ಮಮತಾ ರವರಿಗೆ ಗಾಯದ ಮೇಲೆ ಬರೆ ಎಳೆದ ಮೋದಿ !!

ಮಮತಾ ರವರಿಗೆ ಗಾಯದ ಮೇಲೆ ಬರೆ ಎಳೆದ ಮೋದಿ !!

ಪಶ್ಚಿಮ ಬಂಗಾಳವನ್ನು ತನ್ನ ಭದ್ರಕೋಟೆ ಯನ್ನಾಗಿ ಮಾಡಿಕೊಂಡು ಸರ್ವಾಧಿಕಾರ ಮೆರೆಯುತ್ತಿದ್ದ ಮಮತಾ ಬ್ಯಾನರ್ಜಿ ರವರಿಗೆ ನರೇಂದ್ರ ಮೋದಿ ಅವರು ಈ ಬಾರಿಯ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡಿದ್ದಾರೆ. ಸತತವಾಗಿ ನರೇಂದ್ರ ಮೋದಿ ರವರ ವಿರುದ್ಧ ವಾಗ್ದಾಳಿ ಗಳನ್ನು ನಡೆಸುತ್ತಿದ್ದ ಮಮತಾ ಬ್ಯಾನರ್ಜಿ ರವರು, ಚುನಾವಣೆ ಫಲಿತಾಂಶ ಕಂಡು ದಿಗ್ಬ್ರಮೆ ಗೊಂಡಿದ್ದಾರೆ. ಕಂಡುಕೇಳರಿಯದ ರೀತಿಯಲ್ಲಿ ಬಿಜೆಪಿ ಪಕ್ಷವು ಎರಡಂಕಿ ಸ್ಥಾನಗಳನ್ನು ಪಕ್ಷಿಮ ಬಂಗಾಳದಲ್ಲಿ ಪಡೆದುಕೊಂಡು ತನ್ನದೇ ಅಧಿಕಾರ ಎಂದು ಮೆರೆಯುತ್ತಿದ್ದ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಅವನತಿಯ ಅಂಚಿನ ಕಡೆಗೆ ತಳ್ಳುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಪಕ್ಷಾಂತರ ಗಳೇ ಇದಕ್ಕೆ ಸಾಕ್ಷಿ. ದಿನೇದಿನೇ ಬಿಜೆಪಿ ಪಕ್ಷಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ, ಕೇವಲ ನಿನ್ನೆಯಷ್ಟೇ 3 ಶಾಸಕರು ಹಾಗೂ ಅರವತ್ತಕ್ಕೂ ಹೆಚ್ಚು ಕೌನ್ಸಿಲರ್ ಗಳು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷ ಸೇರಿಕೊಂಡಿದ್ದರು.

