ನಾಯ್ಡುಗೆ ಮರ್ಮಾಘಾತ- ಮೋದಿ ಮಾಡಿದ ಗಾಯದ ಮೇಲೆ ಬರೆ ಎಳೆದ ಹೊಸ ಮುಖ್ಯಮಂತ್ರಿ !

ಚಂದ್ರಬಾಬು ನಾಯ್ಡು ರವರು ಕಳೆದ ಬಾರಿ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಾವು ರಾಜ್ಯದ ಅಭಿವೃದ್ಧಿಯಲ್ಲಿ ಸದ್ದು ಮಾಡಿದ್ದಕ್ಕಿಂತಲೂ ಹೆಚ್ಚು ಕೇಂದ್ರದಲ್ಲಿ ಸದ್ದು ಮಾಡಿದ್ದರು. ಮೊದಲು ನರೇಂದ್ರ ಮೋದಿ ರವರ ಜೊತೆ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡು ಎನ್ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡು, ತದನಂತರ ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನ ಮಾನ ನೀಡಲಿಲ್ಲ ಎಂದು ಮೈತ್ರಿಕೂಟದಿಂದ ಹೊರಬಂದು ಕೆಲವು ದಿನಗಳ ಕಾಲ ಹಲವಾರು ಪಕ್ಷಗಳನ್ನು ಸಂಘಟನೆ ಮಾಡುವಲ್ಲಿ ನಿರತರಾಗಿ, ಮೋದಿರವರ ಸರ್ಕಾರವನ್ನು ಉರುಳಿಸಲು ಹಲವಾರು ತಂತ್ರಗಳನ್ನು ಎಳೆದು ಅದರಲ್ಲಿಯೂ ಸೋಲನ್ನು ಕಂಡು ತದನಂತರ ಚುನಾವಣೆಯಲ್ಲಿಯೂ ಹೀನಾಯ ಸೋಲನ್ನು ಕಂಡಿದ್ದರು.

ಕೇವಲ ಇಷ್ಟೇ ಅಲ್ಲದೆ ಸರ್ವಾಧಿಕಾರಿಯಂತೆ ಮನಬಂದಂತೆ ನಿರ್ಧಾರಗಳನ್ನು ತೆಗೆದುಕೊಂಡಿದ್ದ ಚಂದ್ರಬಾಬು ನಾಯ್ಡು ರವರಿಗೆ ಇದೀಗ ಯಾಕೋ ಅದೃಷ್ಟ ಚೆನ್ನಾಗಿ ಇದ್ದಂತೆ ಕಾಣುತ್ತಿಲ್ಲ. ಮೊದಲೇ ನರೇಂದ್ರಮೋದಿ ರವರನ್ನು ಎದುರು ಹಾಕಿಕೊಂಡು ಮೈತ್ರಿಕೂಟದ ಜೊತೆ ಗುರುತಿಸಿಕೊಂಡ ನಂತರ ಚುನಾವಣೆಯಲ್ಲಿ ಹೀನಾಯ ಸೋಲು ಕಂಡು ಅಧಿಕಾರ ಕಳೆದುಕೊಂಡಿದ್ದಾರೆ. ಹೀಗಿರುವಾಗ ಇದೀಗ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿರುವ ಜಗನ್ ಮೋಹನ್ ರೆಡ್ಡಿ ರವರು ಮಾಜಿ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ರವರಿಗೆ ಹೊಡೆತಗಳ ಮೇಲೆ ಹೊಡೆತಗಳನ್ನು ನೀಡುತ್ತಿದ್ದಾರೆ.

ಸರ್ವಾಧಿಕಾರಿಯಂತೆ ಮೆರೆದಿದ್ದ ಚಂದ್ರಬಾಬುನಾಯ್ಡು ರವರು ಅಂದು ತಾವು ಪ್ರಜೆಗಳಿಂದ ಆಯ್ಕೆಯಾದ ಪ್ರಜಾಪ್ರಭುತ್ವದ ಸರ್ಕಾರ ನಡೆಸುತ್ತಿದ್ದೇವೆ ಎಂಬುದನ್ನು ಮರೆತು ರಾಷ್ಟ್ರದ ಸಿಬಿಐ ಸಂಸ್ಥೆಯನ್ನು ಆಂಧ್ರಪ್ರದೇಶದಲ್ಲಿ ನಿಷೇಧಗೊಳಿಸಿದ್ದರು. ಸಿಬಿಐ ಸಂಸ್ಥೆಯ ಕೈಗಳನ್ನು ಕಟ್ಟಿ ಹಾಕಿದ್ದ ಚಂದ್ರಬಾಬು ನಾಯ್ಡು ರವರು ರಾಜ್ಯದಲ್ಲಿ ಯಾವುದೇ ತನಿಖೆ ನಡೆಸಬೇಕು ಎಂದರೂ ಮೊದಲು ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕು ಎಂಬ ಷರತ್ತು ವಿಧಿಸಿದ್ದರು. ನಾಯ್ಡುರವರ ಈ ನಿರ್ಧಾರಕ್ಕೆ ಮೊದಲಿನಿಂದಲೂ ಹಲವಾರು ಟೀಕೆಗಳು ವ್ಯಕ್ತವಾಗಿದ್ದವು.

ಸಾಮಾನ್ಯ ಜನರು ಸಾಮಾಜಿಕ ಜಾಲತಾಣಗಳಲ್ಲಿ ನಾಯ್ಡುರವರು ತಮ್ಮ ಹಗರಣಗಳನ್ನು ಹಾಗೂ ತಮ್ಮ ಆಪ್ತರ ಹಗರಣಗಳನ್ನು ತನಿಖೆ ನಡೆಸಿದಂತೆ ಸಿಬಿಐ ಸಂಸ್ಥೆಯನ್ನು ಕಟ್ಟು ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ ಇದೀಗ ಪ್ರಮಾಣವಚನವನ್ನು ಸ್ವೀಕರಿಸಿರುವ ಜಗನ್ಮೋಹನ್ ರೆಡ್ಡಿ ರವರು ಸಿಬಿಐ ಸಂಸ್ಥೆಯ ಮೇಲಿದ್ದ ಎಲ್ಲಾ ಶರತ್ತುಗಳನ್ನು ತೆಗೆದುಹಾಕಿ ರಾಜ್ಯದಲ್ಲಿ ಸಂಪೂರ್ಣವಾಗಿ ತನಿಖೆ ನಡೆಸಲು ಅವಕಾಶ ನೀಡಿದ್ದಾರೆ. ರಾಜ್ಯ ಸರ್ಕಾರದ ಯಾವುದೇ ಅನುಮತಿ ಇಲ್ಲದೆ ಸ್ವತಂತ್ರವಾಗಿ ತನಿಖೆಯನ್ನು ಕೈಗೆತ್ತಿಕೊಂಡು, ತನಿಖೆ ನಡೆಸಿ ಅಪರಾಧಿಗಳನ್ನು ಒದ್ದು ಒಳಗೆ ಹಾಕುವ ಅಧಿಕಾರವನ್ನು ಸಿಬಿಐ ಸಂಸ್ಥೆಗೆ ನೀಡಿದ್ದಾರೆ. ಜಗಮೋಹನ್ ರೆಡ್ಡಿ ರವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಈ ನಿರ್ಧಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav