ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ಕೊಟ್ಟ ಕೇದಾರ್ ಜಾದವ್

ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಆಂಗ್ಲರ ನಾಡಿನಲ್ಲಿ ಮಹಾ ಕದನ ನಡೆಯಲಿದೆ. ವಿಶ್ವ ಕಪ್ ಗಾಗಿ ವಿಶ್ವದ ಅಗ್ರಮಾನ್ಯ ತಂಡಗಳು ಕಾದಾಡಲಿವೆ. ಭಾರತ ತಂಡವೂ ಸಹ ಸಕಲ ರೀತಿಯಲ್ಲೂ ವಿಶ್ವಕಪ್ ಗಾಗಿ ಸಿದ್ಧತೆ ನಡೆಸಿಕೊಂಡು ಈಗಾಗಲೇ ತಂಡದ ಹಲವು ಆಟಗಾರರು ಆಂಗ್ಲರ ನಾಡಿಗೆ ತೆರಳಿದ್ದಾರೆ. ಇದೀಗ ಭಾರತ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಹಲವಾರು ದಿನಗಳ ಆಲೋಚನೆ ಇದೀಗ ಕೊನೆಗೊಳ್ಳಲಿದೆ. ಭಾರತದ ಮಧ್ಯಮ ಕ್ರಮಾಂಕದ ಆಟಗಾರ ಹಾಗೂ ತಂಡ ಸಂಕಷ್ಟದಲ್ಲಿರುವ ಸಮಯದಲ್ಲಿ ತಮ್ಮದೇ ಆದ ಬೌಲಿಂಗ್ ಶೈಲಿಯಲ್ಲಿ ವಿಕೆಟ್ ಪಡೆಯುತ್ತಿದ್ದ ಕೇದಾರ್ ಜಾಧವ್ ಅವರು ವಿಶ್ವಕಪ್ ಆಡುವುದು ಅನುಮಾನವಾಗಿತ್ತು.

ಭುಜದ ನೋವಿನಿಂದ ಬಳಲುತ್ತಿದ್ದ ಕೇದಾರ್ ಜಾಧವ್ ಅವರ ಸ್ಥಾನಕ್ಕೆ ಹಲವಾರು ಹೆಸರುಗಳು ಕೇಳಿಬಂದಿದ್ದವು. ಆದರೆ ಕೇದಾರ್ ಜಾಧವ್ ರವರ ಸ್ಥಾನ ತುಂಬಲು ಕೇಳಿಬಂದ ಹೆಸರುಗಳು ಮಾತ್ರ ಸೂಕ್ತವಾಗಿರಲಿಲ್ಲ. ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಲು ಸಾಧ್ಯವಿರಲಿಲ್ಲ ಯಾಕೆಂದರೆ ಒಂದೇ ತಂಡದಲ್ಲಿ ಮೂರು ವಿಕೆಟ್ ಕೀಪರ್ ಗಳು ಸ್ಥಾನ ಪಡೆದುಕೊಂಡರೆ ತಂಡ ಸಮತೋಲನ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ, ಇನ್ನು ಭಾರತದ ಕೆಲವು ಸ್ಪೀಡ್ ಪಿಚ್ ಗಳಲ್ಲಿ ಬ್ಯಾಟಿಂಗ್ ಮಾಡಲು ಕಷ್ಟ ಪಡುವ ಅಂಬಾಟಿ ರಾಯುಡೂ ರವರ ಹೆಸರು ಸಹ ಕೇಳಿ ಬಂದಿತ್ತು. ಆದರೆ ಈ ಎಲ್ಲಾ ವಿದ್ಯಮಾನಗಳಿಗೆ ಬ್ರೇಕ್ ಹಾಕಿರುವ ಬಿಸಿಸಿಐ ಕೇದಾರ್ ಜಾಧವ್ ಅವರು ಸಂಪೂರ್ಣ ಫಿಟ್ ಆಗಿದ್ದು ಇದೇ ತಿಂಗಳ ಮೇ 22 ನೇ ತಾರೀಖಿನಂದು ಆಂಗ್ಲರ ನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.

Post Author: Ravi Yadav