ಕೊನೆಗೂ ವಿಶ್ರಾಂತಿ ತೆಗೆದುಕೊಂಡ ಮೋದಿ, ವಿಶೇಷತೆ ಕಂಡು ದೇಶವೇ ಬೆರಗಾಯಿತು – ರೆಸಾರ್ಟ್ ನಲ್ಲಿ ಕೋಟಿ ಕೋಟಿ ಖರ್ಚು ಮಾಡುವ ನಾಯಕರಿಗೆ ತಲುಪಿಸಿ

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಕ್ಷಣದಿಂದಲೂ ದೇಶಕ್ಕಾಗಿ ಹಾಗೂ ದೇಶದ ಹಿತಕ್ಕಾಗಿ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಅದರಂತೆಯೇ ನರೇಂದ್ರ ಮೋದಿರವರು ವಿದೇಶಗಳಿಗೆ ಭೇಟಿ ನೀಡಿ ಭಾರತದ ಮಹತ್ವವನ್ನು ತಿಳಿಸಿ, ಭಾರತದಲ್ಲಿರುವ ಅನುಕೂಲಗಳನ್ನು ಸಂಪೂರ್ಣವಾಗಿ ವಿವರಿಸಿ, ಭಾರತಕ್ಕೆ ವಿದೇಶಿ ಬಂಡವಾಳ ಹೆಚ್ಚು ಮಾಡಿ, ಇಡೀ ವಿಶ್ವದಲ್ಲಿಯೇ ಭಾರತದ ಹೆಸರು ರಾರಾಜಿಸುವಂತೆ ಮಾಡಿದ್ದಾರೆ. ಇಷ್ಟೆಲ್ಲಾ ದೇಶಕ್ಕಾಗಿ ದುಡಿಯುತ್ತಿರುವ ನರೇಂದ್ರ ಮೋದಿ ಅವರು ಮೊದಲಿನಿಂದಲೂ ತಮಗಾಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು.

ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ದೇಶಕ್ಕಾಗಿ ದುಡಿದು ಯಾವುದೇ ವಿಶ್ರಾಂತಿ ತೆಗೆದುಕೊಳ್ಳದೆ ದೇಶವನ್ನು ಮುನ್ನಡೆಸುತ್ತಿರುವ ನಾಯಕ ಎಂಬ ಖ್ಯಾತಿಗೆ ನರೇಂದ್ರ ಮೋದಿ ಅವರು ಭಾಜನರಾಗಿದ್ದರು. ಇದಕ್ಕೆ ಮತ್ತಷ್ಟು ಪೂರಕ ಎಂಬಂತೆ ಅಮೆರಿಕಾದ ಮಾಜಿ ಅಧ್ಯಕ್ಷರಾಗಿರುವ ಬರಾಕ್ ಒಬಾಮಾ ರವರು ಸಹ ನರೇಂದ್ರ ಮೋದಿ ಅವರನ್ನು ಪ್ರತಿ ಬಾರಿ ಭೇಟಿ ಮಾಡಿದ ತಕ್ಷಣ ಕೇಳುತ್ತಿದ್ದ ಪ್ರಶ್ನೆ ಏನೆಂದರೆ ನೀವು ಕಳೆದ ರಾತ್ರಿ ಎಷ್ಟು ನಿದ್ದೆ ಮಾಡಿದ್ದೀರಿ ! ಮಾನವನ ದೇಹಕ್ಕೆ ಕನಿಷ್ಠ 7 ಗಂಟೆಗಳ ಕಾಲ ನಿದ್ರೆ ಯ ಅವಶ್ಯಕತೆ ಇದೆ ಎಂದು ನೆನಪು ಮಾಡಿ ಪ್ರಶ್ನೆ ಕೇಳುತ್ತಿದ್ದರು.

ಈ ರೀತಿಯ ಹಲವಾರು ಕಾರಣಗಳಿಂದ ನರೇಂದ್ರ ಮೋದಿ ರವರ ವಿಶ್ರಾಂತಿ ವಿಷಯ ಕೂಡ ಇಡೀ ವಿಶ್ವದಲ್ಲಿ ಬಹಳ ಸದ್ದು ಮಾಡಿತ್ತು, ಇದೀಗ ಮತ್ತೊಮ್ಮೆ ನರೇಂದ್ರ ಮೋದಿರವರ ವಿಶ್ರಾಂತಿ ವಿಷಯ ಸದ್ದು ಮಾಡುತ್ತಿದೆ. ಯಾಕೆಂದರೆ ಇಷ್ಟು ವರ್ಷಗಳ ಕಾಲ ವಿಶ್ರಾಂತಿ ತೆಗೆದು ಕೊಳ್ಳದ ನರೇಂದ್ರ ಮೋದಿರವರು ಕೊನೆಗೂ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಅದರಲ್ಲಿಯೂ ಬಹಳ ವಿಶೇಷವಾಗಿ ವಿಶ್ರಾಂತಿ ತೆಗೆದುಕೊಳ್ಳಲು ನರೇಂದ್ರ ಮೋದಿರವರು ನಿರ್ಧರಿಸಿರುವ ಕಾರಣ ಮತ್ತೊಮ್ಮೆ ಎಲ್ಲರ ಮನಗೆದ್ದಿದ್ದಾರೆ. ಅಷ್ಟಕ್ಕೂ ನರೇಂದ್ರ ಮೋದಿ ಅವರು ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿರುವುದು ಹೇಗೆ ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದಲ್ಲಿ ಯಾವುದೇ ಒಬ್ಬ ರಾಜಕಾರಣಿ ಅಥವಾ ಕೇವಲ ಪಂಚಾಯಿತಿಯ ಅಧ್ಯಕ್ಷ ತಾನು ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಅನಿಸಿದರೆ ಐಷಾರಾಮಿ ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಇನ್ನು ಕೆಲವು ನಾಯಕರು ವಿದೇಶಗಳಿಗೆ ಹಾರಿಹೋಗಿ ದಿನಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸರ್ಕಾರದ ಬೊಕ್ಕಸಕ್ಕೆ ಹೊರೆ ಮಾಡುತ್ತಾರೆ. ತಮಗಿರುವ ವಿಶೇಷ ಸೌಲಭ್ಯಗಳನ್ನು ದೇಶದ ಹಿತಕ್ಕಾಗಿ ಬಳಸಿಕೊಳ್ಳದೆ ತಮ್ಮ ಮೋಜು ಮಸ್ತಿಗಾಗಿ ಜನರ ತೆರಿಗೆ ಹಣವನ್ನು ವ್ಯಯ ಮಾಡಿ ವಿದೇಶಿ ಪ್ರವಾಸದ ಹೆಸರಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಮಸ್ತಿ ಮಾಡುತ್ತಾರೆ . ಆದರೆ ನರೇಂದ್ರ ಮೋದಿ ಅವರು ಆ ರೀತಿ ಮಾಡುತ್ತಿಲ್ಲ.

