ಉಲ್ಟಾ ಹೊಡೆದು ನಿಖಿಲ್ ಕೈ ಬಿಟ್ಟ ಡಿಕೆಶಿ, ನಿಖಿಲ್ ಗೆ ಸೋಲು ಕಟ್ಟಿಟ್ಟ ಬುತ್ತಿ !

2019 ರ ಲೋಕಸಭಾ ಚುನಾವಣೆಯ ದಿನಾಂಕ ಕೆಲವೇ ಕೆಲವು ಗಂಟೆಗಳ ಹಿಂದೆ ಬಹಿರಂಗಗೊಂಡಿದೆ. ಈಗಾಗಲೇ ಕರ್ನಾಟಕದಲ್ಲಿ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಸ್ಥಾನ ಪಡೆದುಕೊಂಡಿರುವ ಮಂಡ್ಯ ಜಿಲ್ಲೆಯ ಚುನಾವಣಾ ಕಣ ಮತ್ತಷ್ಟು ರಂಗೇರಿದೆ. ಇದೇ ಮೊಟ್ಟಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಹತ್ತು ಹಲವಾರು ಸವಾಲುಗಳು ಎದುರಿಗೆ ಬಂದಿದೆ. ರಾಜಕೀಯ ಅನುಭವವೇ ಇಲ್ಲದ ನಿಖಿಲ್ ಕುಮಾರಸ್ವಾಮಿ ಈ ಸವಾಲುಗಳನ್ನು ಎದುರಿಸಿ ಚುನಾವಣೆ ಗೆಲ್ಲುವುದು ಅಸಾಧ್ಯದ ಮಾತು ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಅದರಲ್ಲೂ ಇಂದು ನಿಖಿಲ್ ಕುಮಾರಸ್ವಾಮಿ ರವರಿಗೆ ಬಹುದೊಡ್ಡ ಹೊಡೆತ ಬಿದ್ದಿದೆ,ಈ ಹೊಡೆತದಿಂದ ಪಾರಾಗಿ ನಿಖಿಲ್ ಕುಮಾರಸ್ವಾಮಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ರಾಜಕೀಯ ಪಂಡಿತರ ವಾದವಾಗಿದೆ.

ನಿಖಿಲ್ ಕುಮಾರಸ್ವಾಮಿ ರವರಿಗೆ ಮೊದಲಿನಿಂದಲೂ ಸುಮಲತಾ ಅಂಬರೀಶ್ ರವರ ಸ್ಪರ್ಧೆ ದೊಡ್ಡ ಸವಾಲ್ ಎನಿಸಿದೆ, ತಾವು ಯಾವುದೇ ಕಾರಣಕ್ಕೂ ಮಂಡ್ಯ ಜಿಲ್ಲೆಯನ್ನು ಹೊರತುಪಡಿಸಿ ಬೇರೆ ಜಿಲ್ಲೆಯಿಂದ ಸ್ಪರ್ಧಿಸುವ ಮಾತೇ ಇಲ್ಲ ಎಂದು ಈಗಾಗಲೇ ಸುಮಲತಾ ಅಂಬರೀಶ್ ಅವರು ಖಚಿತ ಪಡಿಸಿದ್ದಾರೆ. ಕೊನೆಯ ಕ್ಷಣದವರೆಗೂ ಕಾಂಗ್ರೆಸ್ ಟಿಕೆಟ್ ಗಾಗಿ ಕಾಯುತ್ತೇನೆ ಎಂದಿರುವ ಸುಮಲತಾ ರವರು ಬಿಜೆಪಿ ಪಕ್ಷಕ್ಕೆ ಸೇರುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಒಂದು ವೇಳೆ ಅದೇ ನಡೆದಲ್ಲಿ ಸುಮಲತಾ ಅಂಬರೀಶ್ ಅವರಿಗೆ ಭಾರಿ ಜನ ಬೆಂಬಲ ಇರುವ ಕಾರಣ ಬಿಜೆಪಿ ಪಕ್ಷದ ವರ್ಚಸ್ಸು ಸೇರಿಕೊಂಡರೆ ನಿಖಿಲ್ ಕುಮಾರಸ್ವಾಮಿ ಅವರು ಧೂಳಿಪಟ ಆಗುವುದು ಖಚಿತ.

