ಐದು ವರ್ಷಗಳಲ್ಲಿ ಮೊದಲ ಬಾರಿ ಪತ್ರಿಕಾಗೋಷ್ಠಿ ನಡೆಸಿದ ಮೋದಿ ಹೇಳಿದ್ದೇನು ಗೊತ್ತಾ??

ಐದು ವರ್ಷಗಳಲ್ಲಿ ಮೊದಲ ಬಾರಿ ಪತ್ರಿಕಾಗೋಷ್ಠಿ ನಡೆಸಿದ ಮೋದಿ ಹೇಳಿದ್ದೇನು ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನರೇಂದ್ರ ಮೋದಿರವರು ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಯಾವುದೇ ಪತ್ರಿಕಾಗೋಷ್ಠಿ ಕರೆದಿಲ್ಲ. ಕೇವಲ ಭಾಷಣಗಳ ಮೂಲಕ ತಮ್ಮ ಸ್ಪಷ್ಟ ನಿಲುವನ್ನು ಎಲ್ಲರಿಗೂ ತಲುಪಿಸುತ್ತಿದ್ದ ನರೇಂದ್ರ ಮೋದಿರವರು ಇತ್ತೀಚೆಗೆ ಕೆಲವೇ ಕೆಲವು ಸಂದರ್ಶನಗಳಲ್ಲಿ ಪಾಲ್ಗೊಂಡಿದ್ದರು. ಇದೇ ಮೊಟ್ಟಮೊದಲ ಬಾರಿಗೆ ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿರವರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಹಲವಾರು ಟೀಕೆಗಳ ನಡುವೆಯೂ ಸಹ ನರೇಂದ್ರ ಮೋದಿರವರು ಒಮ್ಮೆಯೂ ಪತ್ರಿಕಾಗೋಷ್ಠಿ ಕರೆದಿರಲಿಲ್ಲ, ಆದರೆ ಇದೀಗ ಪತ್ರಿಕಾ ಗೋಷ್ಠಿ ಕರೆದಿರುವ ನರೇಂದ್ರ ಮೋದಿ ಅವರು ಏನು ಏನು ಮಾಡಿದ್ದಾರೆ ಗೊತ್ತಾ??

ಐದು ವರ್ಷಗಳ ನಂತರ ಪತ್ರಿಕಾಗೋಷ್ಠಿ ಕರೆದ ನರೇಂದ್ರ ಮೋದಿರವರು ಪತ್ರಿಕಾಗೋಷ್ಠಿಯನ್ನು ತಮ್ಮ ಭಾಷಣವನ್ನು ಆಗಿ ಪರಿವರ್ತನೆ ಮಾಡಿದರು. ಇಡೀ ದೇಶವೇ ಹೆಮ್ಮೆ ಪಡುವಂತಹ ಕಾರ್ಯಗಳನ್ನು ಶ್ಲಾಘಿಸಿರುವ ನರೇಂದ್ರ ಮೋದಿರವರು, ಭಾರತ ದೇಶವು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ. ದೇಶದ ಜನತೆಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ, ಚುನಾವಣೆಯ ಸಮಯದಲ್ಲಿ ಐಪಿಎಲ್ ಹಾಗೂ ರಂಜಾನ್ ಮಾಸದ ಭದ್ರತೆಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿತ್ತು ಹಾಗೂ ಐಪಿಎಲ್ ಪಂದ್ಯಾವಳಿಗಳನ್ನು ಹೊರದೇಶದಲ್ಲಿ ನಡೆಸುವಂತಹ ಸ್ಥಿತಿಗಳನ್ನು ನಾವು ನೋಡಿದ್ದೇವೆ ಆದರೆ ಇದೀಗ ಸಮರ್ಥ ಸರ್ಕಾರದ ಕಾರಣ ರಂಜಾನ್, ಮಕ್ಕಳ ಪರೀಕ್ಷೆ, ಐಪಿಎಲ್ ಸೇರಿದಂತೆ ಮತ್ತಿತರ ವಿಷಯಗಳು ಏಕ ಕಾಲದಲ್ಲಿ ನಡೆದಿವೆ.

ಇನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಇದರ ಬಗ್ಗೆ ಯಾವುದೇ ಅನುಮಾನಗಳು ಬೇಡ ಎಂದು ಪತ್ರಿಕಾಗೋಷ್ಠಿಯನ್ನು ಭಾಷಣ ವನ್ನಾಗಿ ಪರಿವರ್ತಿಸಿ ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಲಿಲ್ಲ, ಆದರೆ ಅಲ್ಲಿಗೂ ಬೆಂಬಿಡದ ಪತ್ರಕರ್ತರೊಬ್ಬರು ನರೇಂದ್ರ ಮೋದಿರವರು ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ ಎಂದು ಪ್ರಶ್ನೆ ಮಾಡಿದಾಗ ನಾನು ಶಿಸ್ತಿನ ಸಿಪಾಯಿ ಪಕ್ಷದ ಅಧ್ಯಕ್ಷರೇ ನನಗೆ ಎಲ್ಲವೂ ಆಗಿದ್ದಾರೆ ಎಂದು ಉತ್ತರ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಕ್ಕದಲ್ಲಿ ಕುಳಿತಿದ್ದ ಅಮಿತ್ ಶಾ ರವರು ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಲ್ಲಾ ಪ್ರಶ್ನೆಗಳಿಗೂ ನರೇಂದ್ರ ಮೋದಿ ರವರೇ ಉತ್ತರಿಸಬೇಕು ಎಂದು ಏನು ಇಲ್ಲ. ಆದ ಕಾರಣ ನನ್ನ ಉತ್ತರ ಗಳನ್ನು ಸಹ ಗಣನೆಗೆ ತೆಗೆದುಕೊಳ್ಳಿ ಎಂದು ಚಟಾಕಿ ಹಾರಿಸಿದರು. ಇದೇ ತಿಂಗಳ 23ನೇ ತಾರೀಖಿನಂದು ವಿಶ್ವವೇ ಎದುರು ನೋಡುತ್ತಿರುವ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡಿ ಫಾಲೋ ಮಾಡಿ. ಚುನಾವಣಾ ಆಯೋಗದ ವೆಬ್ ಸೈಟ್ ನಿಂದ ಸಂಪೂರ್ಣ ಮಾಹಿತಿಯನ್ನು ಪಡೆದು ಕ್ಷಣಕ್ಷಣವೂ ನಿಮ್ಮ ಮುಂದೆ ಇಡುತ್ತೇವೆ.