ಸುಮ್ಮನಾಗದ ಕುತಂತ್ರಿಗಳು, ಗಡಿ ಮತ್ತಷ್ಟು ಉದ್ವಿಗ್ನ- ಮತ್ತೊಮ್ಮೆ ಘರ್ಜಿಸಿದ ಸೇನೆ

ಸುಮ್ಮನಾಗದ ಕುತಂತ್ರಿಗಳು, ಗಡಿ ಮತ್ತಷ್ಟು ಉದ್ವಿಗ್ನ- ಮತ್ತೊಮ್ಮೆ ಘರ್ಜಿಸಿದ ಸೇನೆ

ಭಾರತದ ಮುಂದೆ ನೇರವಾಗಿ ಹೋರಾಡಲು ಸಾಧ್ಯವಾಗದ ಪಾಕಿಸ್ತಾನವು ಶಾಂತಿ ಮಾತುಕತೆಗೆ ಸಿದ್ಧರಿರುವುದಾಗಿ ಘೋಷಿಸಿ ಬೆನ್ನ ಹಿಂದೆ ಚೂರಿ ಹಾಕುವ ಕೆಲಸವನ್ನು ಮುಂದುವರಿಸುತ್ತಿರುವುದು ಮತ್ತೊಮ್ಮೆ ಬಹಿರಂಗಗೊಂಡಿದೆ. ಪಾಕಿಸ್ತಾನವು ತನ್ನ ಕುತಂತ್ರ ನೀತಿಯನ್ನು ಬಿಡಲು ಸಿದ್ಧವಿಲ್ಲ ಎಂಬುದು ಇದೀಗ ಭಾರತಕ್ಕೆ ಮತ್ತೊಮ್ಮೆ ಅರ್ಥವಾಗಿದೆ. ಇದರಿಂದ ಭಾರತ ಹಾಗೂ ಪಾಕಿಸ್ತಾನದ ಗಡಿ ಮತ್ತಷ್ಟು ಉದ್ವಿಗ್ನ ಗೊಂಡಿದ್ದು ಪಾಕಿಸ್ತಾನವು ಭಾರತದ ವಿರುದ್ಧ ದಾಳಿ ನಡೆಸಲು ಎಲ್ಲ ತಯಾರಿಯನ್ನು ಮಾಡಿಕೊಳ್ಳುತ್ತಿರುವುದು ಬಯಲಾಗಿದೆ. ಯಾವ ರೀತಿಯಲ್ಲಿ ಯೋಜನೆ ರೂಪಿಸುತ್ತಿದೆ ಎಂಬುದು ಭಾರತೀಯರಿಗೆ ಇನ್ನೂ ಅರ್ಥವಾಗಿಲ್ಲ, ಆದರೆ ಖಚಿತವಾಗಿಯೂ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡುತ್ತದೆ ಎಂಬ ಮಾಹಿತಿ ಈ ಮೂಲಕ ಖಚಿತವಾಗಿದ್ದು ಭಾರತೀಯ ಸೇನೆಯು ಮತ್ತಷ್ಟು ಅಲರ್ಟ್ ಆಗಲಿದೆ. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ ವಿಷಯ ಸಂಪೂರ್ಣವಾಗಿ ತಿಳಿಯಲು ಕೆಳಗಡೆ ಓದಿ!

ಮೊದಲಿನಿಂದಲೂ ಪಾಕಿಸ್ತಾನದ ಕುತಂತ್ರ ನೀತಿಯನ್ನು ಅರಿತಿರುವ ಭಾರತೀಯ ಸೇನೆಯು ಗಡಿಯಲ್ಲಿ ಈಗಾಗಲೇ ಹೈ ಅಲರ್ಟ್ ಘೋಷಿಸಿ ಶತ್ರುಗಳ ದಾಳಿಯನ್ನು ಎದುರಿಸಲು ಹೊಂಚು ಹಾಕಿ ಕಾದು ಕುಳಿತಿದೆ. ವಾಯುಪಡೆಯ ದಾಳಿಯಿಂದ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯವಾಗಿ ಭಾರಿ ಮುಖಭಂಗ ಉಂಟಾಗಿದೆ. ಆದ ಕಾರಣದಿಂದ ಯಾವ ಕ್ಷಣದಲ್ಲಿ ಬೇಕಾದರೂ ಪಾಕಿಸ್ತಾನವು ಭಾರತದ ಮೇಲೆ ಅಪ್ರಚೋದಿತ ದಾಳಿಯನ್ನು ನಡೆಸಬಹುದು. ಕದನ ವಿರಾಮವನ್ನು ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಭಾರತ ಹಾಗೂ ಪಾಕಿಸ್ತಾನದ ಗಡಿಯುದ್ದಕ್ಕೂ ಭಾರತೀಯ ಸೇನೆಯು ಶತ್ರುಗಳ ದಾಳಿಯನ್ನು ಎದುರಿಸಲು ಸಿದ್ಧವಾಗಿ ನಿಂತಿದೆ.

