ತಿಂಗಳಿಗೆ ಬರೋಬ್ಬರಿ 55 ಸಾವಿರ ರೂಪಾಯಿ ಸಂಬಳದ ಕೆಲಸ: ಖಾಲಿಇದೆ 247 ಹುದ್ದೆಗಳು ಇಂದೇ ಅರ್ಜಿ ಹಾಕಿ. ಅರ್ಹತೆಯೇನು ಹಾಗೂ ಎಲ್ಲಿ ಗೊತ್ತೇ??

ತಿಂಗಳಿಗೆ ಬರೋಬ್ಬರಿ 55 ಸಾವಿರ ರೂಪಾಯಿ ಸಂಬಳದ ಕೆಲಸ: ಖಾಲಿಇದೆ 247 ಹುದ್ದೆಗಳು ಇಂದೇ ಅರ್ಜಿ ಹಾಕಿ. ಅರ್ಹತೆಯೇನು ಹಾಗೂ ಎಲ್ಲಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಉದ್ಯೋಗದ ಅಗತ್ಯತೆಯನ್ನು ವುದು ಎಲ್ಲದಕ್ಕಿಂತ ಹೆಚ್ಚಾಗಿದೆ ಎಂದರೆ ನಂಬಲೇಬೇಕು. ತಮ್ಮ ಬದುಕಿನ ಅಗತ್ಯತೆಗಳನ್ನು ಪೂರೈಸುವಲ್ಲಿ ಕೆಲಸದ ಸಂಬಳ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಇಂದು ನಾವು ಕೂಡ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನ ಕೆಲವು ಹುದ್ದೆಗಳ ಓಪನಿಂಗ್ ಪ್ರಾರಂಭವಾಗಿದ್ದು ಅದರ ವಿವರಗಳನ್ನು ತಿಳಿಸಲು ಹೊರಟಿದ್ದೇವೆ.

Follow us on Google News

ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಯ ಪ್ರಾಜೆಕ್ಟ್ ಇಂಜಿನಿಯರ್ ಟ್ರೈನಿ ಆಫೀಸರ್ ಹಾಗೂ ಟ್ರೈನಿ ಇಂಜಿನಿಯರ್ ಹುದ್ದೆಗಳಲ್ಲಿ 247 ಸ್ಥಾನಗಳು ಖಾಲಿ ಇದ್ದು ನೀವು ಬಿಇ ಬಿಟೆಕ್ ವಿದ್ಯಾರ್ಹತೆಯನ್ನು ಹೊಂದಿದ್ದರೆ ನಿಮಗಾಗಿ ಈ ಹುದ್ದೆಗಳು ಖಾಲಿ ಇವೆ ಎಂದು ಹೇಳಬಹುದು. ಆದರೆ ಇಲ್ಲಿ ಕೆಲವೊಂದು ಅಂಶಗಳನ್ನು ಫಾಲೋ ಮಾಡಬೇಕಾಗುತ್ತದೆ. ಈ ಆಯ್ಕೆ ಪ್ರಕ್ರಿಯೆ ಹಾಗೂ ಹುದ್ದೆಗಳ ಕುರಿತಂತೆ ಎಲ್ಲಾ ವಿವರಗಳನ್ನು ನಾವು ನೀಡುತ್ತೇವೆ ತಪ್ಪದೆ ಕೊನೆಯವರೆಗೂ ಲೇಖನಿಯನ್ನು ಓದಿ. ಇಲ್ಲಿ ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗಾಗಿ 67 ಸ್ಥಾನಗಳು ಟ್ರೇನಿ ಎಂಜಿನಿಯರ್ ಹುದ್ದೆಗಾಗಿ 169 ಸ್ಥಾನಗಳು ಟ್ರೇನಿ ಆಫೀಸರ್ ಹುದ್ದೆಗಾಗಿ 11 ಸ್ಥಾನಗಳಿವೆ. ಹುದ್ದೆಗಾಗಿ ಅರ್ಜಿ ಸಲ್ಲಿಸುವಂತೆ ಅಭ್ಯರ್ಥಿಗಳು ತಪ್ಪದೇ ಸರ್ಕಾರದಿಂದ ಮಾನ್ಯವಾಗಿರುವ ವಿದ್ಯಾಲಯ ಸಂಸ್ಥೆಗಳಿಂದ ಬಿಇ ಅತವಾ ಬಿಟೆಕ್ ಅಥವಾ ಬಿಎಸ್ಸಿ ಪದವಿಯನ್ನು ಪಡೆದಿರಬೇಕು. ಪ್ರಾಜೆಕ್ಟ್ ಇಂಜಿನಿಯರ್ ವಯೋಮಿತಿ 32 ವರ್ಷ ಹಾಗೂ ಟ್ರೈನಿ ಇಂಜಿನಿಯರ್ ಮತ್ತು ಟ್ರೈನಿ ಆಫೀಸರ್ ವಯೋಮಿತಿ 28 ವರ್ಷ. ಕೆಲಸದ ಸ್ಥಳ ಬೆಂಗಳೂರು ಆಗಿರುತ್ತದೆ.

ಇನ್ನು ವೇತನದ ಬಗ್ಗೆ ಹೇಳುವುದಾದರೆ ಈ ಮೂರು ವಿಭಾಗದಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 33 ಸಾವಿರ ರೂಪಾಯಿಯಿಂದ 55 ಸಾವಿರ ರೂಪಾಯಿವರೆಗೆ ವೇತನ ದೊರೆಯುತ್ತದೆ. ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ ಜನವರಿ 21ರಿಂದ ಪ್ರಾರಂಭವಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 14. ಆಯ್ಕೆ ಪ್ರಕ್ರಿಯೆ ಎನ್ನುವುದು ದಾಖಲಾತಿ ಪರಿಶೀಲನೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ನಡೆಯಲಿದೆ. ಇನ್ನು ಅರ್ಜಿಯ ಶುಲ್ಕ ಕೂಡ ಇದರಲ್ಲಿ ಅಡಕವಾಗಿದೆ. ಟ್ರೈನಿಯ ಎಂಜಿನಿಯರ್ ಹುದ್ದೆಗೆ ಸಾಮಾನ್ಯ, ಒಬಿಸಿ & EWS ಅಭ್ಯರ್ಥಿಗಳು 200 ರೂ. ಅರ್ಜಿ ಶುಲ್ಕ ಕಟ್ಟಬೇಕು. ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ರವರಿಗೆ ಯಾವುದೇ ಶುಲ್ಕವಿಲ್ಲ. ಪ್ರಾಜೆಕ್ಟ್ ಇಂಜಿನಿಯರಿಂಗ್ ಹುದ್ದೆಗೂ ಕೂಡ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಯಾವುದೇ ಶುಲ್ಕವಿಲ್ಲ ಉಳಿದವರು ಐನೂರು ರೂಪಾಯಿಯನ್ನು ಕಟ್ಟಬೇಕು. ಹೆಚ್ಚಿನ ಮಾಹಿತಿಗಾಗಿ ಬಿಇಎಲ್(BEL)​ನ ಅಧಿಕೃತ ವೆಬ್​ಸೈಟ್ ಗೆ ಭೇಟಿ ನೀಡಿ.