ಭಾರತದ ಪ್ರಧಾನಿಗಳಾಗಿರುವ ನರೇಂದ್ರ ಮೋದಿರವರು ಮಹಾನ್ ದೈವಭಕ್ತರು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ನರೇಂದ್ರ ಮೋದಿರವರು ದೇವಾಲಯದ ದರ್ಶನಕ್ಕಾಗಿ ಹಿಮಾಲಯಕ್ಕೆ ತೆರಳಿದ್ದಾರೆ. ಇನ್ನು ದೇವಾಲಯಕ್ಕೆ ತೆರಳಿದ ನರೇಂದ್ರ ಮೋದಿ ಅವರು ಅಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡುತ್ತಿರುವ ವಿಡಿಯೋ ಸಹ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಈಗಾಗಲೇ ವೈರಲ್ ಆಗಿದೆ. ಹಿಮಾಲಯದ ತಪ್ಪಲಿನಲ್ಲಿರುವ ಹಲವಾರು ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಲು ನರೇಂದ್ರ ಮೋದಿರವರು ನಿರ್ಧಾರ ಮಾಡಿ ಹೊರಟಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ.

ಇದೇ ನಿಟ್ಟಿನಲ್ಲಿ ಒಂದು ದಿವಸ ವಿಶ್ರಾಂತಿ ಪಡೆಯಲು ನಿರ್ಧಾರ ಮಾಡಿರುವ ನರೇಂದ್ರ ಮೋದಿರವರು, ಇಡೀ ರಾತ್ರಿ ಭಾರತದ ಪವಿತ್ರ ಸ್ಥಾನವಾದ ಕೇದಾರನಾಥನ ಗುಹೆಯಲ್ಲಿ ಧ್ಯಾನ ಮಾಡುತ್ತಾ ವಿಶ್ರಾಂತಿ ಪಡೆಯಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ರಾಜಕಾರಣಿಗಳು ವಿಶ್ರಾಂತಿ ಎಂದ ತಕ್ಷಣ ಐಷಾರಾಮಿ ರೆಸಾರ್ಟ್ಗಳು ಅಥವಾ ವಿದೇಶಿ ಪ್ರವಾಸಗಳು ಕೇಳಿಬರುತ್ತಿದ್ದ ಸಮಯದಲ್ಲಿ ಭಾರತದ ಪ್ರಧಾನಿಗಳು ದೇವಸ್ಥಾನದ ಗುಹೆಯಲ್ಲಿ ಧ್ಯಾನಮಗ್ನ ರಾಗಿ ವಿಶ್ರಾಂತಿ ಪಡೆಯಲು ತೆರಳಿರುವುದು ಎಲ್ಲರ ಹುಬ್ಬೇರಿಸಿದೆ. ಈ ಮೂಲಕ ನರೇಂದ್ರ ಮೋದಿ ಅವರು ಮತ್ತೊಮ್ಮೆ ಸಂಚಲನವನ್ನು ಸೃಷ್ಟಿಸಿದ್ದು ನರೇಂದ್ರ ಮೋದಿ ರವರ ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಒಂದು ರೂಪಾಯಿ ಸಹ ನಷ್ಟವಿಲ್ಲ ಎಂಬುದು ಗಮನಿಸಬೇಕಾದ ವಿಷಯ.

ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ. ಈಗಾಗಲೇ ಮುನ್ನೂರಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ವನ್ನು ಹೊಂದಿರುವ ನರೇಂದ್ರ ಮೋದಿ ಅವರು ಇದೀಗ ದೈವದ ಮೊರೆ ಹೋಗಿದ್ದಾರೆ. ಇದೇ ತಿಂಗಳ ಮೇ 23 ನೇ ತಾರೀಖಿನಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಣೆ ಆಗಲಿದ್ದು ಕ್ಷಣ ಕ್ಷಣದ ಮಾಹಿತಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡಿ ಫಾಲೋ ಮಾಡಿ.

Post Author: Ravi Yadav