ಮಹತ್ವದ ಬೆಳವಣಿಗೆ: ಬಾಲ ಬಿಚ್ಚಿದ ಮುಫ್ತಿ, ಅಖಾಡಕ್ಕೆ ದೋವೆಲ್, ಕ್ಯಾರೆ ಎನ್ನದ ಅಮಿತ್ ಶಾ ಮಾಡಿದ್ದೇನು ಗೊತ್ತಾ??

ಮಹತ್ವದ ಬೆಳವಣಿಗೆ: ಬಾಲ ಬಿಚ್ಚಿದ ಮುಫ್ತಿ, ಅಖಾಡಕ್ಕೆ ದೋವೆಲ್, ಕ್ಯಾರೆ ಎನ್ನದ ಅಮಿತ್ ಶಾ ಮಾಡಿದ್ದೇನು ಗೊತ್ತಾ??

ಕಳೆದ ಕೆಲವು ಗಂಟೆಗಳ ಹಿಂದಷ್ಟೇ ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳು ಆಗಿರುವ ಮೆಹಬೂಬ ಮುಫ್ತಿ ರವರು ಗೃಹಬಂಧನದಿಂದ ಬಿಡುಗಡೆಯಾಗಿದ್ದರು. ನಿನ್ನೆ ಕಾಶ್ಮೀರದಲ್ಲಿ ಜಮಾವಣೆಗೊಂಡು ಇರುವ ಸೇನೆಯ ಬಗ್ಗೆ ಮಾತನಾಡಲು ಇತರ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಲು ಹೋಗುತ್ತಿದ್ದ ಮೆಹಬೂಬ ಮುಫ್ತಿ ರವರನ್ನು ಭಾರತೀಯ ಸೇನೆಯ ವಶಕ್ಕೆ ತೆಗೆದುಕೊಂಡು ಗೃಹ ಬಂಧನದಲ್ಲಿ ಇರಿಸಿತ್ತು, ಇದೀಗ ಹೊರ ಬಂದಿರುವ ಮೆಹಬೂಬ ಮುಫ್ತಿ ರವರು ಇಷ್ಟಾದರೂ ತಮ್ಮ ರಾಜಕೀಯ ದಾಳಗಳನ್ನು ಮತ್ತೊಮ್ಮೆ ಉರುಳಿಸಲು ಆರಂಭಿಸಿದ್ದಾರೆ. ಕೆಲವೇ ಕೆಲವು ಗಂಟೆಗಳ ಹಿಂದಷ್ಟೇ ಬಿಡುಗಡೆಯಾದ ಮೆಹಬೂಬ ಮುಫ್ತಿ ರವರು ಇದೀಗ ಸರ್ವಪಕ್ಷಗಳ ಸಭೆ ಕರೆದು, ಜಮ್ಮು-ಕಾಶ್ಮೀರದ ಪ್ರಮುಖ ರಾಜಕೀಯ ನಾಯಕರ ಜೊತೆ ಮಾತುಕತೆ ನಡೆಸಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ತೆಗೆಯಲಾಗುತ್ತದೆ ಎಂಬ ಮಾಹಿತಿ ಕೇಳಿಬರುತ್ತಿರುವ ಕಾರಣ ಎಲ್ಲರೂ ಒಗ್ಗಟ್ಟಾಗಿ ಹೋರಾಡಲು ಕೈಜೋಡಿಸುವಂತೆ  ಮನವಿ ಮಾಡಿಕೊಂಡಿದ್ದಾರೆ.

ಆದರೆ ಒಂದೆಡೆ ಮೆಹಬೂಬ ಮುಫ್ತಿ ರವರು ಪ್ರಮುಖ ರಾಜಕೀಯ ನಾಯಕರ ಜೊತೆ ಒಗ್ಗಟ್ಟಾಗಿ ಹೋರಾಡಲು ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ರವರು ಕಾಶ್ಮೀರದ ವಿದ್ಯಮಾನಗಳ ಕುರಿತು ಚರ್ಚೆ ಮಾಡಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಅವರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಅಮಿತ್ ಷಾ ರವರಿಗೆ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ರವರು ಸಾಥ್ ನೀಡಿದ್ದು ಪಾಕಿಸ್ತಾನ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಗ್ರರು ಗಡಿಯೊಳಕ್ಕೆ ನುಗ್ಗುವ ಪ್ರಯತ್ನ ಮಾಡುತ್ತಿರುವುದು ಕಂಡು ಬಂದ ಕಾರಣ ಮತ್ತಷ್ಟು ಸೇನಾ ಜಮಾವಣೆ ಮಾಡಿ ಭದ್ರತೆ ಹೆಚ್ಚಿಸುವ ಬಗ್ಗೆ ಸಭೆ ನಡೆಸಲಾಗಿದೆ. ಹೌದು ಕಾಶ್ಮೀರದಲ್ಲಿ ಮತ್ತಷ್ಟು ಭದ್ರತೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ, ಇನ್ನು ಇದೇ ಸಮಯದಲ್ಲಿ ಅಮಿತ್ ಶಾ ರವರು ಕಾಶ್ಮೀರಕ್ಕೆ ಇನ್ನು ಎರಡು ದಿನಗಳ ನಂತರ ತಾವೇ ತೆರಳಿ ಭದ್ರತಾ ಪಡೆಗಳ ಜೊತೆ ಹಾಗೂ ಸೇನಾ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.