ಧೋನಿ ಬೆಂಬಲಕ್ಕೆ ನಿಂತ ನಿರ್ಮಲಾ ಸೀತಾರಾಮನ್ ! ಅಭಯ ಹಸ್ತ ನೀಡಿದ ಡೈನಮಿಕ್ ಲೇಡಿ

ಮಹೇಂದ್ರ ಸಿಂಗ್ ಧೋನಿ ರವರು ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಸಾಮಾನ್ಯ ರೈಲ್ವೆ ಟಿಕೆಟ್ ಕಲೆಕ್ಟರ್ ಇಂದು ಭಾರತದ ಕ್ರಿಕೆಟ್ ಲೆಜೆಂಡ್ ಗಳಲ್ಲಿ ಒಬ್ಬರಾಗಿದ್ದಾರೆ, ಇದಕ್ಕೆಲ್ಲ ಧೋನಿ ಅವರ ಪರಿಶ್ರಮ ಕಾರಣ ಎಂದರೆ ತಪ್ಪಾಗಲಾರದು. ಇನ್ನು ಕ್ರಿಕೆಟ್ನಲ್ಲಿ ಮಾತ್ರವಲ್ಲದೆ ಮೊದಲಿನಿಂದಲೂ ಭಾರತೀಯ ಸೇನೆಯ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿರುವ ಮಹೇಂದ್ರ ಸಿಂಗ್ ಧೋನಿ ರವರು ಇದೀಗ ಸೇನೆಯಲ್ಲಿ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಸೇನೆಯ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ಮಹೇಂದ್ರ ಸಿಂಗ್ ದೋನಿ ರವರು ಇದೀಗ ನಡೆಯುತ್ತಿರುವ ವಿಶ್ವಕಪ್ ನಲ್ಲಿ ಭಾರತೀಯ ಸೇನೆಯ ಬಲಿದಾನವನ್ನು ಸೂಚಿಸುವ ಲಾಂಛನವನ್ನು ತಮ್ಮ ಗ್ಲೌಸ್ ಗಳಲ್ಲಿ ಪ್ರಿಂಟ್ ಮಾಡಿಸಿ ಸೇನೆಗೆ ವಿಶೇಷವಾಗಿ ಗೌರವ ಸಲ್ಲಿಸುತ್ತಿದ್ದರು.

ಇತ್ತೀಚಿಗೆ ನಡೆದ ಆಫ್ರಿಕನ್ನರ ವಿರುದ್ದದ ಪಂದ್ಯದಲ್ಲಿ  ಭಾರತದ ತಂಡದ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಹೇಂದ್ರ ಸಿಂಗ್ ಧೋನಿ ರವರು ತಮ್ಮ ಎರಡು ಕೀಪಿಂಗ್ ಗ್ಲೌಸ್ ಗಳಲ್ಲಿ ಭಾರತೀಯ ಸೇನೆಯ ಬಲಿದಾನವನ್ನು ಸೂಚಿಸುವ ಲಾಂಛನವನ್ನು ಪ್ರಿಂಟ್ ಮಾಡಿಸಿಕೊಂಡು ವಿಕೆಟ್ ಕೀಪಿಂಗ್ ಮಾಡಿದ್ದರು. ಅದ್ಯಾಗೋ ಇದನ್ನು ಸೂಕ್ಷ್ಮವಾಗಿ ಗಮನಿಸಿದ ಕ್ಯಾಮೆರಾಗಳು ಮಹೇಂದ್ರ ಸಿಂಗ್ ಧೋನಿ ನವರಿಗೆ ಭಾರತೀಯ ಸೇನೆಯ ಮೇಲಿರುವ ಗೌರವವನ್ನು ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದರು. ಧೋನಿ ರವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆಗಳು ವ್ಯಕ್ತವಾಗಿದ್ದವು. ಇಡೀ ವಿಶ್ವದೆಲ್ಲೆಡೆ ಧೋನಿ ರವರ ಈ ನಡೆ ಭಾರಿ ಸದ್ದು ಮಾಡಿ, ವ್ಯಾಪಕ ಪ್ರಶಂಸೆಗಳು ಕೇಳಿ ಬಂದಿದ್ದವು.

ಆದರೆ ಅದ್ಯಾಕೋ ಧೋನಿ ರವರ ಈ ನಡೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕೆಂಗಣ್ಣಿಗೆ ಗುರಿಯಾಗಿದೆ. ಹೌದು ಯಾವುದೇ ಸೂಕ್ತ ಕಾರಣವಿಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯೂ ಭಾರತೀಯ ಕ್ರಿಕೆಟ್ ಕೌನ್ಸಿಲ್ (ಬಿಸಿಸಿಐ) ಸಂಸ್ಥೆಗೆ ಮಹೇಂದ್ರ ಸಿಂಗ್ ಧೋನಿರವರು ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್ ಗಳಿಂದ ಭಾರತೀಯ ಸೇನೆಯ ಬಲಿದಾನವನ್ನು ಪ್ರದರ್ಶಿಸುವ ಲಾಂಛನಗಳನ್ನು ತೆಗೆದುಹಾಕಿ ಮುಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಈ ನಡೆಗೆ ಭಾರೀ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.

ಆದರೆ ಧೋನಿ ರವರ ಬೆಂಬಲಕ್ಕೆ ಮಾಜಿ ರಕ್ಷಣಾ ಸಚಿವೆ ಹಾಗೂ ಇಂದಿನ ಭಾರತೀಯ ಫೈನಾನ್ಸ್ ಮಿನಿಸ್ಟರ್ ನಿರ್ಮಲ ಸೀತಾರಾಮನ್ ರವರು ನಿಂತಿದ್ದಾರೆ. ಮೊದಲಿನಿಂದಲೂ ಖಡಕ್ ಸಚಿವೆಯಾಗಿ ನೇರ ಮಾತುಗಳಿಂದ ಹಾಗೂ ದಿಟ್ಟ ನಿರ್ಧಾರಗಳಿಂದ ಪ್ರಸಿದ್ಧಿ ಪಡೆದಿರುವ ನಿರ್ಮಲ ಸೀತಾರಾಮನ್ ರವರು ಇದೀಗ ಧೋನಿ ರವರಿಗೆ ಅಭಯ ಹಸ್ತ ನೀಡಿ ,  ಆತ್ಮೀಯ ಧೋನಿರವರೇ ನೀವು ಇದೀಗ ಭಾರತೀಯ ಸೇನೆಯ ಅಧಿಕಾರಿ, ಯಾವುದೇ ಕಾರಣಕ್ಕೂ ನಿಮ್ಮ ಕೀಪಿಂಗ್ ಗ್ಲೌಸ್ಗಳಿಂದ ಸೇನೆಯ ಬಲಿದಾನವನ್ನು ಸೂಚಿಸುವ ಲಾಂಛನವನ್ನು ತೆಗೆಯಬೇಡಿ, ಬಲಿದಾನ ಎನ್ನುವುದು ಗೌರವದ ಸಂಕೇತ, ಅದು ಸಶಕ್ತ ಭಾರತೀಯ ಸೇನೆಯನ್ನು ಪ್ರದರ್ಶಿಸುತ್ತದೆ. ನಾವು ಆ ಲಾಂಛನವನ್ನು ಯಾವಾಗಲು ಗೌರವದಿಂದ ಕಾಣುತ್ತೇವೆ, ಇಡೀ ದೇಶವೇ ಈ ನಿರ್ಧಾರದಲ್ಲಿ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ ಎಂದು ಹೇಳಿಕೆ ನೀಡಿದ್ದಾರೆ.

Facebook Comments

Post Author: Ravi Yadav