ಕೊನೆಗೂ ಬಯಲಾಯಿತು ಟೆಸ್ಟ್ ಗೆ ರಾಹುಲ್, ಮಾಯಾಂಕ್ ಸೇರಿದಂತೆ ಉಳಿದ ಆಟಗಾರರು ಹೊರಗುಳಿಯಲು ಕಾರಣ, ಏನಂತೆ ಗೊತ್ತಾ?
ಕೊನೆಗೂ ಬಯಲಾಯಿತು ಟೆಸ್ಟ್ ಗೆ ರಾಹುಲ್, ಮಾಯಾಂಕ್ ಸೇರಿದಂತೆ ಉಳಿದ ಆಟಗಾರರು ಹೊರಗುಳಿಯಲು ಕಾರಣ, ಏನಂತೆ ಗೊತ್ತಾ?
ನಮಸ್ಕಾರ ಸ್ನೇಹಿತರೇ ಕ್ರಿಕೆಟ್ ಅಂದರೆ ಹಾಗೆ ಅದು ಬಂದರೆ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಈಗಂತೂ ಏಕದಿನ ಹಾಗೂ ಟಿ-ಟ್ವೆಂಟಿ ಪಂದ್ಯಗಳ ಹಾಗೆ ಟೆಸ್ಟ್ ಪಂದ್ಯಗಳು ಕೂಡ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಅಲ್ಲದೇ ಈಗ ಇದೇ ಜೂನ್ 18ರಂದು ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನ ಫೈನಲ್ ಪಂದ್ಯಾಟಗಳು ಪ್ರಾರಂಭವಾಗಲು ಇನ್ನೇನು ಕ್ಷಣಗಣನೆ ಆರಂಭವಾಗಲಿದೆ. ಈ ಹಂತದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಉಭಯ ತಂಡಗಳು ಸಹ ತಮ್ಮ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದ ಆಟಗಾರರ ಪಟ್ಟಿ ಆಶ್ಚರ್ಯವನ್ನು ಉಂಟು ಮಾಡದಿದ್ದರೂ ಸಹ 5 ಆಟಗಾರರು ತಂಡದಿಂದ ಹೊರಗುಳಿದಿರುವ ಕುರಿತಂತೆ ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿದೆ. ಬನ್ನಿ ನೋಡೋಣ ಹಾಗಾದ್ರೆ 5 ಆಟಗಾರರು ಯಾರೆಂದು.
ಮೊದಲನೆಯದಾಗಿ ಶಾರ್ದುಲ್ ಠಾಕೂರ್ ಭಾರತದ ಭರವಸೆಯ ವೇಗದ ಬೌಲರ್ ಆಗಿದ್ದ ಶಾರ್ದುಲ್ ಠಾಕೂರ್ ಅವರು ಈ ಬಾರಿಯ ಆಟಗಾರರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಬೌಲಿಂಗ್ ಜೊತೆಗೆ ಬ್ಯಾಟಿಂಗನ್ನು ಕೂಡ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ತಮ್ಮ ಯೋಗದಾನವನ್ನು ನೀಡುತ್ತಿದ್ದ ಶಾರ್ದುಲ್ ಠಾಕೂರ್ ರವರು ತಂಡದಿಂದ ಹೊರಬಿದ್ದಿದ್ದಾರೆ.
ಇನ್ನು ಎರಡನೆಯದಾಗಿ ವಾಶಿಂಗ್ಟನ್ ಸುಂದರ್ ಆಸ್ಟ್ರೇಲಿಯಾ ಹಾಗೂ ಭಾರತ ಸರಣಿಯಲ್ಲಿ ತಮ್ಮ ಆಲ್-ರೌಂಡರ್ ಪ್ರದರ್ಶನವನ್ನು ನೀಡಿದ್ದ ವಾಷಿಂಗ್ಟನ್ ಸುಂದರ್ ರವರು ಕೂಡ ಈ ತಂಡದಿಂದ ಹೊರಬಿದ್ದಿದ್ದಾರೆ. ಇದು ಸಹಜವಾಗಿಯೇ ಆಗಿದೆ ಏಕೆಂದರೆ ಕೊನೆಯ ಬಾರಿ ರವಿಚಂದ್ರನ್ ಅಶ್ವಿನ್ ರವರ ಬ್ಯಾಕ್ ಅಪ್ ಇವರನ್ನು ಆಯ್ಕೆ ಮಾಡಲಾಗಿತ್ತು. ಒಂದೊಮ್ಮೆ ಅಶ್ವಿನ್ ರವರು ಗಾಯಾಳುವಾದ ರೆ ವಾಷಿಂಗ್ಟನ್ ಸುಂದರ್ ರವರಿಗೆ ಅವಕಾಶವನ್ನು ಮುಂದಿನ ದಿನಗಳಲ್ಲಿ ನೀಡಬಹುದು
ಇನ್ನು ಮೂರನೆಯದಾಗಿ ಅಕ್ಷರ ಪಟೇಲ್ ಐಪಿಎಲ್ ನ ಅದ್ಭುತ ಪ್ರದರ್ಶನದ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದ ಇವರು ಕಳೆದ ಆಸ್ಟ್ರೇಲಿ ಹಾಗೂ ಭಾರತ ಸರಣಿಯಲ್ಲಿ ಕೂಡ ಗಮನಾರ್ಹ ಪ್ರದರ್ಶನವನ್ನು ನೀಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಈಗಾಗಲೇ ತಂಡದಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಸ್ಪಿನ್ನರ್ಸ್ ಇರುವುದರಿಂದ ಅಕ್ಷರ ಪಟೇಲ್ ರವರಿಗೆ ಬಿಸಿಸಿಐನ ಆಯ್ಕೆಗಾರರು ಮಣಿ ಹಾಕಿಲ್ಲ. ಕೇವಲ ಬೌಲಿಂಗ್ನಲ್ಲಿ ಮಾತ್ರವಲ್ಲದೆ ತಮ್ಮ ಬ್ಯಾಟ್ ನ ಮೂಲಕ ಕೂಡ ರನ್ನುಗಳ ಹೊಳೆಯನು ಹರಿಸಿರುವ ಅಕ್ಷರ ಪಟೇಲ್ ರವರು ಮುಂದಿನ ದಿನಗಳಲ್ಲಿ ಯಾರಾದರೂ ಗಾಯವಾದರೆ ಅವರ ಸ್ಥಾನವನ್ನು ತುಂಬಬಲ್ಲ ಆಟಗಾರನಾಗಿ ಮುಂದೆ ಬರಬಹುದು.
ಇನ್ನು ನಾಲ್ಕನೆಯದಾಗಿ ಮಯಾಂಕ್ ಅಗರ್ವಾಲ್ ಇಲ್ಲಿಗೆ ಮತ್ತೊಬ್ಬ ಕನ್ನಡಿಗ ಕ್ರಿಕೆಟಿಗ ಕೂಡ ಸೇರಿಕೊಳ್ಳುತ್ತಾರೆ. ಮಯಾಂಕ್ ಅಗರ್ವಾಲ್ ರವರು ಪ್ರತಿಬಾರಿ ಬದಲಿ ಓಪನಿಂಗ್ ಬ್ಯಾಟ್ಸ್ ಮನ್ ಆಗಿ ತಂಡದಲ್ಲಿ ಉಳಿದುಕೊಂಡಿದ್ದಾರೆ. ಈಗಾಗಲೇ ರೋಹಿತ್ ಶರ್ಮ ಶುಭಮನ್ ಗಿಲ್ ಓಪನಿಂಗ್ ಕಾರ್ಯವನ್ನು ಮಾಡುತ್ತಿದ್ದಾರೆ. ಹೀಗಾಗಿ ಇವರಿಬ್ಬರಲ್ಲಿ ಯಾರಾದರೂ ಮುಂದಿನ ದಿನಗಳಲ್ಲಿ ಗಾಯಾಳುವಾಗಿ ಹಿಂದೆ ಹೋದರೆ ಮಾತ್ರ ಮಾಯಾಂಕ್ ಅಗರ್ವಾಲ್ ರವರು ಓಪನಿಂಗ್ ಸ್ಥಾನದಲ್ಲಿ ಬ್ಯಾಟನ್ನು ಬೀಸಬಹುದು.
