ವಿರಾಟ್ ಕೊಹ್ಲಿ ರವರ ನಾಯಕತ್ವದ ಬಗ್ಗೆ ಕ್ರಿಕೆಟ್ ದಿಗ್ಗಜ ಲಾರ ಹೇಳಿದ್ದೇನು ಗೊತ್ತಾ??

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿ ಇಂದಿಗೂ ಟೆಸ್ಟ್ ಕ್ರಿಕೆಟ್ ನಲ್ಲಿ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿರುವ ದಿಗ್ಗಜ ಬ್ರಿಯಾನ್ ಲಾರ ರವರು ಇದೀಗ ಭಾರತ ತಂಡದ ಅಪ್ರತಿಮ ನಾಯಕ ವಿರಾಟ್ ಕೊಹ್ಲಿ ರವರ ಬಗ್ಗೆ ಹಾಗೂ ಅವರ ನಾಯಕತ್ವದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೊರ ಹಾಕಿದ್ದಾರೆ. ವಿರಾಟ್ ಕೊಹ್ಲಿ ರವರ ನಾಯಕತ್ವದ ಬಗ್ಗೆ ಮಾಧ್ಯಮ ದವರು ದಿಗ್ಗಜ ಬ್ರಿಯಾನ್ ಲಾರಾ ರವರ ಬಳಿ ಅವರ ಅನಿಸಿಕೆಯನ್ನು ಹಂಚಿ ಕೊಳ್ಳುವಂತೆ ಮನವಿ ಮಾಡಿದಾಗ ಬ್ರಿಯಾನ್ ಲಾರಾ ರವರು ಈ ಮಾತುಗಳನ್ನು ಹೇಳಿದ್ದಾರೆ. ಎಲ್ಲಾ ಆಟಗಾರರಂತೆ ವಿರಾಟ್ ಕೊಹ್ಲಿ ಅವರ ನಾಯಕತ್ವ ಹಾಗೂ ಅದ್ವಿತೀಯ ಬ್ಯಾಟಿಂಗ್ ಅನ್ನು ಮೆಚ್ಚಿರುವ ಬ್ರಿಯಾನ್ ಲಾರಾ ರವರು, ಮಾತನಾಡುತ್ತಾ ಹೀಗೆ ಹೇಳಿದ್ದಾರೆ.

ವಿರಾಟ್ ಕೊಹ್ಲಿ ರವರು ಕ್ರಿಕೆಟ್ ಜಗತ್ತಿನ ಒಬ್ಬ ಅದ್ವಿತೀಯ ಅಪ್ರತಿಮ ನಾಯಕ, ಇನ್ನು ಅವರ ಆಟದ ವೈಖರಿಯ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಕ್ರಿಕೆಟ್ ಜಗತ್ತಿನ ಎಲ್ಲಾ ಮಾದರಿಗೂ ತಕ್ಕಂತೆ ಬ್ಯಾಟ್ ಬೀಸುತ್ತಾರೆ. ನಾಯಕನಾಗಿ ಮಾದರಿ ರೂಪದಲ್ಲಿ ತಂಡವನ್ನು ಮುನ್ನಡೆಸುತ್ತಾರೆ. ನಾಯಕನಿಗೆ ಇರಬೇಕಾದ ಎಲ್ಲಾ ಗುಣಗಳು ವಿರಾಟ್ ಕೊಹ್ಲಿ ಅವರಲ್ಲಿ ಕಾಣಸಿಗುತ್ತವೆ, ಕೇವಲ ಮೈದಾನದಲ್ಲಿ ಮಾತ್ರ ವಲ್ಲದೆ ಮೈದಾನದಿಂದ ಹೊರಗೂ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಭಾರತವು ಮಹೇಂದ್ರ ಸಿಂಗ್ ಧೋನಿ ರವರಂತಹ ನಾಯಕತ್ವವನ್ನು ಕಳೆದುಕೊಂಡ ಸಂದರ್ಭದಲ್ಲಿ ಅವರ ಸ್ಥಾನವನ್ನು ಮುನ್ನಡೆಸಲು ಸರಿಯಾದ ನಾಯಕನಾಗಿ ಕೊಹ್ಲಿ ಬೆಳೆದು ನಿಂತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ರವರು ಹಾಕಿರುವ ಅಡಿಪಾಯವನ್ನು ಮತ್ತಷ್ಟು ಮೇಲಕ್ಕೆ ಬೆಳೆಸಿಕೊಂಡು ಹೋಗುವ ಎಲ್ಲ ಗುಣಗಳು ವಿರಾಟ್ ಕೊಹ್ಲಿ ರವರಲ್ಲಿ ಇವೇ ಎಂದು ಬಣ್ಣಿಸಿದ್ದಾರೆ.

Facebook Comments

Post Author: Ravi Yadav