ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಗೆ ನ್ಯೂಜಿಲೆಂಡ್ ತಂಡ ಪ್ರಕಟ – ಯಾರ್ಯಾರು ಸ್ಥಾನ ಪಡೆದಿದ್ದಾರೆ ಗೊತ್ತಾ??
ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಗೆ ನ್ಯೂಜಿಲೆಂಡ್ ತಂಡ ಪ್ರಕಟ – ಯಾರ್ಯಾರು ಸ್ಥಾನ ಪಡೆದಿದ್ದಾರೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ಇಂಗ್ಲೆಂಡ್ ನೆಲದಲ್ಲೇ ಅದ್ಭುತ ಸರಣಿ ಜಯಿಸಿದ ನ್ಯೂಜಿಲೆಂಡ್ ತಂಡ ಈಗ ಮಹತ್ವದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಬಲಿಷ್ಠ ತಂಡ ಪ್ರಕಟಿಸಿದೆ. ಇದೇ ಜೂನ್ 18 ರಿಂದ ಆರಂಭವಾಗುವ ಭಾರತದೆದುರಿನ ಪಂದ್ಯಕ್ಕೆ ಅದ್ಭುತ ತಯಾರಿ ನಡೆಸಿರುವ ನ್ಯೂಜಿಲೆಂಡ್ ತಂಡ ಗೆಲ್ಲುವ ಫೇವರೀಟ್ ಎನಿಸಿದೆ. ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ 6 ಜನ ಆಟಗಾರರನ್ನು ತಂಡದಿಂದ ಕೈ ಬಿಟ್ಟು 15 ಆಟಗಾರರ ಹೊಸ ತಂಡ ಪ್ರಕಟಿಸಿದೆ.
ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ತಂಡದಲ್ಲಿದ್ದ ಡೊಗ್ ಬ್ರೇಸ್ವೆಲ್, ಜಾಕೊಬ್ ಡಪ್ಫಿ, ಡೆರಿಯಲ್ ಮಿಷೆಲ್, ರಾಚಿನ್ ರವೀಂದ್ರ, ಮಿಷೆಲ್ ಸ್ಯಾಂಟರ್ ಅವರನ್ನು ಕೈಬಿಡಲಾಗಿದೆ. ಏಡಗೈ ಸ್ಪಿನ್ನರ್ ರಾಚಿನ್ ರವೀಂದ್ರರನ್ನ ಡಾರ್ಕ್ ಹಾರ್ಸ್ ಥರ ಭಾರತದ ವಿರುದ್ದದ ಪಂದ್ಯದಲ್ಲಿ ಬಳಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೇ ಈಗ ಅವರನ್ನ ಆಯ್ಕೆಗೆ ಪರಿಗಣಿಸಿಲ್ಲ. ಸದ್ಯ ಅಜಯ್ ಪಟೇಲ್ ಮಾತ್ರ ತಂಡದಲ್ಲಿರುವ ಪರಿಣಿತ ಸ್ಪಿನ್ನರ್ ಆಗಿದ್ದಾರೆ.
ಪದಾರ್ಪಣೆ ಪಂದ್ಯದಲ್ಲೇ ದ್ವಿಶತಕ ಭಾರಿಸಿದ್ದ ಡೇವೊಲ್ ಕಾನ್ ವೇ ಸ್ಥಾನ ಗಳಿಸಿದ್ದಾರೆ. 15 ಸದಸ್ಯರ ನ್ಯೂಜಿಲೆಂಡ್ ತಂಡ ಹೀಗಿದೆ.ಕೇನ್ ವಿಲಿಯಮ್ಸ್ (ನಾಯಕ), ಟಾಂ ಬ್ಲಂಡೆಲ್ (ವಿಕೆಟ್ ಕೀಪರ್), ಟ್ರೆಂಟ್ ಬೌಲ್ಟ್, ಡೆವೊನ್ ಕಾನ್ವೆ, ಕೊಲಿನ್ ಡೆ ಗ್ರ್ಯಾಂಡ್ಹೋಮ್, ಮ್ಯಾಟ್ ಹೆನ್ರಿ, ಕೇಯ್ಲ್ ಜ್ಯಾಮಿಸನ್, ಟಾಮ್ ತಥಾಂ, ಹೆನ್ರಿ ನಿಕೊಲಸ್, ಅಜಯ್ ಪಟೇಲ್, ಟಿಮ್ ಸೌಥೀ, ರೋಸ್ ಟೇಲರ್, ನೀಲ್ ವ್ಯಾಗ್ನರ್, ಬಿಜೆ ವಾಲ್ಟಿಂಗ್ ಮತ್ತು ವಿಲ್ ಯಂಗ್. ಇನ್ನು ಸೌತಾಂಪ್ಟನ್ ನಲ್ಲಿ ಪಂದ್ಯಕ್ಕೆ ಮಳೆ ಕಾಟ ಎದುರಾಗಿದ್ದು, ವರುಣದೇವ ಕೃಪೆ ತೋರಲಿ ಎಂದು ಈಗ ಎರಡು ದೇಶದ ಅಭಿಮಾನಿಗಳು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.