ಠಾಕ್ರೆ ಗೆ ಬಿಗ್ ಶಾಕ್ ! ಜನಸಂಖ್ಯೆ ನಿಯಂತ್ರಣ ಕಾನೂನು ವಿರೋಧಿಸೋಣ ಎನ್ನುವಷ್ಟರಲ್ಲಿ ಸೆಡ್ಡು ಹೊಡೆದು ಶಿವಸೇನಾ ಸಂಸದ ರಾಜ್ಯಸಭೆಯಲ್ಲಿ ಮಂಡಿಸಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ದೇಶದ ಜನಸಂಖ್ಯೆ ನಿಮಗೆಲ್ಲರಿಗೂ ತಿಳಿದಿರುವಂತೆ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿದೆ. ಈಗಾಗಲೇ 130 ಕೋಟಿಗೂ ಹೆಚ್ಚು ಜನ ಸಂಖ್ಯೆಯಿಂದ ದೇಶ ತುಂಬಿ ತುಳುಕುತ್ತಿದೆ.

ಹೀಗಿರುವಾಗ ಉಳಿದ ದೇಶಗಳು ಅಳವಡಿಸಿ ಕೊಂಡಿರುವ ವಂತಹ ಜನಸಂಖ್ಯಾ ನಿಯಂತ್ರಣ ಕಾನೂನು ಅತ್ಯವಶ್ಯಕ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ಕೊಂಚಮಟ್ಟಿಗೆ ವಿರೋಧ ಕೇಳಿ ಬಂದರೂ ಮೋದಿ ನೇತೃತ್ವದ ಕೇಂದ್ರ ಸರಕಾರವು ತನ್ನ ಪ್ರಣಾಳಿಕೆಯಲ್ಲಿ ಈಗಾಗಲೇ ಜನಸಂಖ್ಯಾ ನಿಯಂತ್ರಣ ಕಾನೂನು ಮಸೂದೆ ಮಂಡಿಸುತ್ತೇವೆ ಎಂದು ಭರವಸೆ ನೀಡಿರುವ ಕಾರಣ ಕೇಂದ್ರ ಸರ್ಕಾರವು ಮಸೂದೆ ಮಂಡಿಸುತ್ತದೆ ಎಂದು ಎಲ್ಲರೂ ನಂಬಿದ್ದಾರೆ.

ಇನ್ನು ಬಿಜೆಪಿ ಪಕ್ಷವೂ ಕೂಡ ಇದನ್ನೇ ಹೇಳಿದ್ದು ಯಾವುದೇ ಕಾರಣಕ್ಕೂ ನಮ್ಮ ಪ್ರಣಾಳಿಕೆಯಲ್ಲಿ ನಮೂದಿಸಿದ ಯಾವುದೇ ಅಂಶಗಳಿಂದ ನಾವು ಹಿಂದೆ ಸರಿಯುವ ಮಾತೇ ಇಲ್ಲ ಎಂದು ಖಡ ಖಂಡಿತವಾಗಿ ಕಡ್ಡಿ ಮುರಿದಂತೆ ಹೇಳಿಕೆ ನೀಡಿದೆ. ಇದರ ಬೆನ್ನಲ್ಲೇ ತನ್ನ ಪ್ರಣಾಳಿಕೆಯಲ್ಲಿಯೂ ಇದೇ ಅಂಶವನ್ನು ನಮೂದಿಸಿ ಮತ ಕೇಳಿದ ಶಿವಸೇನಾ ಪಕ್ಷವು ಇದೀಗ ಕೇಂದ್ರ ಸರ್ಕಾರದ ವಿರುದ್ಧ ನಿಲ್ಲುವ ಕಾರ್ಯಕ್ಕಾಗಿ ಜನಸಂಖ್ಯಾ ನಿಯಂತ್ರಣ ಕಾನೂನನ್ನು ವಿರೋಧ ಮಾಡಲು ಸಿದ್ಧವಾಗಿತ್ತು.