ಇಷ್ಟೆಲ್ಲ ತಿಳಿದಿದ್ದರೂ ಸಹ ಪಾಕಿಸ್ತಾನವು ಸುಮ್ಮನಾದಂತೆ ಕಾಣುತ್ತಿಲ್ಲ, ಮತ್ತೊಮ್ಮೆ ಭಾರತೀಯ ಗಡಿ ದಾಟಿ ಗೂಢಚಾರಿ ಡ್ರೋನ್ ನನ್ನು ಕಳುಹಿಸಿದೆ. ಭಾರತೀಯ ಸೇನೆಗಳ ಚಲನ ವಲನಗಳನ್ನು ಗಮನಿಸುವ ಉದ್ದೇಶದಿಂದ ಪಾಕಿಸ್ತಾನವು ಮೂರನೇ ಬಾರಿ ಭಾರತದ ವಾಯು ಗಡಿಯನ್ನು ಉಲ್ಲಂಘನೆ ಮಾಡಿ ತನ್ನ ಡ್ರೋನ್ ಅನ್ನು ನುಸುಳುವ ದುಸ್ಸಾಹಸ ಮಾಡಿದೆ. ರಾಜಸ್ಥಾನದ ಶ್ರೀ ಗಂಗಾನಗರ್ ಭಾರತ ಹಾಗು ಪಾಕಿಸ್ತಾನದ ಗಡಿಯಲ್ಲಿ ಈ ಘಟನೆ ನಡೆದಿದ್ದು, ಭಾರತೀಯ ಸೈನಿಕರು ಮತ್ತಷ್ಟು ಅಲರ್ಟ್ ಆಗಿದ್ದಾರೆ. ಪಾಕಿಸ್ತಾನದ ಗಡಿ ಇಂದ ನೇರವಾಗಿ ನುಗ್ಗಲು ಪ್ರಯತ್ನಿಸಿದ ಯು ಎಂ ಎ ವಿ ಎಂಬ ಡ್ರೋನ್ ಭಾರತದ ವಾಯು ಸರಹದ್ದು ಉಲ್ಲಂಘನೆ ಮಾಡಿ ಬೇಹುಗಾರಿಕೆ ನಡೆಸಲು ಯತ್ನಿಸಿತ್ತು.

ಡ್ರೋನ್ ಭಾರತೀಯ ವಾಯು ಗಡಿಯನ್ನು ಉಲ್ಲಂಘಿಸಿದ ಮರುಕ್ಷಣ ಭಾರತೀಯ ಯೋಧರು ಡ್ರೋನ್ ಅನ್ನು ಪತ್ತೆ ಹಚ್ಚಿ ಕೆಲವೇ ಕೆಲವು ಕ್ಷಣಗಳಲ್ಲಿ ಉರುಳಿಸಿದ್ದಾರೆ. ಈ ಡ್ರೋನ್ ಪಾಕಿಸ್ತಾನದಿಂದ ಬಂದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಶಾಂತಿ ಬಯಸುವ ಪಾಕಿಸ್ತಾನವು ಯಾವ ಕುತಂತ್ರಿ ನೀತಿಯನ್ನು ಅನುಸರಿಸಲು ಈ ರೀತಿಯ ಕೆಲಸ ಮಾಡುತ್ತಿದೆ ಎಂದು ಸೇನಾಧಿಕಾರಿಗಳು ಪ್ರಶ್ನಿಸಿದ್ದಾರೆ. ಕಳೆದ 15 ದಿನಗಳಲ್ಲಿ ಭಾರತೀಯ ಯೋಧರು ಇದೇ ರೀತಿಯ ಒಟ್ಟು ಮೂರು ಡ್ರೋನ್ ಗಳನ್ನು ಹೊಡೆದಿದ್ದಾರೆ. ಇಷ್ಟೆಲ್ಲಾ ಆದರೂ ಪಾಕಿಸ್ತಾನಕ್ಕೆ ಇನ್ನೂ ಬುದ್ಧಿ ಬಂದಂತೆ ಕಾಣುತ್ತಿಲ್ಲ ಭಾರತೀಯರನ್ನು ಸುಖಾಸುಮ್ಮನೆ ಕೆಣಕಿ ನನ್ನ ಅಂತ್ಯಕ್ಕೆ ತಾನೇ ನಾಂದಿ ಹಾಡುವ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ. ಗಡಿಯಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ವಿರೋಧ ಪಕ್ಷಗಳು ಸಾಕ್ಷಿ ಕೇಳುತ್ತಿವೆ, ದಾಳಿ ನಡೆದದ್ದು ಸುಳ್ಳು ಎಂದಾದರೆ ಪಾಪಿಗಳು ಯಾಕೆ ಇಷ್ಟೆಲ್ಲ ಮಾಡುತ್ತಿದ್ದರು ನೀವೇ ಯೋಚಿಸಿ. ಗಡಿಯ ಕ್ಷಣ ಕ್ಷಣ ಮಾಹಿತಿಗಾಗಿ ಕರುನಾಡ ವಾಣಿ ಪೇಜ್ ಅನ್ನು ಲೈಕ್ ಮಾಡಿ ಫಾಲೋ ಮಾಡಿ