ದೀದಿ ಕೋಟೆ ಅಲ್ಲೋಲ ಕಲ್ಲೋಲ! ಮೋದಿ ಚಾಣಕ್ಯ ಏಟಿಗೆ ಭದ್ರಕೋಟೆ ಛಿದ್ರ ಛಿದ್ರ

ದೀದಿ ಕೋಟೆ ಅಲ್ಲೋಲ ಕಲ್ಲೋಲ! ಮೋದಿ ಚಾಣಕ್ಯ ಏಟಿಗೆ ಭದ್ರಕೋಟೆ ಛಿದ್ರ ಛಿದ್ರ

ಕೆಲವೇ ಕೆಲವು ತಿಂಗಳುಗಳ ಹಿಂದೆ ಪಶ್ಚಿಮಬಂಗಾಳ ಎಂದರೆ ಮಮತಾ ಬ್ಯಾನರ್ಜಿ ರವರ ಭದ್ರಕೋಟೆ ಎನ್ನಲಾಗುತ್ತಿತ್ತು. ಆದರೆ ಮೋದಿ ಹಾಗೂ ಬಿಜೆಪಿ ಪಕ್ಷದ ಚಾಣಕ್ಯ ಎನಿಸಿಕೊಂಡಿರುವ ಅಮಿತ್ ಶಾ ರವರು ಮಾಡಿದ ರಣತಂತ್ರ ಗಳಿಂದ ಇಂದು ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದ ಮಮತಾಬ್ಯಾನರ್ಜಿ ರವರ ಭದ್ರಕೋಟೆ ಯು ಛಿದ್ರ ಛಿದ್ರವಾಗುತ್ತಿದೆ. ಕ್ಷಣ-ಕ್ಷಣಕ್ಕೂ ರಾಜಕೀಯದಲ್ಲಿ ಭಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿರುವ ಪಕ್ಷಿಮ ಬಂಗಾಳವು ಇದೀಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡು, ಮಮತಾ ಬ್ಯಾನರ್ಜಿ ರವರ ಸರ್ವಾಧಿಕಾರ ಕೊನೆಗೊಳ್ಳುವ ಸಮಯ ಬಂತು ಎಂಬ ಸಂದೇಶ ಸಾರುತ್ತಿದೆ.

ಕೆಲವು ದಿನಗಳ ಹಿಂದಷ್ಟೇ ಮಮತಾ ಬ್ಯಾನರ್ಜಿ ರವರ ಭದ್ರಕೋಟೆಯಲ್ಲಿ ಬಿಜೆಪಿ ಪಕ್ಷವು ಕಂಡುಕೇಳರಿಯದ ರೀತಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಎರಡಂಕಿ ಸ್ಥಾನಗಳನ್ನು ಗೆದ್ದುಕೊಂಡಿತ್ತು, ಒಂದೆರಡು ಸೀಟು ಗಳಿಸಲು ಕಷ್ಟಪಡುತ್ತಿದ್ದ ಬಿಜೆಪಿ ಪಕ್ಷವು ನರೇಂದ್ರ ಮೋದಿ ರವರ ಅಲೆಯಲ್ಲಿ ಚಾಣಕ್ಯನ ರಣತಂತ್ರವನ್ನು ಬಳಸಿಕೊಂಡು ಎರಡಂಕಿ ಸ್ಥಾನಗಳನ್ನು ಗೆದ್ದು ಮಮತಾಬ್ಯಾನರ್ಜಿ ರವರಿಗೆ ಸ್ಪಷ್ಟ ಸಂದೇಶವನ್ನು ಸಾರಿತ್ತು. ಹಲವಾರು ಬಾರಿ ಸರ್ವಾಧಿಕಾರಿಯಂತೆ ಮೆರೆದು ವಿರೋಧ ಪಕ್ಷಗಳ ನಾಯಕರನ್ನು ರಾಜ್ಯದ ಒಳಗೆ ಬರಲು ಅಡ್ಡಗಾಲು ಹಾಕುತ್ತಿದ್ದ ಮಮತಾ ರವರು ಇಂದು ತಮ್ಮ ಪಕ್ಷವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.

ಇದೀಗ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ 3 ಶಾಸಕರು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಅಷ್ಟೇ ಅಲ್ಲದೆ 3 ಶಾಸಕರ ಜೊತೆ ಐವತ್ತಕ್ಕೂ ಹೆಚ್ಚು ಕೌನ್ಸಿಲರ್ ಗಳು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದು, ಇವರ ಜೊತೆಗೆ ಲಕ್ಷಾಂತರ ಕಾರ್ಯಕರ್ತರು ಪಕ್ಷಿಮ ಬಂಗಾಳವನ್ನು ಕೇಸರಿಮಯ ಮಾಡಲು ಪಣತೊಟ್ಟು ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಗಿತ್ತು ಹೀಗಾಗಿ ಪಕ್ಷ ಬಿಟ್ಟು ನಾವು ಬಿಜೆಪಿ ಪಕ್ಷ ಸೇರಿ ಕೊಂಡಿದ್ದೇವೆ ಎಂದು ಶಾಸಕರು ಅಭಿಪ್ರಾಯಪಟ್ಟಿದ್ದಾರೆ.

ಇಷ್ಟು ಸಾಲದು ಎಂಬಂತೆ ಎಡಪಕ್ಷದ ಶಾಸಕರು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದು ಕೆಲವು ದಿನಗಳ ಹಿಂದೆ ಅಸ್ತಿತ್ವ ಕಂಡುಕೊಳ್ಳಲು ಪ್ರಯತ್ನ ಪಡುತ್ತಿದ್ದ ಬಿಜೆಪಿ ಪಕ್ಷವು ಇಂದು ಮಮತಾ ಬ್ಯಾನರ್ಜಿ ರವರ ಭದ್ರಕೋಟೆಯನ್ನು ಅಲುಗಾಡಿಸುತ್ತಿದೆ. ಇದಕ್ಕೆಲ್ಲ ಒಂದು ಕಡೆ ನರೇಂದ್ರ ಮೋದಿ ರವರ ಅಲೆ ಹಾಗೂ ಚಾಣಕ್ಯನ ನೀತಿ ಕಾರಣವಾದರೆ, ಹೆಲಿಕ್ಯಾಪ್ಟರ್ ಲ್ಯಾಂಡ್ ಮಾಡಲು ಬಿಡದೆ ಇದ್ದಾಗ ಕಾರಿನಲ್ಲಿ ತೆರಳಿದ ಯೋಗಿ ಆದಿತ್ಯನಾಥ್ ಹಾಗೂ ಆಟೋದಲ್ಲಿ ಪ್ರಯಾಣಿಸಿ ಬಿಜೆಪಿ ಸಿದ್ಧಾಂತವನ್ನು ಪಶ್ಚಿಮಬಂಗಾಳದಲ್ಲಿ ಪ್ರಚಾರ ಮಾಡಿದ ಶಿವರಾಜ್ ಸಿಂಗ್ ಚೌಹಾಣ್ ರವರ ಕಾರ್ಯಕ್ಷಮತೆಯನ್ನು ನಾವು ಇಲ್ಲಿ ಸ್ಮರಿಸಬೇಕಾಗುತ್ತದೆ.