ಹರಾಜಿನಲ್ಲಿ ಇವರನ್ನು ಕೊಂಡರೆ ಆರ್ಸಿಬಿ ಗೆ ಕಪ್ ಫಿಕ್ಸ್, ಅಭಿಮಾನಿಯೊಬ್ಬ ಕಟ್ಟಿದ ಹನ್ನೊಂದರ ಬಲಿಷ್ಠ ಬಳಗ ಹೇಗಿದೆ ಗೊತ್ತೇ?? ಭರ್ಜರಿ ತಂಡ ಹೇಗಿದೆ ಗೊತ್ತೇ??

ಹರಾಜಿನಲ್ಲಿ ಇವರನ್ನು ಕೊಂಡರೆ ಆರ್ಸಿಬಿ ಗೆ ಕಪ್ ಫಿಕ್ಸ್, ಅಭಿಮಾನಿಯೊಬ್ಬ ಕಟ್ಟಿದ ಹನ್ನೊಂದರ ಬಲಿಷ್ಠ ಬಳಗ ಹೇಗಿದೆ ಗೊತ್ತೇ?? ಭರ್ಜರಿ ತಂಡ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ನಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. ಆದರೇ ಇದುವರೆಗೂ ಚಾಂಪಿಯನ್ ಆಗಿಲ್ಲ. ಈ ಭಾರಿ ಆಟಗಾರರ ಮೆಗಾ ಹರಾಜು ನಡೆಯಲಿರುವ ಕಾರಣ, ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಂಡು ಈ ಭಾರಿಯಾದರೂ ಕಪ್ ಗೆಲ್ಲಲಿ ಎಂಬುದು ಅಭಿಮಾನಿಗಳ ಆಸೆ. ಈ ನಡುವೆ ಅಭಿಮಾನಿಯೊಬ್ಬ ತನ್ನ ಕನಸಿನ ಆರ್ಸಿಬಿಯ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದ್ದು, ಆ ತಂಡ ನೋಡಲು ಬಲಿಷ್ಠವಾಗಿ ಕಾಣುತ್ತಿದೆ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಸಮತೋಲನ ತುಂಬಿದ್ದು, ಆ ಹನ್ನೊಂದು ಆಟಗಾರರ ತಂಡ ಸಖತ್ ವೈರಲ್ ಆಗಿದೆ. ಬನ್ನಿ ಆ ತಂಡದಲ್ಲಿ ಸ್ಥಾನ ಪಡೆದ ಆಟಗಾರರು ಯಾರು ಎಂದು ತಿಳಿಯೋಣ.

ಆರ್ಸಿಬಿಯ ಈ ತಂಡದ ಆರಂಭಿಕರಾಗಿ ದೇವದತ್ ಪಡಿಕಲ್ ಹಾಗೂ ಇಂಗ್ಲೆಂಡ್ ನ ಜಾನಿ ಬೈರಸ್ಟೋ ಇದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಇದ್ದರೇ, ನಾಲ್ಕನೇ ಕ್ರಮಾಂಕದಲ್ಲಿ ಮನೀಶ್ ಪಾಂಡೆ ಇದ್ದು ಅವರು ಈ ತಂಡದ ನಾಯಕರಾಗಿದ್ದಾರೆ. ಐದನೇ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸವೆಲ್ ಇದ್ದರೇ,ಆರನೇ ಕ್ರಮಾಂಕದಲ್ಲಿ ಕನ್ನಡಿಗ ಅಭಿನವ್ ಮನೋಹರ್ ಸ್ಥಾನ ಪಡೆದಿದ್ದಾರೆ. ಏಳನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಮಿಚೆಲ್ ಮಾರ್ಷ್ ಇದ್ದರೇ, ಎಂಟನೇ ಕ್ರಮಾಂಕದಲ್ಲಿ ಹರ್ಷಲ್ ಪಟೇಲ್ ಸ್ಥಾನ ಪಡೆದಿದ್ದಾರೆ.

ಒಂಬತ್ತನೇ ಕ್ರಮಾಂಕದಲ್ಲಿ ಲೂಕಿ ಫರ್ಗುಸನ್, ಹತ್ತು ಹಾಗೂ ಹನ್ನೊಂದರಲ್ಲಿ ಸಿರಾಜ್ ಹಾಗೂ ಚಾಹಲ್ ಸ್ಥಾನ ಪಡೆದಿದ್ದಾರೆ. ತಂಡದಲ್ಲಿ ಐವರು ತಜ್ಞ ಬ್ಯಾಟ್ಸಮನ್ ಗಳು, ಇಬ್ಬರೂ ಆಲ್ ರೌಂಡರ್ ಗಳು ಹಾಗೂ ನಾಲ್ವರು ತಜ್ಞ ಬೌಲರ್ ಗಳಿದ್ದಾರೆ. ತಂಡದ ನಾಯಕರಾಗಿ ಮನೀಷ್ ಪಾಂಡೆ ಇದ್ದಾರೆ. ಹೀಗೆ ಆರ್ಸಿಬಿ ತಂಡ ರಚಿಸಿದರೇ , ಅಭಿಮಾನಿಗಳ ಕಪ್ ಗೆಲ್ಲುವ ಆಸೆಗೆ ಜೀವ ಬರಬಹುದು. ಅದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ. ಒಟ್ಟಾರೆಯಾಗಿ ತಂಡ ಇಂತಿದೆ : ಜಾನಿ ಬೈರ್ಸ್ಟೋ, ದೇವದತ್ ಪಡಿಕಲ್, ವಿರಾಟ್ ಕೊಹ್ಲಿ, ಮನೀಷ್ ಪಾಂಡೆ, ಗ್ಲೆನ್ ಮ್ಯಾಕ್ಸವೆಲ್, ಅಭಿನವ್ ಮನೋಹರ್, ಮಿಚೆಲ್ ಮಾರ್ಷ್, ಹರ್ಷಲ್ ಪಟೇಲ್, ಲೂಕಿ ಫರ್ಗುಸನ್, ಮಹಮದ್ ಸಿರಾಜ್, ಯುಜವೇಂದ್ರ ಚಾಹಲ್.