ಇಷ್ಟೆಲ್ಲಾ ವಿದ್ಯಮಾನಗಳ ಬಳಿಕ ಮಮತಾ ಬ್ಯಾನರ್ಜಿ ರವರನ್ನು ನರೇಂದ್ರ ಮೋದಿ ರವರು ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ನರೇಂದ್ರ ಮೋದಿ ರವರು ಭಾರತದ ಮುಂದಿನ ಪ್ರಧಾನಿ ಆದ ಕಾರಣದಿಂದ ನಾನು ಎಲ್ಲ ದ್ವೇಷವನ್ನು ಬದಿಗಿಟ್ಟು, ನರೇಂದ್ರ ಮೋದಿರವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋಗುತ್ತೇನೆ ಎಂದು ಮಮತಾ ಬ್ಯಾನರ್ಜಿ ರವರು ಸಹ ಆಹ್ವಾನವನ್ನು ಒಪ್ಪಿಕೊಂಡಿದ್ದರು. ಆದರೆ ಮೋದಿರವರು ಮಾಡಿದ ಒಂದು ಒಳ್ಳೆಯ ಕೆಲಸ ಮತ್ತೊಮ್ಮೆ ಮಮತಾ ಬ್ಯಾನರ್ಜಿ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಆದ ಕಾರಣದಿಂದ ನಾನು ಮೋದಿ ರವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ನರೇಂದ್ರ ಮೋದಿ ರವರ ಆ ಕೆಲಸ ಏನು ಗೊತ್ತಾ? ತಿಳಿಯಲು ಕೆಳಗಡೆ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ನಾಲ್ಕು ದಿನಗಳಿಂದ ಹತ್ತಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರನ್ನು ಇಡೀ ದೇಶದೆಲ್ಲೆಡೆ ವಿವಿಧ ಭಾಗಗಳಲ್ಲಿ ಹತ್ಯೆ ಮಾಡಲಾಗಿದೆ. ಮೊದಲಿನಿಂದಲೂ ಹಿಂಸಾಚಾರಕ್ಕೆ ಹೆಸರಾಗಿರುವ ಪಕ್ಷಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಎದುರಾಗುತ್ತಿರುವ ಸವಾಲುಗಳು ಅಷ್ಟಿಷ್ಟಲ್ಲ. ಬಿಜೆಪಿ ಪಕ್ಷದ ಹಿರಿಯ ನಾಯಕರಾದ ಯೋಗಿ ಆದಿತ್ಯನಾಥ್, ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಅಮಿತ್ ಷಾ ರವರ ಪ್ರಚಾರ ಕಾರ್ಯಕ್ರಮಗಳನ್ನು ತಡೆದು ಸರ್ವಾಧಿಕಾರ ಮೆರೆದಿದ್ದ ಮಮತಾ ರವರ ರಾಜ್ಯದಲ್ಲಿಯೂ ಈ ರೀತಿಯ ಬಿಜೆಪಿ ಕಾರ್ಯಕರ್ತರ ಹತ್ಯೆಗಳು ನಡೆದಿವೆ.

ಇದರಿಂದ ಸ್ವತಹ ನರೇಂದ್ರಮೋದಿ ರವರು ಸಹ ಕಾರ್ಯಕರ್ತರ ಹತ್ಯೆಗಳ ಬಗ್ಗೆ ಚಿಂತೆಯಲ್ಲಿ ತೊಡಗಿದ್ದಾರೆ. ಹೀಗಿರುವಾಗ ತಾವು ತಮ್ಮ ಕಾರ್ಯಕರ್ತರ ಜೊತೆ ಎಂದಿಗೂ ಇರುತ್ತವೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಲು ಬಂಗಾಳದಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತರ ಕುಟುಂಬಗಳನ್ನು ಪ್ರಧಾನಮಂತ್ರಿಯಾಗಿ ತಾವು ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಇದರಿಂದ ಕುಪಿತಗೊಂಡ ಮಮತಾಬ್ಯಾನರ್ಜಿ ರವರು ಕಾರ್ಯಕ್ರಮವು ಪ್ರಜಾಪ್ರಭುತ್ವವನ್ನು ಆಚರಿಸುವುದು ಆಗಿರಬೇಕು ಆದರೆ ಯಾವುದೇ ಪಕ್ಷ ರಾಜಕೀಯ ಲಾಭ ಗಳಿಸಲು ಬಳಸಬಾರದು ಎಂದು ಹೇಳಿಕೆ ನೀಡಿ ಪ್ರಧಾನಮಂತ್ರಿಯವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದಿದ್ದಾರೆ. ನರೇಂದ್ರ ಮೋದಿ ರವರ ಈ ಕಾರ್ಯ ಮಮತಾ ಅವರ ಕೆಂಗಣ್ಣಿಗೆ ಗುರಿಯಾದರೇ, ಇದನ್ನು ಕಂಡ ಸಾಮಾನ್ಯ ಜನ ನರೇಂದ್ರಮೋದಿ ಇರುವುದು ದೇಶದ ಮೂಲೆ ಮೂಲೆಯ ಕಾರ್ಯಕರ್ತರ ಬಗ್ಗೆ ಯೋಚಿಸುವುದು ಬಹಳ ಒಳ್ಳೆಯ ಸಂಕೇತ ಎಂದು ಹಾಡಿ ಹೊಗಳಿದ್ದಾರೆ.