ಮಹಾ ನ್ಯೂಸ್: ಸೋಲನ್ನು ಬಹಿರಂಗವಾಗಿ ಘೋಷಿಸಿದ ಮಂಡಿಯೂರಿದ ಕೇಜ್ರಿ, ಬಿಜೆಪಿಗೆ 7 ಕ್ಕೆ 7 ಗೆಲುವು ಖಚಿತ??

ಮಹಾ ನ್ಯೂಸ್: ಸೋಲನ್ನು ಬಹಿರಂಗವಾಗಿ ಘೋಷಿಸಿದ ಮಂಡಿಯೂರಿದ ಕೇಜ್ರಿ, ಬಿಜೆಪಿಗೆ 7 ಕ್ಕೆ 7 ಗೆಲುವು ಖಚಿತ??

ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿಯ ಮುಖ್ಯಮಂತ್ರಿ ಗಳಾಗಿರುವ ಅರವಿಂದ ಕೇಜ್ರಿವಾಲ್ ಅವರು ಇದ್ದಕ್ಕಿದ್ದ ಹಾಗೇ ಶಾಕಿಂಗ್ ಹೇಳಿಕೆಯೊಂದನ್ನು ಹೊರ ಹಾಕಿದ್ದಾರೆ. ಈ ಮೂಲಕ ತಮ್ಮ ಸೋಲನ್ನು ಒಪ್ಪಿಕೊಳ್ಳುವುದರ ಮೂಲಕ ಇಡೀ ದೇಶದೆಲ್ಲೆಡೆ ಸಂಚಲನವನ್ನೇ ಸೃಷ್ಠಿಸಿದ್ದಾರೆ. ಇಷ್ಟು ಸಾಲದು ಎಂಬಂತೆ ದೆಹಲಿಯ ಜನತೆಯ ಬಗ್ಗೆ ಶಾಕಿಂಗ್ ಹೇಳಿಕೆ ಯನ್ನು ನೀಡಿರುವ ಅರವಿಂದ ಕೇಜ್ರಿವಾಲ್ ರವರ ವಿರುದ್ಧ ದೆಹಲಿಯ ಜನತೆಯ ಹರಿಹಾಯ್ದಿದ್ದಾರೆ. ಶೇಕಡಾ ತೊಂಬತ್ತಕ್ಕೂ ಹೆಚ್ಚು ಶಾಸಕರನ್ನು ಹೊಂದಿದ್ದರೂ ಸಹ ಬಿಜೆಪಿ ಪಕ್ಷದ ಮುಂದೆ ಸೋಲನ್ನು ಕಾಣುವುದನ್ನು ಖಚಿತ ಪಡಿಸಿರುವ ಅರವಿಂದ ಕೇಜ್ರಿವಾಲ್ ರವರ ಈ ನಡೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಅಷ್ಟಕ್ಕೂ ಅವರು ಏನು ಹೇಳಿದ್ದಾರೆ ಗೊತ್ತಾ? ತಿಳಿಯಲು ಕೆಳಗಡೆ ಓದಿ

ಅರವಿಂದ ಕೇಜ್ರಿವಾಲ್ ರವರು ಯಾಕೋ ತಮ್ಮ ಅಭಿವೃದ್ಧಿಯ ಕೆಲಸಗಳನ್ನು ನಂಬಿಕೊಂಡಂತೆ ಕಾಣುತ್ತಿಲ್ಲ, ಬದಲಾಗಿ ಕೇವಲ ಮುಸ್ಲಿಂ ಮತಗಳನ್ನು ನಂಬಿ ಕೊಂಡಂತೆ ಕಾಣುತ್ತಿದೆ. ಮುಸಲ್ಮಾನ ಬಾಂಧವರ ಮತಗಳನ್ನು ನಂಬಿಕೊಂಡಿರುವ ಕೇಜ್ರಿವಾಲ್ ರವರು 6ನೇ ಹಂತದಲ್ಲಿ ರಾಷ್ಟ್ರರಾಜಧಾನಿ ದೆಹಲಿಯ 7 ಲೋಕಸಭಾ ಕ್ಷೇತ್ರಗಳಿಗೆ ನಡೆದಿರುವ ಮತದಾನದಲ್ಲಿ ಕೊನೆ ಕ್ಷಣದಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್ ಪಕ್ಷಕ್ಕೆ ವರ್ಗಾವಣೆಗೊಂಡಿದೆ. ಇದರ ಪರಿಣಾಮ ಬಿಜೆಪಿ ಪಕ್ಷವು ಮುನ್ನಡೆಯನ್ನು ಸಾಧಿಸಲಿದೆ, ಇದು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಎಂದು ಹೇಳಿಕೆ ನೀಡಿದ್ದಾರೆ.

ನಾವು ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವನ್ನು ಹೊಂದಿದ್ದೆವು, ಆದರೆ ಕೊನೆಯ ಕ್ಷಣದಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್ ಪಕ್ಷಕ್ಕೆ ವರ್ಗಾವಣೆಗೊಂಡಿದೆ. ಇದರಿಂದ ನಮ್ಮ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಹೆಚ್ಚಾಗಲಿದೆ ಅಷ್ಟೇ ಅಲ್ಲದೆ ಬಿಜೆಪಿ ಪಕ್ಷವು ಇದರ ಲಾಭವನ್ನು ಸಂಪೂರ್ಣವಾಗಿ ಪಡೆಯಲಿದೆ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ ಇಷ್ಟು ಸಾಲದು ಎಂಬಂತೆ ದೆಹಲಿಯ ಜನತೆಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ದೆಹಲಿಯ ಮತದಾರರ ಬಗ್ಗೆ ಮಾತನಾಡಿರುವ ಅರವಿಂದ ಕೇಜ್ರಿವಾಲ್ ಅವರು ದೆಹಲಿಯ ಜನತೆಗೆ ತಮ್ಮ ಸರ್ಕಾರದ ಯಾವ ಕಾರ್ಯವೈಖರಿಯೂ ಅರ್ಥವಾಗುತ್ತಿಲ್ಲ, ಇಷ್ಟ ಕೂಡ ಆಗುತ್ತಿಲ್ಲ ಆದ ಕಾರಣದಿಂದ ಫಲಿತಾಂಶದ ಮೇಲೆ ಪ್ರಭಾವ ಹೆಚ್ಚಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ರಾಜ್ಯದ ಜನತೆಗೆ ಅರವಿಂದ ಕೇಜ್ರಿವಾಲ್ ರವರ ಸರ್ಕಾರ ಬೇಡವಾಗಿದೆ ಎಂದು ಅರವಿಂದ ಕೇಜ್ರಿವಾಲ್ ಅವರೇ ಒಪ್ಪಿಕೊಂಡಂತೆ ಕಾಣುತ್ತಿದೆ, ಯಾಕೆಂದರೆ ಕೆಲಸ ಇಷ್ಟವಾಗುತ್ತಿಲಿಲ್ಲ ಎಂದು ನೇರವಾಗಿ ಒಂದು ರಾಜ್ಯದ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ ಎಂದರೆ ಇನ್ನೇನ್ ಅರ್ಥ.