ಕನ್ನಡಿಗರಿಗೆ ಬಂಪರ್ ! ಬರ ಮುಕ್ತ ಮಾಡಲು 60 ಸಾವಿರ ಕೋಟಿ ಯೋಜನೆ ಘೋಷಿಸಿದ ಕೇಂದ್ರ ಸರ್ಕಾರ ! ಮಾಡಲು ಹೊರಟಿರುವುದು ಏನು ಗೊತ್ತಾ??

ಕನ್ನಡಿಗರಿಗೆ ಬಂಪರ್ ! ಬರ ಮುಕ್ತ ಮಾಡಲು 60 ಸಾವಿರ ಕೋಟಿ ಯೋಜನೆ ಘೋಷಿಸಿದ ಕೇಂದ್ರ ಸರ್ಕಾರ ! ಮಾಡಲು ಹೊರಟಿರುವುದು ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಮ್ಮ ದೇಶದಲ್ಲಿ ಅನ್ನದಾತ ರೈತ ಎದುರಿಸುವ ಕಷ್ಟಗಳನ್ನು ಬೇರೆ ಯಾವುದೇ ಕ್ಷೇತ್ರದ ಜನರು ಎದುರಿಸುವುದಿಲ್ಲ. ಅತಿವೃಷ್ಟಿ-ಅನಾವೃಷ್ಟಿ ಗಳ ನಡುವೆ ಮಧ್ಯವರ್ತಿಗಳ ಕಾಟ ಎದುರಿಸಿ ರೈತ ಸವಾಲು ಗೆಲ್ಲುವುದು ಬಹಳ ವಿರಳ.

ಈ ರೀತಿ ಕಷ್ಟಪಟ್ಟು ದುಡಿಯುವ ರೈತರ ಸಾಲ ಮನ್ನಾ ಮಾಡುವುದು ಎಲ್ಲಾ ಸರ್ಕಾರಗಳು ಮಾಡುವ ಕೆಲಸ, ಆದರೆ ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ರೈತರು ಸಾಲ ಮಾಡದಂತೆ ತಡೆಯಲು ಸಿದ್ಧವಾಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ನಿಮಗೆಲ್ಲರಿಗೂ ತಿಳಿದಿರುವಂತೆ ಕರ್ನಾಟಕದ ಯಾವೊಬ್ಬ ರೈತನೂ ಕಳೆದ ಕೆಲವು ವರ್ಷಗಳಿಂದ ಬೆಳೆ ಬೆಳೆದು ನಿಶ್ಚಿಂತೆಯಾಗಿ ನಿದ್ದೆ ಮಾಡಿಲ್ಲ, ಏನಾದರೂ ಒಂದು ತೊಂದರೆಯಿಂದ ಕಷ್ಟಗಳ ಸರಮಾಲೆಯನ್ನು ತನ್ನ ಕುತ್ತಿಗೆಯಲ್ಲಿ ಸುತ್ತಿಕೊಂಡು ಓಡಾಡುತ್ತಿದ್ದಾನೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೇ, ಒಂದು ಕಡೆ ಗೋದಾವರಿಯ 11000 ಟಿಎಂಸಿ ನೀರು ಸಮುದ್ರದ ಪಾಲಾಗುತ್ತದೆ, ಮತ್ತೊಂದೆಡೆ ತಮಿಳುನಾಡು ಹಾಗೂ ಕರ್ನಾಟಕದ ನಡುವೆ 60, 70 ಟಿಎಂಸಿ ಗಳ ನಡುವೆ ಬಾರಿ ಕಿತ್ತಾಟವೇ ನಡೆಯುತ್ತದೆ.

ಇನ್ನು ಉತ್ತರ ಕರ್ನಾಟಕದ ರೈತರ ನೀರಿನ ಸಮಸ್ಯೆಗಳ ಬಗ್ಗೆ ನೆನೆಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತದೆ. ಹೀಗಿರುವಾಗ ಇದೀಗ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಮತ್ತೊಂದು ಮಹತ್ವದ ಯೋಜನೆಯ ಮೂಲಕ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನ ರೈತರಿಗಷ್ಟೇ ಅಲ್ಲದೆ ಸಾಮಾನ್ಯ ಜನರಿಗೆ ಕುಡಿಯುವ ನೀರು ಕೂಡ ಸರಬರಾಜು ಮಾಡುವಂತಹ ಮಹತ್ವದ ಯೋಜನೆಗೆ ಕೈ ಹಾಕಿದ್ದಾರೆ. ಈ ಯೋಜನೆಯನ್ನು ಕಳೆದ ಕೆಲವು ದಿನಗಳ ಹಿಂದೆ ನಿತಿನ್ ಗಡ್ಕರಿ ರವರು ಘೋಷಣೆ ಮಾಡಿದಾಗ ಎಲ್ಲರೂ ಚುನಾವಣಾ ಗಿಮಿಕ್ ಎಂದಿದ್ದರು.

