ಪ್ರಧಾನಿ ಅಭ್ಯರ್ಥಿ ಎಂದ ಕಾಂಗ್ರೆಸ್ಸಿಗರಿಗೆ ಕಪಾಳಮೋಕ್ಷ ಮಾಡಿದ ನಿತಿನ್ ಗಡ್ಕರಿ

ಪ್ರಧಾನಿ ಅಭ್ಯರ್ಥಿ ಎಂದ ಕಾಂಗ್ರೆಸ್ಸಿಗರಿಗೆ ಕಪಾಳಮೋಕ್ಷ ಮಾಡಿದ ನಿತಿನ್ ಗಡ್ಕರಿ

ಮುಂದಿನ ಲೋಕಸಭಾ ಚುನಾವಣೆ ದಿನಾಂಕ ಈಗಾಗಲೇ ಪ್ರಕಟಗೊಂಡಿದೆ. ಚುನಾವಣೆ ಪ್ರಕಟಗೊಂಡಿರುವ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿರುವುದು ಎಲ್ಲ ರಾಜಕಾರಣಿಗಳಿಗೆ ಹುಬ್ಬೇರಿಸಿದೆ. ಇನ್ನು ಬಿಜೆಪಿ ಪಕ್ಷದಲ್ಲಿ ಆಂತರಿಕ ಒಳ ಜಗಳ ಇದೆ ಎಂದು ಕಾಂಗ್ರೆಸ್ ಆರೋಪಿಸಿ, ನಿತಿನ್ ಗಡ್ಕರಿ ಅವರಿಗೆ ಪ್ರಧಾನಿ ಆಗಬೇಕು ಎಂಬ ಆಸೆ ಇದೆ, ನಿತಿನ್ ಗಡ್ಕರಿ ರವರು ನರೇಂದ್ರ ಮೋದಿ ಅವರಿಗಿಂತ ಒಳ್ಳೆಯ ಪ್ರಧಾನಿ ಅಭ್ಯರ್ಥಿ ಆಗಬಹುದು ಎಂದು ಎಲ್ಲೆಡೆ ಪ್ರಚಾರ ಮಾಡಿತ್ತು. ಇದನ್ನು ಕೇಳಿದ ನರೇಂದ್ರ ಮೋದಿ ಅಭಿಮಾನಿಗಳು, ಕಾಂಗ್ರೆಸ್ ಪಕ್ಷಕ್ಕೆ ನರೇಂದ್ರ ಮೋದಿ ಅವರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ ಆದ ಕಾರಣದಿಂದ ಈ ರೀತಿಯ ಒಳಜಗಳ ನಡೆಯುವಂತೆ ಪ್ರೇರೇಪಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.

ನಿತಿನ್ ಗಡ್ಕರಿಯವರ ಕೆಲವು ಮಾತುಗಳನ್ನು ಆಧಾರದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷದ ಆರೋಪವನ್ನು ವಾದಿಸುತ್ತಾ ಬಂದಿತ್ತು. ಆದರೆ ಇಂದು ನಿತಿನ್ ಗಡ್ಕರಿ ರವರು ಈ ಎಲ್ಲಾ ಆರೋಪವನ್ನು ತಳ್ಳಿ ಹಾಕಿ ನಾನು ಯಾವುದೇ ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ, ಆರೆಸ್ಸೆಸ್ ಕೂಡ ನನ್ನನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಯಾವುದೇ ಉದ್ದೇಶ ಒಂದಿಲ್ಲ. ರಾಜಕೀಯ ಅಥವಾ ಕೆಲಸ ಯಾವುದೇ ಆಗಲಿ ಲೆಕ್ಕಾಚಾರ ಹಾಕಿ ಮಾಡುವುದು ನನ್ನ ಗುಣವಲ್ಲ, ಅವಿರತ ಕೆಲಸವೇ ನನ್ನ ಮಂತ್ರ ಎಂದು ಸ್ಪಷ್ಟಪಡಿಸಿ ಆರೋಪಗಳನ್ನು ಮಾಡಿದವರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ನಾನು ಕನಸು ಕಾಣುವುದಿಲ್ಲ ಲಾಬಿ ನಡೆಸಲು ಯಾರ ಬಳಿಯೂ ಹೋಗುವುದಿಲ್ಲ, ನಾನು ಹಾಗೂ ಆರೆಸ್ಸೆಸ್ ಇಂತಹ ಯೋಚನೆ ಮಾಡಿಲ್ಲ ದೇಶದ ಹಿತಾಸಕ್ತಿ ನನಗೆ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.