ಸಿನಿಮಾ ಹೋಯ್ತು, ಸ್ಕಿಲ್ ಇಂಡಿಯಾ ಹೋಯ್ತು ಇದೀಗ ದೀಪಿಕಾ ರವರಿಗೆ ಮತ್ತೊಂದು ಭಾರಿ ಹೊಡೆತ ! ನಡೆಯುತ್ತಿರುವ ಮಹತ್ವದ ವಿದ್ಯಮಾನ ಏನು ಗೊತ್ತಾ

ಸಿನಿಮಾ ಹೋಯ್ತು, ಸ್ಕಿಲ್ ಇಂಡಿಯಾ ಹೋಯ್ತು ಇದೀಗ ದೀಪಿಕಾ ರವರಿಗೆ ಮತ್ತೊಂದು ಭಾರಿ ಹೊಡೆತ ! ನಡೆಯುತ್ತಿರುವ ಮಹತ್ವದ ವಿದ್ಯಮಾನ ಏನು ಗೊತ್ತಾ

ನಮಸ್ಕಾರ ಸ್ನೇಹಿತರೇ, ಸಿನಿಮಾ ಸೆಟ್ಟನ್ನು ಬಿಟ್ಟು ಜೆಎನ್ಯು ಕಾಲೇಜಿನ ತುಕಡೆ ಗ್ಯಾಂಗ್ ಗಳ ಪರವಾಗಿ ನಿಂತ ಕ್ಷಣದಿಂದಲೂ ದೀಪಿಕಾ ಪಡುಕೋಣೆ ರವರ ಜೀವನ ಅಕ್ಷರ ಸಹ ಬದಲಾಗಿದೆ ಎಂದರೆ ತಪ್ಪಾಗಲಾರದು. ಮೊದಲಿಗೆ ಚಪಕ್ ಸಿನಿಮಾ ನಿಷೇಧಿಸುವಂತೆ ಕರೆ, ಸ್ಕಿಲ್ ಇಂಡಿಯಾ ಪ್ರಚಾರದಿಂದ ಹೊರ, ತದ ನಂತರ ಹಲವಾರು ರಾಜ್ಯಗಳಲ್ಲಿ ತೆರಿಗೆ ಮುಕ್ತ ಪ್ರದರ್ಶನ ನೀಡಿದರೂ ಕಳೆದ ಒಂಬತ್ತು ವರ್ಷಗಳಲ್ಲಿ ಅತಿ ಕಡಿಮೆ ಓಪನಿಂಗ್ ಪಡೆದ ದೀಪಿಕಾ ರವರ ಚಿತ್ರ ಎಂದು ಕುಖ್ಯಾತಿ ಪಡೆದ ಚಪಕ್ ಸಿನಿಮಾ.

ಹೌದು, ದೇಶದಲ್ಲಿ ಹಲವಾರು ವಿಷಯಗಳು ಇದ್ದರೂ ಕೂಡ ಜೆಎನ್ಯು ಕಾಲೇಜಿನ ತುಕಡೆ ಗ್ಯಾಂಗ್ ಗಳ ಪರವಾಗಿ ನಿಂತು ಪ್ರಾಧ್ಯಾನ್ಯತೆ ನೀಡಿ ಹಲವಾರು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನು ಗಮನಿಸಿದ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದು ಬಹುತೇಕ ಜನರು ದೀಪಿಕಾ ರವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇವಲ ಒಂದು ನಡೆಯಿಂದ ಜನರ ರಾಷ್ಟ್ರೀಯತಾ ಭಾವವನ್ನು ಕೆಣಕಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಹೀಗೆ ಹೊಡೆತಗಳ ಮೇಲೆ ಹೊಡೆತಗಳು ಬೀಳುತ್ತಿವೆ. ಹೀಗಿರುವಾಗ ದೀಪಿಕಾ ರವರಿಗೆ ಗಾಯದ ಮೇಲೆ ಬರೆ ಎಳೆಯುವಂತಹ ಮಹತ್ವದ ವಿದ್ಯಮಾನ ನಡೆಯುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ. ವರ್ಷಕ್ಕೆ ಒಂದು ಸಿನಿಮಾ ಮಾಡುವ ದೀಪಿಕಾ ರವರು ಹತ್ತರಿಂದ ಹದಿನೈದು ಕೋಟಿ ಸಿನಿಮಾದಿಂದ ದುಡಿದರೇ ವರ್ಷಕ್ಕೆ 103 ಕೋಟಿ ಆದಾಯ ಕೇವಲ ಜಾಹೀರಾತುಗಳಿಂದ ಬರುತ್ತದೆ.

ಇದೀಗ ದೀಪಿಕಾ ರವರ ಪ್ರಮುಖ ಆದಾಯ ವಾಗಿರುವ ಹಲವಾರು ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಹುದ್ದೆಯಿಂದ ದೀಪಿಕಾ ರವರನ್ನು ತೆಗೆದು ಹಾಕಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ. ಸದ್ಯಕ್ಕೆ ದೀಪಿಕಾ ರವರು ಬ್ರಿಟಾನಿಯಾ ಗುಡ್ ಡೇ, ಲೋರಿಯಲ್, ತನಿಷ್ಕ್ ಹೀಗೆ ವಿಶ್ವದಲ್ಲಿಯೇ ತನ್ನ ಛಾಪು ಮೂಡಿಸಿರುವ ಬರೋಬ್ಬರಿ 23 ಬ್ರಾಂಡ್ ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ಕಂಪನಿಗಳು ಈಗಾಗಲೇ ತನ್ನ ಜಾಹೀರಾತುಗಳನ್ನು ತಡೆ ಹಿಡಿದು ಟಿವಿಯಲ್ಲಿ ಪ್ರಸಾರ ಮಾಡಬೇಕೋ ಅಥವಾ ಮಾಡಬಾರದೋ ಎಂಬ ಚರ್ಚೆಯಲ್ಲಿ ತೊಡಗಿಕೊಂಡಿರುವ ಕಾರಣ ಬಹುತೇಕ ಚಾನೆಲ್ಗಳಲ್ಲಿ ದೀಪಿಕಾ ರವರ ಟಿವಿ ಜಾಹೀರಾತುಗಳು ಕಡಿಮೆಯಾಗಿವೆ. ಒಂದು ವೇಳೆ ಜಾಹೀರಾತು ಪ್ರಸಾರ ಮಾಡಿದರೇ ಜನರು ತಮ್ಮ ಬ್ರಾಂಡ್ ಅನ್ನು ಧಿಕ್ಕಾರಿಸಿದರೇ ಮುಂದೇನು ಎಂಬ ಚಿಂತೆಯಲ್ಲಿ ಕಂಪನಿಗಳು ತೊಡಗಿ ಕೊಂಡಿರುವ ಕಾರಣ ದೀಪಿಕಾ ರವರ ಬ್ರಾಂಡ್ ವ್ಯಾಲ್ಯೂ ಇದೀಗ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.