ಇನ್ನು ಕೊನೆಯದಾಗಿ ಕೆ ಎಲ್ ರಾಹುಲ್ ಭಾರತದ ಸಂಕಷ್ಟ ಸಮಯದಲ್ಲಿ ಕ್ರೀಸ್ ಗೆ ಬಂದು ಬ್ಯಾಟ್ ಬೀಸಿ ಭಾರತವನ್ನು ಹಲವಾರು ಬಾರಿ ಗೆಲ್ಲಿಸಿದ ಇವರು ಈ ಬಾರಿ ಫೈನಲ್ ಪಂದ್ಯಾವಳಿಗೆ ಆಯ್ಕೆಯಾಗಿಲ್ಲ. ಕಾರಣ ಹಿಂದಿನ ಟೆಸ್ಟ್ ಮ್ಯಾಚುಗಳಲ್ಲಿ ಕಂಡು ಬಂದಂತಹ ಕಳಪೆ ಪ್ರದರ್ಶನ ಇರಬಹುದು. ಹೇಳಲಾಗುವುದಿಲ್ಲ ಮುಂದಿನ ದಿನಗಳಲ್ಲಿ ಕೆಲವು ಇಂಜುರಿ ಸಮಸ್ಯೆಯಿಂದ ಕೆ ಎಲ್ ರಾಹುಲ್ ಅವರು ತಂಡದಲ್ಲಿ ಸ್ಥಾನ ಪಡೆದರೂ ಪಡೆಯಬಹುದು.
ನೋಡಿದ್ರಲ್ಲ ಸ್ನೇಹಿತರೇ ಈಗಾಗಲೇ ಯಾವ ಯಾವ ಕ್ರಿಕೆಟಿಗರು ಫೈನಲ್ ಟೆಸ್ಟ್ ನಿಂದ ಹೊರಗುಳಿದಿದ್ದಾರೆ ಎಂದು ಹಾಗೂ ಅದರ ಕಾರಣಗಳು. ಈಗಾಗಲೇ ತಂಡಕ್ಕೆ ಆಯ್ಕೆಯಾಗಿರುವ ಎಂದರೆ ವಿರಾಟ್ ಕೊಹ್ಲಿ ರೋಹಿತ್ ಶರ್ಮ ಚೇತೇಶ್ವರ್ ಪೂಜಾರ್ ಶುಭಮನ್ ಗಿಲ್ ರವಿಚಂದ್ರನ್ ಅಶ್ವಿನ್ ರವೀಂದ್ರ ಜಡೇಜಾ ಮೊಹಮ್ಮದ್ ಸಿರಾಜ್ ಇಶಾಂತ್ ಶರ್ಮಾ ಮೊಹಮ್ಮದ್ ಶಮಿ ಜಸ್ಪ್ರೀತ್ ಬುಮ್ರಾ ಹೀಗೆ ಹಲವಾರು ಕ್ರಿಕೆಟಿಗರು ಈಗಾಗಲೇ 15 ಜನ ಕ್ರಿಕೆಟಿಗರ ಲಿಸ್ಟ್ ನಲ್ಲಿ ತಮ್ಮ ಸ್ಥಾನವನ್ನು ಖಾಯಂ ಮಾಡಿಕೊಂಡಿದ್ದಾರೆ. ಇದೇ ಜೂನ್ 18 ಅಂದರೆ ಮೂರು ದಿನಗಳಲ್ಲಿ ಟೆಸ್ಟ್ ಪಂದ್ಯಗಳು ಪ್ರಾರಂಭವಾಗಲಿದ್ದು ಭಾರತೀಯ ಕ್ರಿಕೆಟ್ ತಂಡ ಇದರ ಜಯಶಾಲಿಯಾಗಿ ಗೆದ್ದು ಇತಿಹಾಸ ನಿರ್ಮಿಸಲು ಎಂಬುದೇ ನಮ್ಮೆಲ್ಲರ ಆಶಯ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸಲ್ಲಿ ಕಾಮೆಂಟ್ ಮಾಡೋ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.