ಇಂತಹ ಸಮಯದಲ್ಲಿ ಮೈತ್ರಿ ಸರ್ಕಾರದ ಟ್ರಬಲ್ ಶೂಟರ್ ಎನಿಸಿಕೊಂಡಿದ್ದ ಡಿಕೆ ಶಿವಕುಮಾರ್ ರವರು ಸುಮಲತಾ ಅವರ ಜೊತೆ ಸಂಧಾನ ಮಾತುಕತೆ ನಡೆಸಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಇಡೀ ದಿನ ಮಾಧ್ಯಮದವರು ಡಿಕೆ ಶಿವಕುಮಾರ್ ರವರು ಮಂಡ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ ಹಾಗೂ ಈ ಮೂಲಕ ನಿಖಿಲ್ ಕುಮಾರಸ್ವಾಮಿ ಅವರಿಗೆ ಬಂದಿರುವ ಮತ್ತೊಂದು ಟ್ರಬಲ್ ಅನ್ನು ನಿವಾರಿಸಿ ಮತ್ತೊಮ್ಮೆ ಟ್ರಬಲ್ ಶೂಟರ್ ಎಂದು ನಿರೂಪಿಸಿ ಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೀಗ ಡಿಕೆ ಶಿವಕುಮಾರ್ ಅವರು ಉಲ್ಟಾ ಹೊಡೆದಿದ್ದಾರೆ, ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಡಿಕೆ ಶಿವಕುಮಾರ್ ರವರು ನಿಖಿಲ್ ಕುಮಾರಸ್ವಾಮಿ ರವರಿಗೆ ಕೈ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಹೈಕಮಾಂಡ್ ಡಿಕೆ ಶಿವಕುಮಾರ್ ಅವರಿಗೆ ಸಂಧಾನ ಮಾತುಕತೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದರೂ ಸಹ ಈಗಾಗಲೇ ಹಲವಾರು ಬಾರಿ ಹಲವಾರು ನಾಯಕರ ಸಂಧಾನ ವಿಫಲ ಗೊಂಡಿರುವ ಕಾರಣ ಬಹುಶಹ ಡಿಕೆಶಿ ರವರು ಈ ಮಾತನ್ನು ಹೇಳಿರಬಹುದು ಎಂದು ಎಲ್ಲರ ಅಭಿಪ್ರಾಯ ವಾಗಿದೆ. ಇನ್ನು ಇದರ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್ ಅವರು ನನಗೆ ಯಾವುದೇ ಕರೆ ಹೈಕಮಾಂಡ್ ನಿಂದ ಬಂದಿಲ್ಲ, ಸುಮಲತಾ ರವರ ಮನ ಒಲಿಸಲು ನನಗೆ ಯಾರು ಆದೇಶ ನೀಡಿಲ್ಲ. ಇನ್ನು ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿದೆ. ಎಲ್ಲ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರವರ ಉತ್ತರಿಸಲಿದ್ದಾರೆ ಆ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಜಾರಿಕೊಂಡಿದ್ದಾರೆ. ಈ ಹೇಳಿಕೆಯ ಮೂಲಕ ನಿಖಿಲ್ ಕುಮಾರಸ್ವಾಮಿ ರವರ ಗೆಲುವು ಮತ್ತಷ್ಟು ಕಗ್ಗಂಟಾಗಿದ್ದು, ಮಂಡ್ಯದಲ್ಲಿ ಗೆಲುವು ಅಸಾಧ್ಯ ಎಂಬುದು ಇದೀಗ ಅರ್ಥವಾಗುತ್ತಿದೆ.

Post Author: Ravi Yadav