ಕಾಂಗ್ರೆಸ್ ಸದಸ್ಯರ ರಾಜೀನಾಮೆ ನಂತರ ಮತ್ತೊಂದು ಗುದ್ದು ನೀಡಿ ಇಡೀ ಕ್ಷೇತವನ್ನು ಕೇಸರಿಮಯ ಮಾಡಿದ ರಮೇಶ್ !

ಕಾಂಗ್ರೆಸ್ ಸದಸ್ಯರ ರಾಜೀನಾಮೆ ನಂತರ ಮತ್ತೊಂದು ಗುದ್ದು ನೀಡಿ ಇಡೀ ಕ್ಷೇತವನ್ನು ಕೇಸರಿಮಯ ಮಾಡಿದ ರಮೇಶ್ !

ಇದೀಗ ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹೇಗಾದರೂ ಮಾಡಿ ಅಧಿಕಾರಯುತ ಬಿಜೆಪಿ ಪಕ್ಷವನ್ನು ಸೋಲಿಸುವ ಮೂಲಕ ಒಂದೇ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ಉರುಳಿಸಿದ ಪಕ್ಷಾಂತರ ಶಾಸಕರಿಗೆ ಬುದ್ದಿ ಕಲಿಸಿ ಹಾಗೂ ಅಧಿಕಾರದಲ್ಲಿ ಇರುವ ಬಿಜೆಪಿ ಪಕ್ಷವನ್ನು ಕೆಳಗಿಳಿಸಲು ಈಗಾಗಲೇ ತಯಾರಿ ನಡೆಸಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಹಲವಾರು ಕ್ಷೇತ್ರಗಳಲ್ಲಿ ಹೊಸ ಹೊಸ ರೀತಿಯ ಸವಾಲುಗಳು ಎದುರಾಗುತ್ತಿವೆ.

ಕೇವಲ ಮೂರು ದಿನಗಳ ಹಿಂದಷ್ಟೇ ಗೋಕಾಕ್ ಕ್ಷೇತ್ರದಲ್ಲಿ ತನ್ನ ಬಲದಿಂದ 23 ಪಂಚಾಯತ್ ಸದಸ್ಯರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಂತೆ ಮಾಡಿ ಉಪ ಚುನಾವಣೆಗೆ ಅಭ್ಯರ್ಥಿ ಘೋಷಿಸುವ ಮುನ್ನವೇ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದ್ದ ರಮೇಶ್ ಜಾರಕಿಹೊಳಿ ರವರು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಗುದ್ದು ನೀಡಿದ್ದಾರೆ. ಈ ಹೊಡೆತದ ಮೂಲಕ ಒಂದು ಕಡೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ರೀತಿಯ ದೊಡ್ಡ ಸವಾಲು ಎದುರಾದರೆ ಮತ್ತೊಂದೆಡೆ ಬಿಜೆಪಿ ಪಕ್ಷ ಗೋಕಾಕ್ ಕ್ಷೇತ್ರದ ಮೂಲೆ ಮೂಲೆಯಲ್ಲೂ ಬಲಿಷ್ಠವಾಗಿದೆ.

ಇಂದು ನಡೆದ ಮಹತ್ವದ ರಾಜಕೀಯ ವಿದ್ಯಮಾನದಲ್ಲಿ  ಗೋಕಾಕ್ ಕ್ಷೇತ್ರದ ನಗರಸಭೆ ಹಾಗೂ ಕೊನ್ನೂರು ಪುರಸಭೆಯ ಜಿಲ್ಲಾ ಪಕ್ಷೇತರ ಸದಸ್ಯರು ರಮೇಶ್ ಜಾರಕಿಹೊಳಿ ರವರಿಗೆ ಬೆಂಬಲ ಸೂಚಿಸಿ, ಇಂದು ಬಿಜೆಪಿ ಪಕ್ಷದ ಸಂಸದ ಸುರೇಶ ಅಂಗಡಿ ರವರನ್ನು ಭೇಟಿ ಮಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ರಮೇಶ್ ಜಾರಕಿಹೊಳಿ ಅವರಿಗೆ ಬೆಂಬಲ ನೀಡುತ್ತೇವೆ ಎಂದು ಘೋಷಿಸಿದ್ದಾರೆ.

ಈ ಮೂಲಕ ಬಿಜೆಪಿ ಪಕ್ಷದ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರ ಬೆಂಬಲದೊಂದಿಗೆ ಮುನ್ನುಗ್ಗುತ್ತಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಇದೀಗ ಎಲ್ಲಾ ಪಕ್ಷೇತರರು ಸಹ ಬೆಂಬಲ ನೀಡಿರುವ ಕಾರಣ ರಮೇಶ್ ಜಾರಕಿಹೊಳಿ ಅವರ ಕ್ಷೇತ್ರವಾದ ಗೋಕಾಕ್ ನಲ್ಲಿ ಬಿಜೆಪಿ ಪಕ್ಷ ಮೂಲೆ ಮೂಲೆಯಲ್ಲಿ ಬಲಗೊಂಡಿದೆ. ಒಂದು ವೇಳೆ ಇದೇ ರೀತಿಯ ಬೆಳವಣಿಗೆ ವಿಧಾನಸಭಾ ಚುನಾವಣೆ ಮುಗಿಯುವವರೆಗೂ ಕಾಣಿಸಿದಲ್ಲಿ ರಮೇಶ್ ಜಾರಕಿಹೊಳಿ ರವರು ಹಿಂದೆಂದೂ ಕಾಣದಂತಹ ಭರ್ಜರಿ ಗೆಲುವನ್ನು ಕಂಡು ಮತ್ತೊಮ್ಮೆ ಶಾಸಕರಾಗಿ ವಿಧಾನಸೌಧಕ್ಕೆ ಕಾಲಿಡಲಿದ್ದಾರೆ. ಆದರೆ ಈ ಬಾರಿ ಬಿಜೆಪಿ ಪಕ್ಷದ ಶಾಸಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.