ಪಿಯೂಷ್ ರವರಿಗೆ ಮಹತ್ವದ ಜವಾಬ್ದಾರಿ ವಹಿಸಿದ ಕೇಂದ್ರ ! ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಸಿದ್ದರಾದ ಪಿಯೂಷ್ ಘೋಯಲ್ ! ಏನು ಗೊತ್ತಾ?

ಪಿಯೂಷ್ ರವರಿಗೆ ಮಹತ್ವದ ಜವಾಬ್ದಾರಿ ವಹಿಸಿದ ಕೇಂದ್ರ ! ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಸಿದ್ದರಾದ ಪಿಯೂಷ್ ಘೋಯಲ್ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತದ ರೈಲ್ವೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿರುವ ಪಿಯೂಷ್ ಘೋಯಲ್ ರವರ ಕಾರ್ಯ ವೈಖರಿಯ ಬಗ್ಗೆ ಈಗಾಗಲೇ ನಿಮಗೆಲ್ಲರಿಗೂ ತಿಳಿದೇ ಇದೆ. ಇವರ ನೇತೃತ್ವದಲ್ಲಿ ಭಾರತೀಯ ರೈಲ್ವೆಯು ಕಳೆದ 60 ವರ್ಷಗಳಲ್ಲಿ ಮಾಡದ ಸಾಧನೆಯನ್ನು ಕಳೆದ 5 ವರ್ಷಗಳಲ್ಲಿ ಮಾಡಿದೆ ಎಂದರೇ ಪಕ್ಷಾತೀತವಾಗಿ ಎಲ್ಲರೂ ಒಪ್ಪಿಕೊಳ್ಳಲೇ ಬೇಕು. ಅದಕ್ಕೆ ಈ ಕೆಳಗಿನ ಚಿತ್ರಗಳೇ ಸಾಕ್ಷಿ.

ಪ್ರಯಾಣಿಕರ ಸಮಸ್ಯೆಗೆ ಸ್ಪಂದನೆ, ಸ್ವಚ್ಛತೆ, ಉಚಿತ ವೈಫೈ, ಸ್ವಚ್ಛ ಕುಡಿಯುವ ನೀರು ಹಾಗೂ ಇನ್ನಿತರ ಸೌಲಭ್ಯಗಳ ಬಗ್ಗೆ ಗಮನಹರಿಸುವ ಪಿಯೂಷ್ ಅವರು ಭಾರತೀಯ ರೈಲ್ವೆಯನ್ನು ಯಾರು ಊಹಿಸದ ರೀತಿಯಲ್ಲಿ ಅಭಿವೃದ್ಧಿ ಮಾಡಿ ತೋರಿಸುತ್ತಿದ್ದಾರೆ. ಇಷ್ಟೆಲ್ಲಾ ಅಭಿವೃದ್ಧಿ ಯೋಜನೆಗಳ ಮೂಲಕ ಸದ್ದು ಮಾಡುತ್ತಿರುವ ಪಿಯುಷ್ ಗೋಯಲ್ ರವರಿಗೆ ನರೇಂದ್ರ ಮೋದಿರವರ ಸರ್ಕಾರ ಇದೀಗ ಮತ್ತೊಂದು ಮಹತ್ವದ ಜವಾಬ್ದಾರಿ ವಹಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ಐವತ್ತನೇ ಆರ್ಥಿಕ ಒಕ್ಕೂಟ ಸಮಾವೇಶ ನಡೆಯಲಿದೆ. ಎಂದಿನಂತೆ ಭಾರತ ದೇಶದ ಪರವಾಗಿ ಹಲವಾರು ಅಧಿಕಾರಿಗಳು ಸೇರಿದಂತೆ ಒಂದು ತಂಡ ಭಾರತವನ್ನು ಪ್ರತಿನಿಧಿಸಲು ದಾವೋಸ್ ನಗರಕ್ಕೆ ಹೊರಟು ನಿಂತಿದೆ. ಈಗಾಗಲೇ ಮೂಲಗಳ ಪ್ರಕಾರ ಈ ಒಕ್ಕೂಟದಲ್ಲಿ ಭಾರತ ದೇಶ ಎಲ್ಲ ದೇಶಗಳ ಗಮನ ಸೆಳೆದಿದೆ, ವಿಶ್ವದ ಬಲಾಢ್ಯ ಆರ್ಥಿಕ ರಾಷ್ಟ್ರಗಳಾಗಿರುವ ರಷ್ಯಾ, ಸೌದಿ ಅರೇಬಿಯಾ ಸೇರಿದಂತೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಸ್ವಿಜರ್ಲೆಂಡ್, ಕೊರಿಯಾ ಹಾಗೂ ಸಿಂಗಪುರ ದೇಶಗಳ ಜೊತೆ ಭಾರತ ತಂಡ ಮಾತುಕತೆ ನಡೆಸಲಿದೆ.

ಇಷ್ಟೇ ಅಲ್ಲದೆ ವಿಶ್ವ ವಾಣಿಜ್ಯ ಸಂಸ್ಥೆಯ ಮಹಾ ನಿರ್ದೇಶಕರು ಸೇರಿದಂತೆ ವಿವಿಧ ಕಂಪನಿಗಳ ಸಿಇಒ ಗಳ ಜೊತೆ ದ್ವೀಪಕ್ಷಿಯ ಮಾತುಕತೆಗಳ ಮೂಲಕ ಭಾರತೀಯ ರೈಲ್ವೆ ಸೇರಿದಂತೆ ಹಲವಾರು ವಿವಿಧ ರೀತಿಯಲ್ಲಿ ಭಾರತಕ್ಕೆ ಬಂಡವಾಳದ ಹರಿವು ಹೆಚ್ಚಿಸಲು ದುಂಡು ಮೇಜಿನ ಸಭೆ ನಡೆಸಲಿದೆ. ಈ ನಿಯೋಗದ ಸಂಪೂರ್ಣ ಜವಾಬ್ದಾರಿಯನ್ನು ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಪಿಯೂಷ್ ಗೋಯಲ್ ಅವರ ಹೆಗಲಿಗೆ ಏರಿಸಿದ್ದು ವಿಶ್ವದ ಉನ್ನತ ನಾಯಕರ ಜೊತೆ ನಡೆಯುವ ಸಭೆಗಳಲ್ಲಿ ಪಿಯುಷ್ ಗೊಯಲ್ ರವರು ಈ ನಿಯೋಗವನ್ನು ಮುನ್ನಡೆಸಿ ಭಾರತ ದೇಶಕ್ಕೆ ಬಂಡವಾಳ ಹರಿದು ಬರುವಂತೆ ಮಾಡುವತ್ತ ಗಮನ ಹರಿಸಲಿದ್ದಾರೆ. ಪಕ್ಷಾತೀತವಾಗಿ ನಾವು
ಪಿಯೂಷ್ ಗೋಯಲ್ ರವರಿಗೆ ಎಲ್ಲಾ ಒಳ್ಳೆಯದಾಗಲಿ ಎಂದು ಆಶಿಸೋಣ. ಭಾರತಕ್ಕೆ ಮತ್ತಷ್ಟು ಬಂಡವಾಳ ಹರಿದು ಬಂದು ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿ ಭಾರತದ ಆರ್ಥಿಕತೆ ಮತ್ತಷ್ಟು ಬಲವಾಗಲಿ ಎಂಬುದು ನಮ್ಮ ಆಶಯ.