ಉದ್ಧವ್ ಠಾಕ್ರೆ ಗೆ ಬಾರಿ ಮುಖಭಂಗ !! ತನ್ನ ಸಿದ್ಧಾಂತ ಮರೆತ ಶಿವಸೇನಾ ಪಕ್ಷಕ್ಕೆ ಶಾಕ್ ನೀಡಿದ ಸೋನಿಯಾ ಗಾಂಧಿ ! ಬಿಜೆಪಿ ಫುಲ್ ಖುಷ್ !

ಉದ್ಧವ್ ಠಾಕ್ರೆ ಗೆ ಬಾರಿ ಮುಖಭಂಗ !! ತನ್ನ ಸಿದ್ಧಾಂತ ಮರೆತ ಶಿವಸೇನಾ ಪಕ್ಷಕ್ಕೆ ಶಾಕ್ ನೀಡಿದ ಸೋನಿಯಾ ಗಾಂಧಿ ! ಬಿಜೆಪಿ ಫುಲ್ ಖುಷ್ !

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡು ಕಣಕ್ಕಿಳಿದ ಬಿಜೆಪಿ ಹಾಗೂ ಶಿವಸೇನಾ ಪಕ್ಷಗಳು ಮ್ಯಾಜಿಕ್ ನಂಬರ್ ಪಡೆದುಕೊಂಡರೂ ಸಹ ಸರ್ಕಾರ ರಚನೆ ಮಾಡಲು ಮುಂದಾಗಿಲ್ಲ. ಎರಡು ಪಕ್ಷಗಳ ನಡುವೆ ಸಿಎಂ ಕುರ್ಚಿ ಗಾಗಿ ಕಾಳಗ ತಾರಕಕ್ಕೇರಿದೆ. ಕಡಿಮೆ ಸೀಟು ಪಡೆದುಕೊಂಡರೂ ಶಿವಸೇನಾ ಪಕ್ಷ ತನ್ನ ಪಟ್ಟು ಬಿಡುತ್ತಿಲ್ಲ. ಶೇಕಡ 70ರಷ್ಟು ಕ್ಷೇತ್ರಗಳನ್ನು ಗೆದ್ದುಕೊಂಡಿರುವ ಬಿಜೆಪಿ ಪಕ್ಷ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಲು ಸಿದ್ಧವಾಗಿಲ್ಲ.

ಒಂದೆಡೇ ಬಿಜೆಪಿ ಪಕ್ಷದ ಜೊತೆ ಸಿಎಂ ಕುರ್ಚಿ ನೀಡದೇ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ ಶಿವಸೇನಾ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ರವರು ಮತ್ತೊಂದೆಡೆ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸೋಣ ಎಂದು ಕರೆದಾಗ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ ನೀಡುವಂತೆ ಉತ್ತರ ನೀಡಿದ್ದರು. ಹೊಟ್ಟೆ ಹಸಿದ ಮಾತ್ರಕ್ಕೆ ಹುಲಿ ಎಂದಿಗೂ ಹುಲ್ಲು ತಿನ್ನುವುದಿಲ್ಲ ಎಂದು ಹೇಳುವ ಮೂಲಕ ಹಿಂದುತ್ವ ವಿರೋಧಿ ಸಿದ್ದಾಂತವನ್ನು ಅನುಸರಿಸುತ್ತಿರುವ ಕಾರಣ ನಿಮ್ಮ ಜೊತೆ ಮೈತ್ರಿ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದರು.

ಬಹುಶಃ ಅಂದು ಬಿಜೆಪಿ ಪಕ್ಷ ಮುಖ್ಯಮಂತ್ರಿ ಕುರ್ಚಿಯನ್ನು ಹಂಚಿಕೊಳ್ಳಲು ಮುಂದೆ ಬರುತ್ತದೆ ಎಂದು ಉದ್ಧವ್ ಠಾಕ್ರೆ ಅಂದು ಕೊಂಡಿದ್ದರು ಎಂದು ಕಾಣುತ್ತದೆ. ಅದೇ ಕಾರಣಕ್ಕಾಗಿ ನಿಮ್ಮ ಜೊತೆ ಮೈತ್ರಿ ಇಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದ್ದರು. ಆದರೆ ಇದೀಗ ಬಿಜೆಪಿ ಪಕ್ಷ ಮುಖ್ಯಮಂತ್ರಿ ಸ್ಥಾನವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದು ತಿಳಿದ ತಕ್ಷಣ, ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲು ಶಿವಸೇನಾ ಪಕ್ಷವು ಪ್ರಯತ್ನ ಪಡುತ್ತಿದೆ ಎಂಬ ಸುದ್ದಿ ಹೊರ ಬಿದ್ದಿತ್ತು. ಆದರೆ ಶಿವಸೇನಾ ಪಕ್ಷಕ್ಕೆ ಇದೀಗ ಸೋನಿಯಾ ಗಾಂಧಿ ಅವರು ಅಂದು ಮಾಡಿದ ಮುಜುಗರವಾಗಿ ತಕ್ಕ ತಿರುಗೇಟು ನೀಡಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಸೋನಿಯಾ ಗಾಂಧಿ ರವರು, ಶಿವಸೇನಾ ಪಕ್ಷಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕದಲ್ಲಿ ವಿಭಿನ್ನ ಹೇಳಿಕೆಗಳು ಕೇಳಿ ಬಂದ ಕಾರಣ ಸ್ಪಷ್ಟನೆ ನೀಡಿ, ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಶಿವಸೇನಾ ಪಕ್ಷದ ಸಿದ್ಧಾಂತ ಸಂಪೂರ್ಣ ಭಿನ್ನವಾಗಿದೆ ಹಾಗೂ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿರುವ ಕಾರಣ ಯಾವುದೇ ಕಾರಣಕ್ಕೂ ಶಿವಸೇನಾ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ. ಜನರು ನಮ್ಮನ್ನು ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತು ಕೊಳ್ಳುವಂತೆ ಆದೇಶ ನೀಡಿದ್ದಾರೆ ನಾವು ಜನರ ಆದೇಶವನ್ನು ಪಾಲಿಸುತ್ತೇವೆ. ಸರ್ಕಾರ ರಚನೆ ಮಾಡಲು ಸಾಧ್ಯವಾದರೇ ಮಾಡಿ ಇಲ್ಲ ಮತ್ತೊಮ್ಮೆ ಚುನಾವಣೆಯನ್ನು ಎದುರಿಸುತ್ತೇವೆ ಎಂದಿದ್ದಾರೆ.