ಆದರೆ ಇದೀಗ ಬಿಜೆಪಿ ಪಕ್ಷದ ವಿರುದ್ಧ ನಿಲುವು ತಾಳುವುದು ಶಿವಸೇನಾ ಪಕ್ಷದ ಹಲವು ನಾಯಕರಿಗೆ ಇಷ್ಟವಿಲ್ಲ ಎಂಬುದು ಸಾಬೀತಾಗಿದೆ. ಉದ್ಧವ್ ಠಾಕ್ರೆ ಅವರು ಜನಸಂಖ್ಯಾ ನಿಯಂತ್ರಣ ಕಾನೂನನ್ನು ವಿರೋಧಿಸುವ ಎಲ್ಲಾ ತಯಾರಿ ಮಾಡಿ ಕೊಳ್ಳುತ್ತಿರುವ ಸಂದರ್ಭದಲ್ಲಿ ರಾಜ್ಯ ಸಭೆಯಲ್ಲಿ ಶಿವಸೇನಾ ಸಂಸದರಾಗಿರುವ ಅನಿಲ್ ದೇಸಾಯಿ ರವರು ಜನಸಂಖ್ಯೆ ನಿಯಂತ್ರಣ ಕಾನೂನಿಗೆ ಪರೋಕ್ಷವಾದ ಮಸೂದೆಯನ್ನು ಮಂಡಿಸಿದ್ದಾರೆ. ಈ ಮೂಲಕ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ನೇರವಾಗಿ ಸೆಡ್ಡು ಹೊಡೆದಿದ್ದಾರೆ. ಅಷ್ಟಕ್ಕೂ ಅವರು ಮಂಡಿಸಿದ ಮಸೂದೆಯಲ್ಲಿ ನಮೂನೆ ಯಾಗಿರುವ ಅಂಶಗಳಾದರೂ ಏನು? ಹಾಗೂ ಅಂಶಗಳ ಮಹತ್ವವೇನು ಎಂಬುದನ್ನು ತಿಳಿಯಲು ಕೆಳಗಡೆ ಓದಿ.

ಇದೀಗ ಶಿವಸೇನಾ ಸಂಸದರಾಗಿರುವ ಅನಿಲ್ ದೇಸಾಯಿ ರವರು 2020ರಲ್ಲಿ ಭಾರತೀಯ ಸಂವಿಧಾನದ 47ಎ ವಿಧಿಯನ್ನು ಸೇರಿಸಿ, ಈ ವಿಧಿಯಲ್ಲಿ ದೇಶದ ಯಾವುದೇ ಪೋಷಕರು ಎರಡು ಮಕ್ಕಳಿಗೆ ತಮ್ಮನ್ನು ತಾವು ಸೀಮಿತಗೊಳಿಸಿದಲ್ಲಿ ಸರ್ಕಾರದ ಕಡೆಯಿಂದ ತೆರಿಗೆ ರಿಯಾಯಿತಿ ಹಾಗೂ ಪ್ರೋತ್ಸಾಹಿಸಲು ಉದ್ಯೋಗ ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರೋತ್ಸಾಹ ಧನ ಹಾಗೂ ವಿಶೇಷ ಮೀಸಲಾತಿ ನೀಡಬೇಕು ಹಾಗೂ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಈ ಕೂಡಲೇ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಹಿಂಪಡೆಯುವಂತೆ ಅಂಶಗಳನ್ನು ಸೇರಿಸಲು ಮಸೂದೆ ಮಂಡಿಸಿದ್ದಾರೆ. ಒಂದು ವೇಳೆ ಈ ಮಸೂದೆಯು ರಾಜ್ಯಸಭಾ ಹಾಗೂ ಲೋಕಸಭೆಯಲ್ಲಿ ಅನುಮೋದನೆ ಗೊಂಡರೇ ಇದೊಂದು ಐತಿಹಾಸಿಕ ನಿರ್ಣಯವಾಗಿ ಉಳಿಯಲಿದೆ ಎಂಬುದು ಹಿರಿಯ ಪಂಡಿತರ ಲೆಕ್ಕಾಚಾರ ವಾಗಿದೆ. ಈ ಕಾಯ್ದೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav