ತಮ್ಮ ದೇಶಿ ತಂಡಕ್ಕೆ ಕೈಕೊಟ್ಟು ಐಪಿಎಲ್ ನಲ್ಲಿ ಭಾಗವಹಿಸುತ್ತಿರುವ ಏಳು ಆಸೀಸ್ ಆಟಗಾರರು ಯಾರು ಗೊತ್ತೇ?? ಮ್ಯಾಕ್ಸ್ವೆಲ್ ಕಥೆಯೇನು??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲಾ ತಿಳಿದಿರುವಂತೆ ಐಪಿಎಲ್ ನ ಮುಂದುವರಿದ ಚರಣ ಇದೇ ಸೆಪ್ಟೆಂಬರ್ 19 ರಿಂದ ಯು.ಎ.ಇ ಯಲ್ಲಿ ನಡೆಯಲಿದೆ. ಆದರೇ ಈ ಮುಂದುವರಿದ ಚರಣಕ್ಕೆ ಹಲವಾರು ವಿದೇಶಿ ಆಟಗಾರರು ಭಾಗವಹಿಸುವ ಸಾಧ್ಯತೆ ಬಹಳ ಕಡಿಮೆ ಎಂದು ಈ ಹಿಂದೆ ವರದಿ ಮಾಡಲಾಗಿತ್ತು. ಕಾರಣ ಅದೇ ಸಮಯದಲ್ಲಿ ಹಲವು ಕ್ರಿಕೇಟ್ ಟೂರ್ನಿಗಳು ಆಯೋಜಿತವಾಗಿದ್ದವು.

ಅದಲ್ಲದೇ ಪ್ರತಿ ಐಪಿಎಲ್ ತಂಡದಲ್ಲಿಯೂ ನಿರ್ಣಾಯಕರಾಗಿದ್ದ ಆಸ್ಟ್ರೇಲಿಯಾ ತಂಡದ ಆಟಗಾರರು ಆ ಸಮಯದಲ್ಲಿ ಬಾಂಗ್ಲಾ ಹಾಗೂ ವೆಸ್ಟ್ ಇಂಡಿಸ್ ತಂಡದ ಜೊತೆ ಆಡುವುದಕ್ಕೆ ತಂಡವನ್ನ ಸಹ ಘೋಷಿಸಲಾಗಿತ್ತು. ಆದರೇ ಈಗ ಇದಕ್ಕೆ ಒಂದು ದೊಡ್ಡ ಟ್ವಿಸ್ಟ್ ದೊರೆತಿದ್ದು, ಆಸ್ಟ್ರೇಲಿಯಾದ 7 ಸ್ಟಾರ್ ಆಟಗಾರರು, ತಮ್ಮನ್ನು ಈ ಪ್ರವಾಸದಿಂದ ಕೈ ಬಿಡಿ ಎಂದು ಆಸ್ಟ್ರೇಲಿಯಾ ಕ್ರಿಕೇಟ್ ಬೋರ್ಡ್ ಗೆ ಲಿಖಿತ ರೂಪದ ಮನವಿ ಮಾಡಿ ಕೊಂಡಿದ್ದಾರೆ. ಅದನ್ನ ಕ್ರಿಕೇಟ್ ಆಸ್ಟ್ರೇಲಿಯಾ ಸಹ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಆ ಏಳು ಸ್ಟಾರ್ ಆಟಗಾರರು ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರವೆಂದರೇ, ಪ್ಯಾಟ್ ಕಮಿನ್ಸ್, ಗ್ಲೆನ್ ಮ್ಯಾಕ್ಸವೆಲ್, ಡೇವಿಡ್ ವಾರ್ನರ್,ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೋಯಿನಿಸ್, ಜೈ ರಿಚರ್ಡಸನ್, ಕೇನ್ ರಿಚರ್ಡಸನ್. ಈ ಏಳು ಆಟಗಾರರು ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು,ಡೆಲ್ಲಿ ಕ್ಯಾಪಿಟಲ್ಸ್, ಸನರೈಸರ್ಸ್ ಹೈದರಾಬಾದ್,ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್ ತಂಡದ ಜೊತೆ ಗುರುತಿಸಿಕೊಂಡಿದ್ದು, ಐಪಿಎಲ್ ನ ಮುಂದುವರಿದ ಚರಣದಲ್ಲಿ ಆಡಲು, ಸ್ವದೇಶಿ ಸೇವೆಯಿಂದ ಹಿಂದೆ ಸರಿದಿದ್ದಾರೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ. ಆದರೇ ಐಪಿಎಲ್ ನ ಫ್ರಾಂಚೈಸಿಗಳಿಗೆ ಈ ವಿಷಯ ಖುಷಿ ಕೊಟ್ಟಿದ್ದು, ಆಸೀಸ್ ಆಟಗಾರರನ್ನ ಸ್ವಾಗತಿಸಲು ಕಾತರದಿಂದ ಕಾಯುತ್ತಿವೆ. ಈ ಏಳು ಆಸೀಸ್ ಆಟಗಾರರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.