ತಿಂಡಿ ಮಾಡಲು ಸಮಯವಿಲ್ಲವೇ?? ಅಕ್ಕಿ ಹಿಟ್ಟಿನಿಂದ ಟ್ರೈ ಮಾಡಿ ಹೊಸ ತಿಂಡಿ, ಫಾಸ್ಟ್ ಮತ್ತು ಸಕ್ಕತ್ ರುಚಿ.

ತಿಂಡಿ ಮಾಡಲು ಸಮಯವಿಲ್ಲವೇ?? ಅಕ್ಕಿ ಹಿಟ್ಟಿನಿಂದ ಟ್ರೈ ಮಾಡಿ ಹೊಸ ತಿಂಡಿ, ಫಾಸ್ಟ್ ಮತ್ತು ಸಕ್ಕತ್ ರುಚಿ.

ನಮಸ್ಕಾರ ಸ್ನೇಹಿತರೇ, ಇಂದು ನಾವು ದಿಡೀರ್ ಆಗಿ ಮಾಡುವ ಹೊಸ ರೀತಿಯ ಅಕ್ಕಿಹಿಟ್ಟಿನ ಹೊಸ ತಿಂಡಿ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಅಕ್ಕಿ ಹಿಟ್ಟಿನ ಹೊಸ ತಿಂಡಿ ಮಾಡಲು ಬೇಕಾಗುವ ಸಾಮಗ್ರಿಗಳು: 2 ಬಟ್ಟಲು ಅಕ್ಕಿಹಿಟ್ಟು, ಕಾಲು ಬಟ್ಟಲು ಕ್ಯಾರೆಟ್ ತುರಿ, ಸ್ವಲ್ಪ ಶುಂಠಿ, 1 ಈರುಳ್ಳಿ, 1 ಹಸಿಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, 4 ಬಟ್ಟಲು ನೀರು( ಗೋಧಿಹಿಟ್ಟು ತೆಗೆದುಕೊಂಡಿರುವ ಬಟ್ಟಲಿನ ಅಳತೆ), ಸ್ವಲ್ಪ ಎಣ್ಣೆ, ಬಟರ್ ಪೇಪರ್.

ಅಕ್ಕಿ ಹಿಟ್ಟಿನ ಹೊಸ ತಿಂಡಿ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬಟ್ಟಲು ತೆಗೆದುಕೊಂಡು ಅದಕ್ಕೆ ಅಕ್ಕಿಹಿಟ್ಟು, ತುರಿದ ಕ್ಯಾರೆಟ್, ಜಜ್ಜಿದ ಸ್ವಲ್ಪ ಶುಂಠಿ, ಸಣ್ಣಗೆ ಹಚ್ಚಿದ ಈರುಳ್ಳಿ, ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿ, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ 4 ಬಟ್ಟಲು ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಮಿಶ್ರಣವನ್ನು ಹಾಕಿ 3 – 4 ನಿಮಿಷಗಳ ಕಾಲ ಫ್ರೈ ಮಾಡಿಕೊಂಡರೆ ಅದರಲ್ಲಿರುವ ನೀರಿನ ಅಂಶವು ಕಡಿಮೆಯಾಗುತ್ತದೆ( ಚಪಾತಿ ಹಿಟ್ಟಿನ ಹದಕ್ಕೆ ಬರುತ್ತದೆ). ನಂತರ ಇದನ್ನು ಉಗುರು ಬೆಚ್ಚಗೆ ಬರುವವರೆಗೂ ತಣ್ಣಗಾಗಲು ಬಿಡಿ. ನಂತರ ಇದಕ್ಕೆ ಸ್ವಲ್ಪ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಹಿಟ್ಟನ್ನು ಬಟರ್ ಪೇಪರ್ ಮೇಲೆ ಇಟ್ಟು ಕೈಯಲ್ಲಿ ಹೋಳಿಗೆ ತಟ್ಟುವ ಹಾಗೆ ತಟ್ಟಿ ಅಥವಾ ಒಂದು ತಟ್ಟೆಯ ಸಹಾಯದಿಂದ ವೃತ್ತಾಕಾರವಾಗಿ ತಟ್ಟಿಕೊಳ್ಳಿ. ನಂತರ ಒಂದು ಚಾಕುವನ್ನು ಉಪಯೋಗಿಸಿಕೊಂಡು ನಿಮಗೆ ಬೇಕಾದ ಆಕಾರವಾಗಿ ಕತ್ತರಿಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ತವಾವನ್ನು ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಕತ್ತರಿಸಿಕೊಂಡ ಪ್ಲೀಸ್ ಗಳನ್ನು ಇಟ್ಟು ಎರಡು ಬದಿಯಲ್ಲಿ ಫ್ರೈ ಮಾಡಿಕೊಂಡರೆ ಅಕ್ಕಿ ಹಿಟ್ಟಿನ ಹೊಸ ತಿಂಡಿ ಸವಿಯಲು ಸಿದ್ಧ.