ಚೊಚ್ಚಲ ಪಂದ್ಯದಲ್ಲಿ ಆರ್ಸಿಬಿ ಬೌಲರ್ ಸೈನಿ ಅದ್ಭುತ ಯಾರ್ಕರ್ ಎಸೆದು ರೋಸ್ಟನ್ ಚೇಸ್ ರವರನ್ನು ಔಟ್ ಮಾಡಿದ್ದು ಹೇಗೆ ಗೊತ್ತಾ?? ವಿಡಿಯೋ ನೋಡಿ

. ಈ ಪಂದ್ಯದಲ್ಲಿ ಗೆಲುವು ಸಾದಿಸುವ ಮೂಲಕ ಭಾರತ ತಂಡವು ಬರೋಬ್ಬರಿ 10 ಸರಣಿಗಳನ್ನು ಸತತವಾಗಿ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆಯನ್ನು ಬರೆದಿದೆ. ಈ ಪಂದ್ಯದಲ್ಲಿ ಆರ್ಸಿಬಿ ತಂಡದ ಆಟಗಾರ ಸೈನಿ ರವರು ಏಕದಿನ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರು. ಚೊಚ್ಚಲ ಪಂದ್ಯದಲ್ಲಿ ಭಾರತೀಯ ವೇಗದ ಬೌಲರ್ ಸೈನಿ ರವರು ಅದ್ಭುತ ಎಸೆತವನ್ನು ಎಸೆದು ವೆಸ್ಟ್ ಇಂಡಿಯನ್ ಆಲ್‌ರೌಂಡರ್ ರೋಸ್ಟನ್ ಚೇಸ್ ರವರನ್ನು ಔಟ್ ಮಾಡಿದ್ದಾರೆ, ಈ ವಿಡಿಯೋ ಕೆಳಗಡೆ ಇದೆ ಒಮ್ಮೆ ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ

ಗಾಯಗೊಂಡ ದೀಪಕ್ ಚಹರ್‌ಗೆ ಬದಲಿಯಾಗಿ ಈ ಪಂದ್ಯದಲ್ಲಿ ಸೇರ್ಪಡೆಗೊಂಡ ಸೈನಿ ಅವರನ್ನು ಏಳನೇ ಓವರ್‌ನಲ್ಲಿ ಮೊದಲ ಬದಲಾವಣೆಯ ಬೌಲರ್ ಆಗಿ ದಾಳಿಗೆ ಪರಿಚಯಿಸಲಾಯಿತು. ತಮ್ಮ ಎರಡನೇ ಸ್ಪೆಲ್ ನಲ್ಲಿ 32 ನೇ ಓವರ್‌ನ ಎರಡನೇ ಎಸೆತದಲ್ಲಿ ಸೈನಿ ವೆಸ್ಟ್ ಇಂಡೀಸ್‌ನ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್‌ಮಿಯರ್ (37) ರನ್ನು ತಮ್ಮ ಮೊದಲ ಏಕದಿನ ವಿಕೆಟ್ ವಿಕೆಟ್ ಪಡೆದರು. ಇದಾದ ನಂತರ ಭದ್ರವಾಗಿ ನೆಲೆಯೂರಿ ಭಾರತ ತಂಡಕ್ಕೆ ತಲೆನೋವಾಗಿದ್ದ ಚೇಸ್ ರವರು ಮೂರು ಬೌಂಡರಿಗಳ ಸಹಾಯದಿಂದ 38 (48) ಗಳಿಸಿದ್ದರು, ಆಗ ತಮ್ಮ ಅಭೂತ ಎಸೆತದ ಮೂಲಕ ಸೈನಿ ರವರು ಚೇಸ್ ರವರನ್ನು ಔಟ್ ಮಾಡುವಲ್ಲಿ ಯಶಸ್ವಿ ಯಾದರು. ಅವರ ಈ ಎಸೆತವು ಇದೀಗ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.

Facebook Comments

Post Author: Ravi Yadav