ಅಂದು ದ್ರಾವಿಡ್ ! ಇಂದು ಕೆಎಲ್ ರಾಹುಲ್ ! ಧೋನಿ ಸೇರಿದಂತೆ ದಿಗ್ಗಜರು ಮಾಡದ ಸಾಧನೆಯನ್ನು 21 ವರ್ಷಗಳ ನಂತರ ಮಾಡಿದ ಕೆಎಲ್! ವಿಶೇಷವಾದ ದಾಖಲೆ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಭಾರತ ತಂಡವು ಮೂರನೇ ಪಂದ್ಯದಲ್ಲಿಯೂ ಸೋಲುವ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಸಂಪೂರ್ಣವಾಗಿ ಸರಣಿಯನ್ನು ಒಪ್ಪಿಸಿದೆ. ವಿದೇಶದಲ್ಲಿ ಹಲವಾರು ವರ್ಷಗಳ ನಂತರ ವೈಟ್ ವಾಶ್ ಮೂಲಕ ಸರಣಿ ಸೋತಿದೆ.

ಭಾರತ ಇದೀಗ ಏಕದಿನ ಸರಣಿ ಸೋತಿದ್ದರೂ ಕೂಡ ತಂಡದ ಮುಂದಿನ ಭವಿಷ್ಯದ ದೃಷ್ಟಿಯಿಂದ ಭಾರತ ತಂಡದ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ. ಯಾಕೆಂದರೆ ಯಾವ ಕ್ರಮಾಂಕದಲ್ಲಿ ಬೇಕಾದರೂ ಬ್ಯಾಟ್ ಬೀಸುವ ಸಾಮರ್ಥ್ಯವನ್ನು ಕೆಎಲ್ ರಾಹುಲ್ ರವರು ಕಳೆದ ಕೆಲವು ಪಂದ್ಯಗಳಿಂದ ನಿರೂಪಿಸಿದ್ದಾರೆ. ಇದೀಗ ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿರುವ ಕೆ ಎಲ್ ರಾಹುಲ್ ರವರು ಅಪರೂಪದ ವಿಶೇಷ ದಾಖಲೆಯನ್ನು ತನ್ನ ಹೆಸರಿಗೆ ಬಳಸಿಕೊಂಡಿದ್ದಾರೆ.

ಹೌದು ಕಳೆದ 21 ವರ್ಷಗಳ ಹಿಂದೆ ಅಂದರೆ 1999 ರಲ್ಲಿ ಭಾರತ ಕ್ರಿಕೆಟ್ ತಂಡದ ಗೋಡೆ ಎಂದೇ ಪ್ರಸಿದ್ದಿ ಪಡೆದುಕೊಂಡಿದ್ದ ರಾಹುಲ್ ದ್ರಾವಿಡ್ ರವರು, ಭಾರತೀಯ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಏಷ್ಯಾ ಖಂಡದ ಹೊರಗಡೆ ಶತಕ ಬಾರಿಸಿದ್ದರು. ಇದನ್ನು ಹೊರತು ಪಡಿಸಿದರೇ ಮತ್ಯಾವ ಕ್ರಿಕೆಟ್ ಆಟಗಾರರು ಕೂಡ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಂಡು ಶತಕವನ್ನು ಏಷ್ಯಾದಿಂದ ಹೊರಗಡೆ ಇಲ್ಲಿಯವರೆಗೂ ಹೊಡೆದಿರಲಿಲ್ಲ. ಲೆಜೆಂಡರಿ ಮಹೇಂದ್ರ ಸಿಂಗ್ ಧೋನಿ ರವರು ಕೂಡ ವಿದೇಶಗಳಲ್ಲಿ ಸೆಂಚುರಿ ಬಾರಿಸುವಲ್ಲಿ ವಿಫಲರಾಗಿದ್ದರು. ಆದರೆ ಇದೀಗ ಮತ್ತೊಬ್ಬ ಕನ್ನಡಿಗ ಇಪ್ಪತ್ತೊಂದು ವರ್ಷಗಳ ನಂತರ ನ್ಯೂಜಿಲೆಂಡ್ ನೆಲದಲ್ಲಿ ಶತಕ ಬಾರಿಸುವ ಮೂಲಕ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಹೊತ್ತು ಶತಕ ಬಾರಿಸಿದ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿ ಕೊಂಡಿದ್ದಾರೆ.

Facebook Comments

Post Author: Ravi Yadav