ಆದರೆ ಇದೀಗ ಮತ್ತೊಮ್ಮೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನಿತಿನ್ ಗಡ್ಕರಿ ರವರು ಮುಂದಾಗಿದ್ದಾರೆ. ಈ ಯೋಜನೆಯಿಂದ ನೇರವಾಗಿ ರೈತರಿಗೆ ನೆರವಾದರೆ ಪರೋಕ್ಷವಾಗಿ ಸಾಮಾನ್ಯ ಜನರಿಗೂ ಕೂಡ ಬಹಳ ನೆರವಾಗಲಿದೆ. ಯೋಜನೆಯ ಸಂಪೂರ್ಣ ವಿವರ ಹಾಗೂ ಲಾಭ ಗಳಿಗಾಗಿ ಕೆಳಗಡೆ ಓದಿ.

ನರೇಂದ್ರ ಮೋದಿರವರು ಅಧಿಕಾರಕ್ಕೇರುವ ಸಂದರ್ಭದಲ್ಲಿ ನದಿ ಜೋಡಣೆಯ ಮೂಲಕ ಸಮುದ್ರದ ಪಾಲಾಗುವ ನೀರನ್ನು ಅಣೆಕಟ್ಟುಗಳ ಮೂಲಕ ತಡೆದು ಸಮುದ್ರಕ್ಕೆ ವ್ಯರ್ಥವಾಗಿ ಹೋಗುವಂತಹ ನೀರನ್ನು ಸಮರ್ಥವಾಗಿ ಬಳಸಿಕೊಂಡು ರೈತರಿಗೆ ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೆ ತರುವ ಮಹತ್ವದ ‌ಆಶ್ವಾಸನೆ ನೀಡಿದ್ದರು.

ಇದೀಗ ಆಂಧ್ರ ಪ್ರದೇಶದ ಗೋದಾವರಿ ನದಿಗೆ ಅಡ್ಡಲಾಗಿ ಪೋಲಾವರಂ ನ ಬಳಿ ಹೊಸದೊಂದು ಅಣೆಕಟ್ಟು ನಿರ್ಮಾಣ ಮಾಡಿ ಅಣೆಕಟ್ಟಿನ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತದೆ, ಕೃಷ್ಣಾ ನದಿಯಿಂದ ಪೆನ್ನಾ ನದಿಗೆ ಹರಿಸಿ ತದ ನಂತರ ಅದನ್ನು ಕಾವೇರಿ ನದಿಗೆ ಜೋಡಿಸಲಾಗುತ್ತದೆ. ಕಾವೇರಿ ನದಿಗೆ ಜೋಡಿಸಿದ ತಕ್ಷಣ ಎಂದಿನಂತೆ ತಮಿಳುನಾಡಿನ ರೈತರು ಕೂಡ ಇದೇ ನೀರಿನಿಂದ ಬೆಳೆ ಬೆಳೆದು ಕೊಳ್ಳಲಿದ್ದಾರೆ. ಕೇವಲ 60 70 ಟಿಎಂಸಿ ಗಳಿಗೆ ಹೋರಾಟ ಮಾಡುವ ಸಂಕಷ್ಟದಲ್ಲಿ ಸಿಲುಕಿದ್ದ ನಮ್ಮ ರೈತರ ಪಾಲಿಗೆ ಬರೋಬ್ಬರಿ 450 ಟಿಎಂಸಿ ನೀರು ಖಚಿತವಾಗಿ ಇನ್ನು ಮುಂದೆ ದೊರೆಯಲಿದೆ. ಈ ಯೋಜನೆ ಆದಷ್ಟು ಬೇಗ ಪೂರ್ಣಗೊಂಡು ರೈತರ ಸಂಕಷ್ಟದ ದಿನಗಳು ದೂರವಾಗಲಿ ಎಂಬುದು ನಮ್ಮ ಆಶಯ.