ಡಿಕೆಶಿ ಗೆ ಮರ್ಮಾಘಾತ: ಸುರೇಶ್ ಗು ಬಿಗ್ ಶಾಕ್: ದಾಖಲೆ ಸಮೇತ ಮತ್ತೊಂದು ಅಖಾಡಕ್ಕೆ ಇ.ಡಿ ! ಇ.ಡಿ ಬಾಣ ಕಂಡು ಬೆಚ್ಚಿಬಿದ್ದ ಕಾಂಗ್ರೆಸ್

ಡಿಕೆಶಿ ಗೆ ಮರ್ಮಾಘಾತ: ಸುರೇಶ್ ಗು ಬಿಗ್ ಶಾಕ್: ದಾಖಲೆ ಸಮೇತ ಮತ್ತೊಂದು ಅಖಾಡಕ್ಕೆ ಇ.ಡಿ ! ಇ.ಡಿ ಬಾಣ ಕಂಡು ಬೆಚ್ಚಿಬಿದ್ದ ಕಾಂಗ್ರೆಸ್

ಇದೀಗ ಯಾಕೋ ಡಿ ಕೆ ಶಿವಕುಮಾರ್ ರವರ ಅದೃಷ್ಟ ಚೆನ್ನಾಗಿ ಇದ್ದಂತೆ ಕಾಣುತಿಲ್ಲ. ಒಂದು ಪ್ರಕರಣ ತನಿಖೆಯನ್ನು ಆರಂಭಿಸಿದ ಇ.ಡಿ ಅಧಿಕಾರಿಗಳು ಹಲವಾರು ದಾಖಲೆಗಳನ್ನು ವಶ ಪಡಿಸಿಕೊಂಡು, ಡಿ ಕೆ ಶಿವಕುಮಾರ್ ರವರ ಮೇಲೆ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ನ್ಯಾಯಾಲಯದಲ್ಲಿ ಅಕ್ಷರಸಹ ದಾಖಲೆಗಳ ಸುರಿಮಳೆಯನ್ನು ಸುರಿಸಿರುವ ಇ.ಡಿ ಅಧಿಕಾರಿಗಳು ಡಿ ಕೆ ಶಿವಕುಮಾರ್ ರವರು ಜಾಮೀನು ಪಡೆಯಲು ಸಹ ಹರ ಸಾಹಸ ಪಡುವಂತೆ ಮಾಡಿದ್ದಾರೆ. ಹಲವಾರು ಆರೋಗ್ಯದ ಕಾರಣಗಳನ್ನು ನೀಡಿದರೂ ಸಹ ನ್ಯಾಯಾಲಯ ಜಾಮೀನು ಸಹ ನೀಡಲು ಸಿದ್ಧವಾಗಿಲ್ಲ ಎಂದರೇ ಎಷ್ಟರ ಮಟ್ಟಿಗೆ ಇ.ಡಿ ಪರ ವಕೀಲ ದಾಖಲೆಗಳನ್ನು ಇಟ್ಟಿಕೊಂಡು ವಾದ ಮಾಡಿರಬೇಕು ಎಂದು ನೀವೇ ಅರ್ಥ ಮಾಡಿಕೊಳ್ಳಿ.

ಇಷ್ಟಕ್ಕೆ ಸುಮ್ಮನಾಗದ ಇ.ಡಿ ಅಧಿಕಾರಿಗಳು ಡಿ ಕೆ ಶಿವಕುಮಾರ್ ರವರ ಪುತ್ರಿ ಐಶ್ವರ್ಯ ರವರ ಆಸ್ತಿ ದಾಖಲೆಗಳನ್ನು ಹೊರತೆಗೆದು ಈಗಾಗಲೇ ವಿಚಾರಣೆ ನಡೆಸಿದ್ದಾರೆ. ಇನ್ನು ಬಿನಾಮಿ ಆಸ್ತಿ ಪ್ರಕರಣದಲ್ಲಿ ಶಾಸಕಿ ಲಕ್ಷಿ ಹೆಬ್ಬಾಳ್ಕರ್ ರವರಿಗೂ ಸಹ ನೋಟೀಸ್ ನೀಡಿರುವ ಇ.ಡಿ ಅಧಿಕಾರಿಗಳು ಇಷ್ಟಕ್ಕೆ ಸುಮ್ಮನಾಗುವಂತೆ ಕಾಣುತಿಲ್ಲ. ಇದೀಗ ಡಿ ಕೆ ಶಿವಕುಮಾರ್ ರವರ ಭುಜ ಬಲವನ್ನು ಕಸಿದುಕೊಳ್ಳಲು ಮಹತ್ವದ ಹೆಜ್ಜೆ ಇಟ್ಟಿರುವ ಇ.ಡಿ ಅಧಿಕಾರಿಗಳ ನಡೆ ನೋಡಿ ಕೇವಲ ಡಿ ಕೆ ಶಿವಕುಮಾರ್ ಹಾಗೂ ಕುಟುಂಬ ಅಷ್ಟೇ ಅಲ್ಲದೆ, ಉಪ ಚುನಾವಣೆಗೆ ಸಿದ್ಧವಾಗುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ದೊಡ್ಡ ಶಾಕ್ ನೀಡಿದೆ.

