ಅಷ್ಟಕ್ಕೂ ಹನುಮಂತ ಬಿಗ್ ಬಾಸ್ ಮನೆಗೆ ಯಾಕೆ ಹೋಗಲಿಲ್ಲ ಗೊತ್ತಾ?? ಡಿ ಬಾಸ್ ರವರಿಂದ ಚೇಂಜ್ ಆಯ್ತು ಪ್ಲಾನ್

ಸರಿಗಮಪ ಹನುಮಂತನ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ತನ್ನ ಮುಗ್ದತೆ ಹಾಗೂ ಕಂಠ ಸಿರಿಯಿಂದ ಇಡೀ ಕರ್ನಾಟಕ ಜನತೆಯೇ ಮನ ಗೆದ್ದು ಜಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ಸರಿಗಮಪ ಸ್ಪರ್ಧೆಯಲ್ಲಿ ಗೆದ್ದು ಬೀಗಿದ್ದರು. ಅಷ್ಟೇ ಅಲ್ಲದೆ ಡಾನ್ಸ್ ಸ್ಪರ್ಧೆಯಲ್ಲಿಯೂ ಸಹ ಭಾಗವಹಿಸಿ ಮತ್ತೊಮ್ಮೆ ಸದ್ದು ಮಾಡಿದ್ದರು. ಇದೀಗ ಮತ್ತೊಮ್ಮೆ ಸದ್ದು ಮಾಡಲು ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎಂಬ ಬಲವಾದ ಮಾತುಗಳು ಕೇಳಿಬಂದ್ದಿದ್ದವು. ಇನ್ನು ಬಿಗ್ ಬಾಸ್ ತಂಡವು ಸಹ ಹನುಮಂತ ರವರ ಅಭಿಮಾನಿಗಳ ಬಗ್ಗೆ ತಿಳಿದಿದ್ದ ಕಾರಣ ಒಂದು ವೇಳೆ ಹನುಮಂತ ರವರು ಮನೆ ಒಳಗೆ ಬಂದರೆ ಖಚಿತವಾಗಿ ಬಿಗ್ ಬಾಸ್ ಕಾರ್ಯಕ್ರಮ ಭರ್ಜರಿ TRP ರೇಟಿಂಗ್ ಪಡೆದುಕೊಳ್ಳುತ್ತದೆ ಎಂಬುದನ್ನು ಬಹಳ ಸುಲಭವಾಗಿ ತಿಳಿದು ಕೊಂಡಿತ್ತು.

ಅದೇ ಕಾರಣಕ್ಕಾಗಿ ಬಿಗ್ ಬಾಸ್ ತಂಡವು ಹನುಮಂತ ರವರ ಮುಂದೆ ಭರ್ಜರಿ ಆಫರ್ ಇಟ್ಟಿತ್ತು. ಹನುಮಂತ ರವರು ಕೂಡ ಬಿಗ್ ಬಾಸ್ ಆಫರ್ ಅನ್ನು ಒಪ್ಪಿಕೊಳ್ಳುವ ನಿರ್ಧಾರ ಮಾಡಿದ್ದರು. ಆದರೆ, ಕೊನೆ ಹಂತದಲ್ಲಿ ಖ್ಯಾತ ನಟ ದರ್ಶನ್ ರವರು ಹನುಮಂತನ್ನು ಮನೆಗೆ ಕರೆಸಿ, ನೀನು ಹೊರಗಿನ ಪ್ರಪಂಚದಲ್ಲಿ ಕಲಿಯಬೇಕಾದದ್ದು ಬಾರಿ ಇದೆ. ನೀನು ಹಳ್ಳಿಯಿಂದ ಬಂದಿರುವ ಕಾರಣ ಏಕಾ ಏಕಿ ಅಲ್ಲಿ ಅಡ್ಜಸ್ಟ್ ಆಗುವುದು ಕಷ್ಟ. ಅಷ್ಟೇ ಅಲ್ಲದೆ ನಿನಗೆ ಈಗಾಗಲೇ ಹಲವಾರು ಅವಕಾಶಗಳು ಬರುತ್ತಿವೆ, ಅವನೆಲ್ಲ ಸಧುಪಯೋಗ ಪಡೆಸಿಕೊ. ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಬೇಡ, ನಿನಗೆ ಅಷ್ಟು ಆಸೆ ಇದ್ದರೆ ಮುಂದಿನ ಬಾರಿ ಬಿಗ್ ಬಾಸ್ ಮನೆಗೆ ಹೋಗು ಎಂದು ಬುದ್ದಿವಾದ ಹೇಳಿದ್ದಾರೆ. ಇನ್ನು ಇವರ ಮಾತಿಗೆ ಬೆಲೆ ಕೊಟ್ಟು ಹನುಮಂತ ರವರು ಕೂಡ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾನೆ.

Post Author: Ravi Yadav