ಮೋದಿ, ಅಮಿತ್ ಶಾ ರವರನ್ನು ನಂಬಿ ಹೊಸ ಘೋಷಣೆ ಮೊಳಗಿಸಿದ ಕಾಶ್ಮೀರಿ ಪಂಡಿತರು ! ಬೆಂಬಲಕ್ಕೆ ನಿಂತ ಶಿವರಾಜ್ ಸಿಂಗ್ ಚೌಹಾನ್ ! ಅಷ್ಟಕ್ಕೂ ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕೆಲವರು ಸೌಹಾರ್ದತೆ ಮೆರೆಯದ ಮುಸ್ಲಿಂ ಮೂಲ ಭೂತವಾದಿಗಳು ಜಮ್ಮು ಹಾಗೂ ಕಾಶ್ಮೀರ ದಲ್ಲಿ ಜನಾಂಗೀಯ ಹ -ತ್ಯಾ- ಕಾಂಡ ನಡೆಸಿದ ದಿನ ಇಂದು, (19-01-1990). ಹೌದು ಕಳೆದ 30 ವರ್ಷಗಳ ಹಿಂದೆ ಈ ಕಹಿ ಘಟನೆ ನಡೆದು ಹೋಗಿತ್ತು.

ಅಂದು ಯಾವುದೇ ಸರ್ಕಾರವಾಗಲಿ ಅಥವಾ ಯಾವುದೇ ರಾಜಕೀಯ ನಾಯಕರಾಗಲಿ ಕಾಶ್ಮೀರ ಪಂಡಿತರನ್ನು ಕಾಪಾಡಲು ಸಾಧ್ಯವಾಗಲಿಲ್ಲ. ಸುಮಾರು 5.5 ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ಬೇರೆ ವಿಧಿಯಿಲ್ಲದೆ ಜಮ್ಮು ಹಾಗೂ ಕಾಶ್ಮೀರವನ್ನು ತೊರೆದು ದೇಶದ ವಿವಿಧ ಭಾಗಗಳಿಗೆ ವಲಸೆ ಹೋಗಿ ತಮ್ಮ ಪ್ರಾಣ ಉಳಿಸಿ ಕೊಂಡರು. ಇಂದಿಗೆ ಈ ಕಹಿ ಘಟನೆ ನಡೆದು ಮೂವತ್ತು ವರ್ಷಗಳು ಆಗಿವೆ. ಇಂತಹ ಸಂದರ್ಭದಲ್ಲಿ ಇದೀಗ ಜಮ್ಮು ಹಾಗೂ ಕಾಶ್ಮೀರ ದಲ್ಲಿ ಶಾಂತಿ ಸ್ಥಾಪಿಸುವಂತೆ ಮಾಡಿರುವ ಕೇಂದ್ರ ಸರ್ಕಾರವನ್ನು ನಂಬಿಕೊಂಡು ಕಾಶ್ಮೀರಿ ಪಂಡಿತರು ಹೊಸ ಅಭಿಯಾನವನ್ನು ಆರಂಭಿಸಿದ್ದಾರೆ. ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹರಿ ಬಿಡುತ್ತಿರುವ ಕಾಶ್ಮೀರಿ ಪಂಡಿತರು ಏನು ಹೇಳುತ್ತಿದ್ದಾರೆ ಗೊತ್ತಾ? ತಿಳಿಯಲು ಸಂಪೂರ್ಣವಾಗಿ ಕೆಳಗಡೆ ಓದಿ.

ಹೌದು ಇದೀಗ ಸಾಮೂಹಿಕವಾಗಿ ಜಮ್ಮು ಕಾಶ್ಮೀರ ಬಿಟ್ಟು ತೆರಳಿದ ಪಂಡಿತರು ಒಂದಲ್ಲ ಒಂದು ದಿನ ನಾವು ನಮ್ಮ ತಾಯ್ನಾಡಿಗೆ ಹಿಂದಿರುಗುತ್ತೇವೆ ಎಂದು ಕಾದು ಕುಳಿತಿದ್ದೆವು, ಇದೀಗ ಮೋದಿ ಹಾಗೂ ಅಮಿತ್ ಶಾ ರವರು ನಮ್ಮ ಆಸೆಯನ್ನು ಈಡೇರಿಸಿದ್ದಾರೆ. ಆದ ಕಾರಣ ಹಮ್ ಆಯೆಂಗೆ ಅಪ್ನ ವತನ್ ಎಂಬ ಚಲನ ಚಿತ್ರದ ಡೈಲಾಗ್ ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನಾವು ಕಾಶ್ಮೀರಕ್ಕೆ ಕೇಂದ್ರಸ ರ್ಕಾರವನ್ನು ನಂಬಿ ವಾಪಸು ಹೋಗುತ್ತೇವೆ ಎಂದು ಎಲ್ಲೆಡೆ ವಿಡಿಯೋ ಹಾಗೂ ಪೋಸ್ಟ್ಗಳನ್ನು ಹರಿದು ಬಿಡುತ್ತಿದ್ದಾರೆ. ಇದರ ಕುರಿತು ಪ್ರತಿಕ್ರಿಯೆ ನೀಡಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು, ಅಂದು ಕಾಶ್ಮೀರಿ ಪಂಡಿತರಿಗೆ ಆಗಿದ್ದ ಅನ್ಯಾಯ, ಅವರ ಘನತೆಯ ಮೇಲೆ ನಡೆದ ದೌರ್ಜನ್ಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ತಮ್ಮ ತಾಯ್ನಾಡಲ್ಲಿ ಅಂದು ಅವರು ನಿರಾಶ್ರಿತರಾದರು, ಅವರ ನೋವನ್ನು ಹೋಗಲಾಡಿಸಲು ನಮ್ಮ ಕೈಯಲ್ಲಿ ಸಾಧ್ಯವಿಲ್ಲ, ಆದರೆ ಪ್ರತಿಯೊಬ್ಬ ಕಾಶ್ಮೀರಿ ಪಂಡಿತರು ತಮ್ಮ ತವರಿಗೆ ವಾಪಸು ತೆರಳುವ ಅಂತಹ ಕಾಶ್ಮೀರವನ್ನು ಸೃಷ್ಟಿ ಮಾಡುತ್ತೇವೆ. ಇದು ಸರ್ಕಾರದ ಭರವಸೆಯಾಗಿತ್ತು ಹಾಗೂ ಇದು ಈಡೇರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.