35-A ಬೆಂಬಲಿತ ವಿಪಕ್ಷಗಳಿಗೆ ಮರ್ಮಾಘಾತ !ರಾತ್ರೋ ರಾತ್ರಿ ಅಮಿತ್ ಷಾ ಹೊಡೆತಕ್ಕೆ ತತ್ತರಿಸಿದ ವಿರೋಧಿಗಳು ! ಮತ್ತಷ್ಟು ಖಡಕ್ ಆದೇಶಗಳು ಏನು ಗೊತ್ತಾ??

ಕಾಶ್ಮೀರದಲ್ಲಿ ಸೇನಾ ಚುನಾವಣೆ ಗೊಂಡಿರುವ ಕಾರಣ ರಾಜಕಾರಣಿಗಳು ಹೋರಾಟ ಮಾಡುತ್ತಾರೆ ಎಂಬ ಮುನ್ನೆಚ್ಚರಿಕೆಯಾಗಿ ಕಳೆದ ಎರಡು ದಿನಗಳ ಹಿಂದೆ ಮೆಹಬೂಬಾ ಮುಫ್ತಿ ರವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಆದರೆ, ನಿನ್ನೆ ಮೆಹಬೂಬ ಮುಫ್ತಿ ರವರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಿ ಮುಕ್ತಿ ಗೊಳಿಸಿತ್ತು. ಗೃಹಬಂಧನದ ಕಾರಣ ಅರ್ಥಮಾಡಿಕೊಳ್ಳದ ಮೆಹಬೂಬಾ ಮುಫ್ತಿ ರವರು ತಾವು ಬಿಡುಗಡೆಯಾದ ತಕ್ಷಣ ತಮ್ಮ ವಿರೋಧ ಪಕ್ಷದ ರಾಜಕೀಯ ನಾಯಕರ ಜೊತೆ ಒಗ್ಗಟ್ಟಾಗಿ ಹೋರಾಟ ಮಾಡಲು ಕರೆ ನೀಡಿ, ಸರ್ವ ಪಕ್ಷಗಳ ಸಭೆ ನಡೆಸಿ ವಿಶೇಷ ಸ್ಥಾನ ಮಾನದ ಕುರಿತು ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಲ್ಲಿ ಕಠಿಣ ಹೋರಾಟ ಮಾಡಲು ಕರೆ ನೀಡಿದರು. ಇದಕ್ಕೆ ಸರ್ವ ಪಕ್ಷದ ನಾಯಕರು ಒಪ್ಪಿಗೆ ನೀಡಿ ಕೇಂದ್ರ ಸರ್ಕಾರದ ವಿರುದ್ಧ ಭಾರಿ ಹೋರಾಟದ ನಿರೀಕ್ಷೆ ವ್ಯಕ್ತವಾಗಿತ್ತು.

