ಜೆಡಿಎಸ್ ಪಕ್ಷಕ್ಕೆ ಬಿಗ್ ಶಾಕ್- ವಿಶ್ವನಾಥ್ ನಂತರ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ಮತ್ತೊಬ್ಬ ಜೆಡಿಎಸ್ ಶಾಸಕ !

ಅದ್ಯಾಕೋ ಜೆಡಿಎಸ್ ಪಕ್ಷದ ಅದೃಷ್ಟ ಚೆನ್ನಾಗಿ ಇದ್ದಂತೆ ಕಾಣುತ್ತಿಲ್ಲ. ಇತ್ತೀಚೆಗಷ್ಟೇ ಅತೃಪ್ತ ಶಾಸಕರು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಮೈತ್ರಿ ಸರ್ಕಾರವನ್ನು ಉರುಳಿಸಿ ಜೆಡಿಎಸ್ ಪಕ್ಷಕ್ಕೆ ಮೊದಲ ಶಾಕ್ ನೀಡಿದ್ದರು, ತದನಂತರ ಪಕ್ಷದಲ್ಲಿ ಹಲವಾರು ಅಪಸ್ವರಗಳು ಕೇಳಿಬಂದಿದ್ದವು. ಇನ್ನೂ ಕೆಲವು ಜೆಡಿಎಸ್ ಪಕ್ಷದ ಶಾಸಕರು ಬಿಜೆಪಿ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡಬೇಕು ಎಂದು ಕುಮಾರಸ್ವಾಮಿ ಅವರ ಮುಂದೆ ನೇರವಾಗಿ ಧ್ವನಿಯೆತ್ತಿದ್ದರು ಎಂದು ಜೆಡಿಎಸ್ ಪಕ್ಷದ ಹಿರಿಯ ಶಾಸಕ ಹಾಗೂ ಕರ್ನಾಟಕದ ಮಾಜಿ ಶಿಕ್ಷಣ ಮಂತ್ರಿ ಜಿಟಿ ದೇವೇಗೌಡ ರವರು ಬಹಿರಂಗವಾಗಿ ಮಾಧ್ಯಮಗಳ ಮುಂದೆ ತಿಳಿಸಿದ್ದರು. ಇಷ್ಟೆಲ್ಲಾ ವಿದ್ಯಮಾನಗಳ ಬಳಿಕ ಉಪ ಚುನಾವಣೆ ಇನ್ನೇನು ಕೆಲವೇ ಕೆಲವು ದಿನಗಳು ಇರುವ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮತ್ತೊಬ್ಬ ಶಾಸಕ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಹೌದು, ತಮ್ಮ ನೇರ ಮಾತುಗಳಿಂದ ಪ್ರಸಿದ್ಧವಾಗಿ, ಸತ್ಯವನ್ನು ಯಾವುದೇ ಅಂಜಿಕೆಯಿಲ್ಲದೆ ಮಾತನಾಡುವ ಜಿ ಟಿ ದೇವೇಗೌಡ ರವರು ಇದೀಗ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಜಿ ಟಿ ದೇವೇಗೌಡ ರವರು ನನ್ನ ಈ ರಾಜಕೀಯ ಭವಿಷ್ಯ ಇನ್ನು ಕೇವಲ ಮೂರುವರೆ ವರ್ಷಗಳು ಮಾತ್ರ, ಚುನಾವಣಾ ನೋವು ಯಾರಿಗೂ ತಿಳಿದಿಲ್ಲ, ಅದು ನನಗೆ ಮಾತ್ರ ಗೊತ್ತು. ಉಳಿದ ಮೂರುವರೆ ವರ್ಷದ ಅಧಿಕಾರವನ್ನು ನನ್ನ ಕ್ಷೇತ್ರದ ಜನತೆಯೊಂದಿಗೆ ಕಳೆದು ನನ್ನ ರಾಜಕೀಯ ನಿವೃತ್ತಿಯ ಬಗ್ಗೆ ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ರವರಿಗೆ ಮಾಹಿತಿ ನೀಡುತ್ತೇನೆ ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಭದ್ರವಾಗಿ ನೆಲೆಯೂರಲು ಕಾರಣವಾಗಿದ್ದ, ಜಿ ಟಿ ದೇವೇಗೌಡ ರವರ ಈ ನಿರ್ಣಯ ಜೆಡಿಎಸ್ ಪಕ್ಷಕ್ಕೆ ದೊಡ್ಡ ಶಾಕ್ ನೀಡಿದೆ, ಕೈಯಲ್ಲಿ ಇರುವ ಕೆಲವೇ ಕೆಲವು ಸ್ಥಾನಗಳನ್ನು ಈ ರೀತಿ ಜೆಡಿಎಸ್ ಪಕ್ಷ ಕಳೆದುಕೊಂಡರೆ ಮುಂದೇನು ಎಂಬ ಚಿಂತೆಯಲ್ಲಿ ತೊಡಗಬೇಕಾಗುತ್ತದೆ.

Post Author: Ravi Yadav