ಭಾರತೀಯ ಸೇನೆಗೆ ಬಿಗ್ ರಿಲೀಫ್: ಮತ್ತೊಂದು ಐತಿಹಾಸಿಕ ನಿರ್ಧಾರ ಪ್ರಕಟಿಸಿದ ಕೇಂದ್ರ ಸರ್ಕಾರ

  • 8.4K
    Shares

ಭಾರತೀಯ ಸೈನಿಕರಿಗೆ ಇಂದು ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಭಾರತೀಯ ಸೈನಿಕರು ಗಡಿಯಲ್ಲಿ ಪ್ರಾಣವನ್ನು ಲೆಕ್ಕಿಸದೆ ದೇಶವನ್ನು ಕುತಂತ್ರಿ ರಾಷ್ಟ್ರಗಳಿಂದ ಹಾಗೂ ಉಗ್ರರಿಂದ ರಕ್ಷಿಸುತ್ತಿದ್ದಾರೆ, ಇಷ್ಟೇ ಅಲ್ಲದೆ ಭಾರತದ ಕಿರೀಟ ಎಂದೇ ಖ್ಯಾತಿ ಪಡೆದು ಕೊಂಡಿರುವ ಜಮ್ಮು ಹಾಗೂ ಕಾಶ್ಮೀರ ವನ್ನು ಉಗ್ರರ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳುವುದು ಸೈನಿಕರಿಗೆ ಬಹುದೊಡ್ಡ ಸವಾಲಾಗಿದೆ. ಕೆಲವು ಯುವಕರು ಹಾಗೂ ಕಾಶ್ಮೀರಿ ನಿವಾಸಿಗಳು ಉಗ್ರರನ್ನು ಬೆಂಬಲಿಸುತ್ತಿರುವ ಕಾರಣ ಸೇನೆಗೆ ಭಾರಿ ಹಿನ್ನಡೆ ಉಂಟಾಗಿದೆ. ಜನಸಾಮಾನ್ಯರು ಉಗ್ರರಿಂದ ಪ್ರೇರಣೆಗೊಂಡು ಉಗ್ರರ ಬೆಂಬಲಕ್ಕೆ ನಿಂತಿರುವ ಕಾರಣ ಕಾಶ್ಮೀರವು ಅಕ್ಷರಸಹ ರಣರಂಗ ವಾಗಿದೆ. ಇಂತಹ ಸಮಯದಲ್ಲಿ ಸೈನಿಕರ ಬೆಂಬಲಕ್ಕೆ ನಿಲ್ಲುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ ಹಾಗೂ ಈ ಕರ್ತವ್ಯವನ್ನು ನರೇಂದ್ರ ಮೋದಿರವರ ಸರ್ಕಾರ ಬಹಳ ನಿಷ್ಠೆಯಿಂದ ನಿರ್ವಹಿಸುತ್ತಿದೆ.

ಜಮ್ಮು ಹಾಗೂ ಕಾಶ್ಮೀರ ದಲ್ಲಿ ಭಾರತೀಯ ಸೈನಿಕರು ಹಲವಾರು ಸವಾಲುಗಳನ್ನು ಎದುರಿಸುತ್ತಾ ಬದುಕುತ್ತಿದ್ದಾರೆ. ಪ್ರಮುಖವಾಗಿ ಕಾಶ್ಮೀರದ ಉಗ್ರರನ್ನು ಸದೆಬಡಿಯಲು ಎರಡು ಸಮಸ್ಯೆಗಳು ಭಾರತೀಯ ಸೇನೆಯನ್ನು ಕಾಡುತ್ತಿವೆ. ಮೊದಲನೆಯದು ಪ್ರತಿಯೊಂದಕ್ಕೂ ಸಾಕ್ಷಿ ಕೇಳುವ ದೇಶ ದ್ರೋಹಿಗಳು, ತಮಗೆ ಸೈನ್ಯದ ಮೇಲೆ ನಂಬಿಕೆ ಇಲ್ಲ ವಾದಲ್ಲಿ ದೇಶದ್ರೋಹಿಗಳು ಭಾರತೀಯ ಗಡಿ ಗೆ ತೆರಳಿ ಕೆಲವೇ ಕೆಲವು ದಿನಗಳ ಕಾಲ ಗಡಿಯನ್ನು ರಕ್ಷಿಸಬೇಕು ಇಲ್ಲವಾದಲ್ಲಿ ಸುಮ್ಮನೆ ಇದ್ದರೆ ಸಾಕು ಉಳಿದಿದ್ದನ್ನು ಭಾರತೀಯ ಸೇನೆಯು ನೋಡಿಕೊಳ್ಳುತ್ತದೆ, ಸುಖಾಸುಮ್ಮನೆ ಸೇನೆಯ ಮೇಲೆ ಕೇವಲ ಕೇಂದ್ರ ಸರ್ಕಾರವನ್ನು ಧೂಷಿಸುವ ಉದ್ದೇಶದಿಂದ ಆರೋಪ ಮಾಡುವುದು ಎಷ್ಟು ಸರಿ.

