ವ್ಯಾಪಾರದಲ್ಲಿ ವ್ಯತ್ಯಯವಾಯಿತು. ಜೊತೆಗೆ ಚಿಲ್ಲರೆವ್ಯಾಪಾರಿಗಳ ಮೆಲೂ ಲಾಕ್ಡೌನ್ ಪರಿಣಾಮ ಬೀರಿತು. ಹಡಗು ಕಂಪನಿಗಳು ಮಾತ್ರವಲ್ಲದೇ ವಾಯು ಮತ್ತು ರಸ್ತೆ ಸಾರಿಗೆಯಲ್ಲಿಯೂ ಆರ್ಥಿಕ ನಷ್ಟ ಹೆಚ್ಚಾಯಿತು.

ಇನ್ನು ಇದೆಲ್ಲವುದರ ಪರಿಣಾಮ ಸೇರವಾಗಿ ಆಗಿದ್ದು ಕಾರ್ಮಿಕರ ಮೇಲೆ. ಅದೆಷ್ಟೋ ಜನ ಉದ್ಯೋಗವನ್ನು ಕಳೆದುಕೊಂಡರು. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಾಗ ಕಂಪನಿಗಳು ಉದ್ಯೋಗಿಗಳಿಲ್ಲದೇ ಪರದಾಡುವಂತಾಯಿತು. ಇದೀಗ ಹಲವು ಕಂಪನಿಗಳು ಭತ್ಯೆ ಹೆಚ್ಚಿಸಿದರೂ ಹೊಸ ಕಾರ್ಮಿಕರ ನೇಮಕಾತಿಯಲ್ಲೂ ಕಂಪನಿಗಳು ಸಮಸ್ಯೆಯನ್ನು ಎದುರಿಸುತ್ತಿವೆ. ಇನ್ನು ಜಗತ್ತಿನಲ್ಲಿ ಉಂಟಾಗುತ್ತಿರುವ ಹವಾಮಾನ ಬದಲಾವಣೆ, ಪ್ರಕೃತಿ ವಿಕೋಪಗಳು ಕೂಡ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿವೆ. ಇದೂ ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ. ನೋಡಿದ್ರಲ್ಲ, ಸ್ನೇಹಿತರೆ, ಒಂದರ ಹಿಂದೆ ಒಂದರಂತೆ ನಮ್ಮ ಮೇಲೆ ಬೀಳುತ್ತಿರುವ ಒತ್ತಡಗಳು, ಸಮಸ್ಯೆಗಳು ನಾವು ಹಲವು ತೊಂದರೆಗಳನ್ನು ಅನುಭವಿಸುವಂತೆ ಮಾಡಿದೆ. ಇದರಿಂದ ಆಚೆ ಬಂದು ಮತ್ತೆ ಜೀವನವನ್ನು ಸರಿಯಾಗಿ ರೂಪಿಸಿಕೊಳ್ಳುವುದಷ್ಟೇ ನಮ್ಮ ಮುಂದಿರುವ ಸವಾಲು!