ಕೈಕೊಟ್ಟ ಕಾಶ್ಮೀರದ ರಾಜ್ಯಪಾಲರು ! ಕೇಂದ್ರ ಸರ್ಕಾರ ವಿರೋಧಿಗಳಿಗೆ ಮರ್ಮಾಘಾತ

ಕೈಕೊಟ್ಟ ಕಾಶ್ಮೀರದ ರಾಜ್ಯಪಾಲರು ! ಕೇಂದ್ರ ಸರ್ಕಾರ ವಿರೋಧಿಗಳಿಗೆ ಮರ್ಮಾಘಾತ

ಕಳೆದ ಕೆಲವು ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ನಿಮಗೆ ಮಾಹಿತಿ ಈಗಾಗಲೇ ತಿಳಿದಿದೆ. ಕೇಂದ್ರ ಸರ್ಕಾರವು ಯಾವುದು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲು ಭರ್ಜರಿ ಸೇನೆಯನ್ನು ರವಾನೆ ಮಾಡಿ, ಉಗ್ರರನ್ನು ಮಟ್ಟ ಹಾಕುವ ಕಾರ್ಯದಲ್ಲಿ ನಿರತವಾಗಿದೆ. ಆದರೆ ವಿಪರ್ಯಾಸವೆಂದರೆ ಇಲ್ಲಿ ಉಗ್ರರನ್ನು ಮಟ್ಟ ಹಾಕುವ ಸೇನೆಯ ವಿರುದ್ಧ ಸಹ ಹಲವಾರು ಜನ ಧ್ವನಿಯೆತ್ತಿದ್ದಾರೆ, ಕೇಂದ್ರ ಸರ್ಕಾರದ ಸೇನೆ ಜಮಾವಣೆ ಮಾಡಿರುವುದರಿಂದ ಕಾಶ್ಮೀರದ ಜನತೆಯಲ್ಲಿ ಭೀತಿ ಸೃಷ್ಟಿಯಾಗುತ್ತಿದೆ, ಪ್ರವಾಸಿಗರು ಯಾಕೆ ವಾಪಸ್ಸಾಗಬೇಕು ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು ಕೆಲವು ಮೂಲಗಳ ಪ್ರಕಾರ ಭಾರತದ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ರವರು ಉಗ್ರರನ್ನು ಮಟ್ಟ ಹಾಕಿ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ತೆಗೆಯಲು ಪಣತೊಟ್ಟಿದ್ದಾರೆ ಎನ್ನಲಾಗಿದೆ. ಒಂದು ವೇಳೆ ವಿಶೇಷ ಸ್ಥಾನಮಾನ ತೆಗೆಯದೆ ಇದ್ದರೂ ಸಹ, ಇಡೀ ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಗಲ್ಲಿ ಗಲ್ಲಿ ಗಳಲ್ಲಿ ಅಡಗಿರುವ ಉಗ್ರರನ್ನು ಹುಡುಕಿ ಹತ್ಯೆ ಮಾಡುವುದಂತೂ ಖಚಿತ. ಈ ಎಲ್ಲ ವಿದ್ಯಮಾನಗಳ ಬೆನ್ನಲ್ಲೇ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ಸು ತೆಡೆದುಕೊಳ್ಳುವ ಬಗ್ಗೆ ಒತ್ತಡ ಆರಂಭವಾಗಿದೆ.

ಹೀಗಿರುವಾಗ ಎಲ್ಲಿ ತಮ್ಮ ಮತ ಬ್ಯಾಂಕುಗಳಿಗೆ ತೊಂದರೆಯಾಗುತ್ತದೆ ಎಂದು ಹಲವಾರು ರಾಜಕೀಯ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಈ ಎಲ್ಲಾ ರಾಜಕಾರಣಿಗಳಿಗೆ ಧೈರ್ಯ ತುಂಬಿದ್ದ ಏಕೈಕ ನಂಬಿಕೆಯೆಂದರೆ ಜಮ್ಮು-ಕಾಶ್ಮೀರದ ರಾಜ್ಯಪಾಲರು, ಜಮ್ಮು-ಕಾಶ್ಮೀರದ ರಾಜ್ಯಪಾಲರು ನಿಮಗೆಲ್ಲರಿಗೂ ತಿಳಿದಿರುವಂತೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನದ ಕುರಿತು ಯಾವುದೇ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳುತ್ತಿಲ್ಲ ಅದರ ಚಿಂತೆ ಬಿಡಿ ಎಂದು ಭರವಸೆ ನೀಡಿದ್ದರು. ಆದರೆ ಇದೀಗ ಯು ಟರ್ನ್ ಹೊಡೆದಿರುವ ರಾಜ್ಯಪಾಲರು, ಇಂದಿನ ಪರಿಸ್ಥಿತಿಯ ಬಗ್ಗೆ ನನಗೆ ತಿಳಿದಿದೆ ಆದರಿಂದ ಮಾತನಾಡಿದೆ, ಆದರೆ ನಾಳೆ ಇಂದ ಏನಾಗುತ್ತದೆ ಎಂದು ನನಗೆ ಮಾಹಿತಿ ಇಲ್ಲ. ಮುಂದೇನಾದರೂ ನನ್ನ ಜವಾಬ್ದಾರಿಯಲ್ಲ ಎಂದು ರಾಜಕೀಯ ನಾಯಕರ ಕೈಬಿಟ್ಟಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಪಾಲರಿಗೆ ತಿಳಿಯದೆ ಸೇನೆಯ ಜೊತೆಗೂಡಿ ಏನೋ ದೊಡ್ಡ ಪ್ಲಾನ್ ಮಾಡಿದೆ ಎನ್ನಲಾಗುತ್ತಿದೆ.