ಶಿವಸೇನೆಗೆ ಈಗ ನೆನಪಾಯಿತೇ ರಾಷ್ಟ್ರೀಯತೆ? ಅಮಿತ್ ಶಾಗೆ ಬಹಿರಂಗ ಸವಾಲಿಗೆ ಸಿದ್ಧ ಶಿವಸೇನೆ ! ಹೇಳಿದ್ದೇನು ಗೊತ್ತಾ??

ಶಿವಸೇನೆಗೆ ಈಗ ನೆನಪಾಯಿತೇ ರಾಷ್ಟ್ರೀಯತೆ? ಅಮಿತ್ ಶಾಗೆ ಬಹಿರಂಗ ಸವಾಲಿಗೆ ಸಿದ್ಧ ಶಿವಸೇನೆ ! ಹೇಳಿದ್ದೇನು ಗೊತ್ತಾ??

ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡ ಮೇಲೆ ಕೇಂದ್ರ ಸರ್ಕಾರದ ವಿರುದ್ಧ ಸದಾ ಕಿಡಿ ಕಾರುತ್ತಿರುವ ಶಿವಸೇನಾ ಪಕ್ಷವು ಕೇಂದ್ರ ಸರ್ಕಾರವು ಪ್ರಣಾಳಿಕೆಯಲ್ಲಿ ಘೋಷಿಸಿದ ಅಂಶಗಳನ್ನು ಮುಂದಿಟ್ಟು ಕೊಂಡು ಜನರ ಬಳಿ ಮತ ಕೇಳಿ ಇದೀಗ ಅದೇ ಯೋಜನೆಗಳನ್ನು ವಿರೋಧಿಸುತ್ತಿದೆ.

ಇದರ ಬೆನ್ನಲ್ಲೇ ರಾಷ್ಟ್ರೀಯತೆ ಕುರಿತು ಹಲವಾರು ವಿವಾದಾತ್ಮಕ ಹೇಳಿಕೆ ನೀಡಿರುವ ಶಿವಸೇನಾ ಪಕ್ಷವು ಭಾರತೀಯ ಸೇನೆಯ ಕುರಿತು ಕೂಡ ಮಾತನಾಡಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕಿಡಿಕಾರಿತ್ತು. ಅಂದು ಮೋದಿರವರ ಇದೇ ನಿರ್ಧಾರವನ್ನು ಕೊಂಡಾಡಿದ್ದ ಶಿವಸೇನ ಪಕ್ಷವು ತದ ನಂತರ ಸರ್ಜಿಕಲ್ ಸ್ಟ್ರೈಕ್ ಅನ್ನು ಟೀಕೆ ಮಾಡಿದ್ದು ಎಲ್ಲರ ಹುಬ್ಬೇರಿಸಿತ್ತು. ಇದೇ ರೀತಿಯ ಹಲವಾರು ವಿದ್ಯಮಾನಗಳಿಂದ ಶಿವಸೇನಾ ಪಕ್ಷವು ರಾಷ್ಟ್ರೀಯತೆಯನ್ನು ಮರೆತಿದೆ ಎಂಬ ವಾದಗಳು ಕೇಳಿಬಂದಿದ್ದವು, ಸ್ವತಹ ಶಿವಸೇನಾ ಪಕ್ಷದ ಕಾರ್ಯಕರ್ತರು ಈ ಮಾತುಗಳನ್ನು ಹೇಳಿದರು. ಆದರೆ ಇದ್ದಕ್ಕಿದ್ದ ಹಾಗೆ ಇದೀಗ ಶಿವಸೇನಾ ಪಕ್ಷವು ಬಿಜೆಪಿ ಪಕ್ಷಕ್ಕೆ ರಾಷ್ಟ್ರೀಯತೆಯ ಬಗ್ಗೆ ಪಾಠ ಮಾಡಲು ಹೊರಟು ಅಮಿತ್ ಷಾ ರವರಿಗೆ ಬಹಿರಂಗ ಸವಾಲು ಎಸೆದಿದೆ.

ಇದೀಗ ಇದೀಗ ಜೆಎನ್ಯು ಕಾಲೇಜಿನ ತುಕಡೆ ಗ್ಯಾಂಗ್ ನ ಬಗ್ಗೆ ಮಾತನಾಡಿರುವ ಶಿವಸೇನಾ ಪಕ್ಷವು, ತುಕಡೆ ಗ್ಯಾಂಗ್ ವಿರುದ್ಧವಾಗಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು, ಕೇಂದ್ರ ಸರ್ಕಾರದ ಆಕ್ರೋಶ ಕೇವಲ ಹೇಳಿಕೆಗಳಿಗೆ ಸೀಮಿತವಾಗಬಾರದು. ಯಾವುದೇ ಕಾರಣಕ್ಕೂ ದೇಶದ ವಿರುದ್ಧ ಹೇಳಿಕೆ ನೀಡುವವರರಿಂದ ಹಿಂದೆ ಸರಿಯಬಾರದು. ಇದು ದೇಶದಲ್ಲಿ ಇರುವ ಎಲ್ಲಾ ತುಕಡೆ ಗ್ಯಾಂಗ್ ಗಳಿಗೆ ಪಾಠ ಕಲಿಸಲು ಸರಿಯಾದ ಸಮಯವಾಗಿದೆ, ಅಷ್ಟೇ ಅಲ್ಲದೆ ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ಸು ತೆಗೆದುಕೊಳ್ಳಲು ಸಿದ್ಧವಿದ್ದೇವೆ ಎಂದು ಘೋಷಣೆ ಮಾಡಿದೆ. ಆದ ಕಾರಣ ಈ ಕೂಡಲೇ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಆದೇಶ ಹೊರಡಿಸಿ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ಸು ಪಡೆಯಬೇಕು ಎಂದು ಹೇಳಿಕೆ ನೀಡಿದೆ.