ಅಷ್ಟಕ್ಕೂ ಇ.ಡಿ ಅಧಿಕಾರಿಗಳ ನಡೆ ಏನು? ಹಾಗೂ ಈಗಾಗಲೇ ಇ.ಡಿ ಅಧಿಕಾರಿಗಳು ಕಲೆ ಹಾಕಿರುವ ದಾಖಲೆಗಳು ಏನು ಗೊತ್ತಾ?? ತಿಳಿಯಲು ಒಮ್ಮೆ ಸಂಪೂರ್ಣ ಓದಿ

ಡಿ ಕೆ ಶಿವಕುಮಾರ್ ರವರ ಭುಜ ಬಲವಾಗಿರುವ ಸಹೋದರ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯದ ಏಕೈಕ ಸಂಸದ ಸುರೇಶ್ ಕುಮಾರ್ ರವರ ಆಸ್ತಿಯ ಮೇಲೆ ಇ.ಡಿ ಅಧಿಕಾರಿಗಳು ಅನುಮಾನ ವ್ಯಕ್ತ ಪಡಿಸಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ವಕೀಲ ಕೆ.ಎಂ. ನಟರಾಜ್ ರವರು ಈ ಕುರಿತು ಮಹತ್ವದ ಮಾಹಿತಿಗಳನ್ನು ನ್ಯಾಯಾಲಯದಲ್ಲಿ ಮಂಡಿಸಿ ವಾದ ಮಾಡಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಉಪ ಚುನಾವಣೆ ಹತ್ತಿರ ಇರುವ ಕಾರಣ ಇನ್ನಿಲ್ಲದ ಆತಂಕ ಮೂಡಿದೆ. ಯಾಕೆಂದರೆ ಒಂದು ವೇಳೆ ಸುರೇಶ್ ಕುಮಾರ್ ರವರು ಸಹ ಜೈಲು ಸೇರಿದರೆ ಕಾಂಗ್ರೆಸ್ ಪಕ್ಷಕ್ಕೆ ಬಾರಿ ಮುಖಭಂಗ ಉಂಟಾಗಲಿದೆ.

ಅಷ್ಟೇ ಅಲ್ಲದೆ, ಸುರೇಶ್ ಕುಮಾರ್ ರವರಿಗೆ ಸೇರಿರುವ ಬಾರಿ ಮೂಲ್ಯದ ಒಟ್ಟು 27 ಆಸ್ತಿಗಳ ದಾಖಲೆಗಳನ್ನು ಕಲೆಹಾಕಿರುವ ಇ.ಡಿ ಅಧಿಕಾರಿಗಳು, ಇದರಲ್ಲಿ ಒಟ್ಟು 10 ಆಸ್ತಿಗಳನ್ನು ಸಂಪೂರ್ಣ ವಾಗಿ ನಗದು ರೂಪದಲ್ಲಿ ಖರೀದಿಸಲಾಗಿದೆ. ಇನ್ನುಳಿದ ಆಸ್ತಿಗಳನ್ನು ತಂದೆಯಿಂದ ಪಡೆದುಕೊಳ್ಳಲಾಗಿದೆ. ಅದರಲ್ಲಿ ಅವರ ತಂದೆಗೆ ಇಷ್ಟು ಆಸ್ತಿ ಸಂಪಾದನೆ ಮಾಡಲು ಹೇಗೆ ಸಾಧ್ಯವಾಯಿತು? ಇವರ ತಂದೆಯವರ ಯಾವುದೇ ಆದಾಯದ ಮೂಲಗಳನ್ನು ತಿಳಿಸಿಲ್ಲ. ಇದನ್ನು ನಾವು ಹುಡುಕಲು ಸಾಧ್ಯವಿಲ್ಲ. ಡಿ ಕೆ ಶಿವಕುಮಾರ್ ರವರು ಯಾವುದೇ ಮಾಹಿತಿ ನೀಡುತ್ತಿಲ್ಲ. ಇಷ್ಟು ಸಾಲದು ಎಂಬಂತೆ ಸಾವಿರಾರು ಎಕರೆ ಕೃಷಿ ಜಮೀನನ್ನು ಹೊಂದಿರುವ ಬಗ್ಗೆ ದಾಖಲೆಗಳನ್ನು ಇ.ಡಿ ಅಧಿಕಾರಿಗಳು ಕಲೆ ಹಾಕಿ, ಡಿ ಕೆ ಸುರೇಶ್ ರವರಿಗೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.