ಇನ್ನು ಇದನ್ನೇ ಪ್ರಮುಖ ಅಸ್ತ್ರವಾಗಿ ಇಟ್ಟುಕೊಂಡಿರುವ ಕೆಲವು ಸಂಸ್ಥೆಗಳು ಭಾರತೀಯ ಸೈನಿಕರು ತಮ್ಮ ಪ್ರಾಣವನ್ನು ಉಳಿಸಿ, ದೇಶವನ್ನು ರಕ್ಷಿಸಲು ಉಗ್ರರನ್ನು ಬೆಂಬಲಿಸುವ ಜನಸಾಮಾನ್ಯರ ಮೇಲೆ ಕಠಿಣ ಕ್ರಮ ಕೈಗೊಂಡಲ್ಲಿ ಮೊದಲು ದೇಶದಲ್ಲಿ ಸುಖಾಸುಮ್ಮನೆ ಬೊಬ್ಬೆ ಹೊಡೆಯುವ ಕೆಲವು ಮಾನವ ಹಕ್ಕುಗಳ ಹೋರಾಟ ಸಂಸ್ಥೆಗಳು ದ್ವನಿ ಎತ್ತುತ್ತವೆ. 40ಕ್ಕೂ ಹೆಚ್ಚು ಯೋಧರು ಭಾರತ ದೇಶಕ್ಕಾಗಿ ವೀರಮರಣ ಹೊಂದಿದ ಈ ಯಾವ ಮಾನವ ಹಕ್ಕುಗಳ ಸಂಸ್ಥೆಗಳು ಸಹ ಧ್ವನಿಯೆತ್ತಲಿಲ್ಲ ಅದೇ ಒಂದು ವೇಳೆ ಭಾರತೀಯ ಸೇನೆಯು ಉಗ್ರರನ್ನು ಸದೆಬಡಿದ ರೆ ಹಾಗೂ ಕಲ್ಲು ತೂರುವ ಜನರ ಗುಂಪನ್ನು ಚದುರಿಸಲು ಪ್ರಯತ್ನಿಸಿದರೆ ಈ ಆಯೋಗಗಳು ಬೊಬ್ಬೆ ಹೊಡೆಯುತ್ತವೆ.

ಪ್ರತಿಬಾರಿಯೂ ಕಾನೂನು ತನಗೆ ತಿಳಿದಿದೆ ಎಂದು ಬೊಬ್ಬೆ ಹೊಡೆಯುವ ಈ ಆಯೋಗಗಳಿಗೆ ಕೇಂದ್ರ ಸರ್ಕಾರವು ಇಂದೂ ಪೂರ್ಣವಿರಾಮ ವನ್ನು ನೀಡಲು ನಿರ್ಧರಿಸಿದೆ. ಹೌದು ಭಾರತೀಯ ಸೇನೆಗೆ ಬೆಂಬಲವಾಗಿ ನಿಲ್ಲಲು ಕೇಂದ್ರ ಸರ್ಕಾರವು ಐಪಿಎಸ್ ಅಧಿಕಾರಿಗಳನ್ನು ಇನ್ನು ಕೆಲವೇ ಕೆಲವು ದಿನಗಳಲ್ಲಿ ನೇಮೀಸಲಿದೆ. ಐಪಿಎಸ್ ಅಧಿಕಾರಿಗಳು ಮಾನವ ಹಕ್ಕುಗಳ ಸಂಪೂರ್ಣ ವಿಷಯಗಳಲ್ಲಿ ಭಾರತೀಯ ಸೇನೆಯ ಬೆಂಬಲಕ್ಕೆ ನಿಲ್ಲಲಿದೆ. ನೇರವಾಗಿ ಭಾರತೀಯ ಸೇನೆಯ ಚೀಫ್ ಗಳಿಗೆ ಪ್ರತಿ ವಿಷಯದಲ್ಲೂ ಸಹಾಯ ಮಾಡಲಿ ದ್ದಾರೆ. ಅದರಲ್ಲಿಯೂ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಪ್ರತಿ ವಿಷಯಗಳಲ್ಲಿ ಐಪಿಎಸ್ ಅಧಿಕಾರಿಗಳು ಭಾರತೀಯ ಸೇನೆಯ ಪರ ಕಾನೂನಾತ್ಮಕ ಹೋರಾಟ ಹಾಗೂ ಸಲಹೆಗಳನ್ನು ನೀಡಲಿದ್ದಾರೆ. ಕೇಂದ್ರದ ಈ ಸರ್ಕಾರಕ್ಕೆ ಭಾರೀ ಶ್ಲಾಘನೆ ಗಳು ಕೇಳಿಬಂದಿವೆ, ನಿಮಗೂ ಈ ನಿರ್ಧಾರ ಸರಿ ಎನಿಸಿದರೆ ದಯವಿಟ್ಟು ಶೇರ್ ಮಾಡಿ ಬೆಂಬಲಿಸಿ ಹಾಗೂ ಕ್ಷಣ ಕ್ಷಣದ ಮಾಹಿತಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡಿ.

Facebook Comments

Post Author: RAVI