ಕೂಡಲೇ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರವು, ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ರಕ್ಷಣಾ ಭದ್ರತಾ ಸಲಹೆಗಾರ ಅಜಿತ್ ದೋವಲ್ ರವರು ಒಂದು ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆಸಿ ಭಾರಿ ಕುತೂಹಲ ಮೂಡಿಸಿದರು. ಈ ಸಭೆಯ ನಂತರ ಹಲವಾರು ಕಡಕ್ ಆದೇಶಗಳನ್ನು ಹೊರಡಿಸಿರುವ ಅಮಿತ್ ಶಾ ರವರು, ಕಾಶ್ಮೀರವನ್ನು ಸಂಪೂರ್ಣವಾಗಿ ಸೇನೆಯ ತೆಕ್ಕೆಗೆ ನೀಡಿದ್ದಾರೆ. ಈ ಮೂಲಕ ಅಮಿತ್ ಶಾ ರವರು ಸೇನೆ ನಿಯೋಜನೆ ಮಾಡಿರುವುದು ಕೇವಲ ಉಗ್ರರ ವಿರುದ್ಧ ಹೋರಾಟ ಮಾಡಲು ಅಷ್ಟೇ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆದರೆ ಯಾವ ಕಾರಣಕ್ಕಾಗಿ ಎಂಬುದು ಇಲ್ಲಿಯ ವರೆಗೂ ಯಾರಿಗೂ ತಿಳಿದುಬಂದಿಲ್ಲ. ಅಷ್ಟಕ್ಕೂ ಅಮಿತ್ ಶಾ ರವರು ಆ ತೆಗೆದುಕೊಂಡಿರುವ ನಿರ್ಧಾರ ಗಳಾದರೂ ಏನು ಗೊತ್ತಾ?? ಇಷ್ಟೆಲ್ಲ ನಿರ್ಧಾರಗಳ ವಿರುದ್ಧ ಈಗ ಇಲ್ಲಿನ ವಿರೋಧ ಪಕ್ಷಗಳು ಇಂದು ಪ್ರತಿಭಟನೆ ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ರಾತ್ರೋ ರಾತ್ರಿ ಅಮಿತ್ ಶಾ ರವರ ಆದೇಶದಂತೆ ಭಾರತೀಯ ಸೇನೆಯು ಕಾಶ್ಮೀರದಲ್ಲಿ ಇರುವ ಪ್ರಮುಖ ರಾಜಕೀಯ ಪಕ್ಷಗಳ ನಾಯಕರನ್ನು ಗೃಹಬಂಧನದಲ್ಲಿರಿಸಿದೆ. ಯಾವುದೇ ಕಾರ್ಯಕರ್ತರ ಆಗಲಿ ಅಥವಾ ಇನ್ನೊಬ್ಬ ರಾಜಕೀಯ ನಾಯಕರಾಗಲಿ ಭೇಟಿ ಮಾಡಲು ಅನುವು ಮಾಡಿಕೊಡುವುದಿಲ್ಲ ಎಂದು ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೆ ಮೊಬೈಲ್ ಸಂಪರ್ಕ ಸೇವೆಯನ್ನು ಕಡಿತಗೊಳಿಸಿದ್ದು, ಸೇನೆಯಿಂದ ಅಧಿಕೃತ ಆದೇಶ ಬರುವವರೆಗೂ, ಮನೆಯ ಹೊರಗೆ ಹೋಗುವಂತಿಲ್ಲ ಎಂದು ಭದ್ರತಾ ಪಡೆಗಳು ಕಾದು ಕುಳಿತಿವೆ.. ಇಷ್ಟೇ ಅಲ್ಲದೆ ಇಡೀ ಜಮ್ಮು ಹಾಗೂ ಕಾಶ್ಮೀರ ದಲ್ಲಿ ಇಂಟರ್ನೆಟ್ ಸೇವೆಯನ್ನು ಕಡಿತಗೊಳಿಸಲಾಗಿದ್ದು, ಯಾವುದೇ ಸುದ್ದಿಗಳು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ.

ಇನ್ನೂ ಶ್ರೀನಗರ ಸೇರಿದಂತೆ ಹಲವಾರು ಪ್ರಮುಖ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಗೊಂಡಿದ್ದು, ರಾಜ್ಯಪಾಲರು ಈ ಕುರಿತು ರಾತ್ರೋರಾತ್ರಿ ರಾಜ್ಯದ ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಆದೇಶ ಹೊರಡಿಸಿದ್ದಾರೆ. ಜಮ್ಮು ಹಾಗೂ ಕಾಶ್ಮೀರ ದ ಪೊಲೀಸರು ಭದ್ರತಾ ಪಡೆಗಳ ಜೊತೆ ಸೇರಿಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಲಿದ್ದಾರೆ. ಇಷ್ಟೆಲ್ಲಾ ವಿದ್ಯಮಾನಗಳ ಬಳಿಕ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 9.30ಕ್ಕೆ ಮಹತ್ವದ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಕಾಶ್ಮೀರದಲ್ಲಿನ ನಿಗೂಢ ಬೆಳವಣಿಗೆಗಳ ಬಗ್ಗೆ ಈ ಸಭೆಯಿಂದ ಉತ್ತರ ದೊರಕಬಹುದು ಎಂಬ ನಿರೀಕ್ಷೆ ಗರಿಗೆದರಿದೆ. ಹೀಗಾಗಿ ಎಲ್ಲರ ಚಿತ್ತ ಇಂದು ನಡೆಯುವ ಕೇಂದ್ರ ಸಚಿವ ಸಂಪುಟದತ್ತ ನೆಟ್ಟಿದೆ. ಕೇಂದ್ರ ಸರ್ಕಾರದ ಇಷ್ಟೆಲ್ಲಾ ವಿದ್ಯಮಾನಗಳ ವಿರುದ್ಧ ಇಂದು ವಿರೋಧ ಪಕ್ಷ ಧರಣಿ ಮಾಡುವ ಸಾಧ್ಯತೆಗಳು ಹೆಚ್ಚಾಗಿದ್ದು, ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆಯಬಾರದು ಎಂದು ಪಟ್ಟು ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿವೆ.

Post Author: Ravi Yadav