ಬಿಗ್ ಬ್ರೇಕಿಂಗ್: ದೇಶದ ಪ್ರತಿ ಗಲ್ಲಿ ಗಲ್ಲಿಗೂ ಬಂಪರ್ ಯೋಜನೆ ಘೋಷಿಸಿದ ಮೋದಿ

ಬಿಗ್ ಬ್ರೇಕಿಂಗ್: ದೇಶದ ಪ್ರತಿ ಗಲ್ಲಿ ಗಲ್ಲಿಗೂ ಬಂಪರ್ ಯೋಜನೆ ಘೋಷಿಸಿದ ಮೋದಿ

ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದಿನನಿತ್ಯ ಅಗತ್ಯ ವಸ್ತುಗಳ ಕಡಿಮೆ ಅಪಾರ ಪ್ರಮಾಣದಲ್ಲಿ ಇಳಿಕೆಯಾಗಿದೆ. ಭಾರತೀಯ ರೂಪಾಯಿ ಬೆಲೆ ಪ್ರತಿ ಬಾರಿಯೂ ಕುಸಿಯುತ್ತಿದ್ದ ಕಾರಣ ಪೆಟ್ರೋಲ್ ಬೆಲೆ ಹಲವಾರು ವರ್ಷಗಳಿಂದ ಏರಿಕೆ ಕಂಡಿತ್ತು. ಆದರೆ ನರೇಂದ್ರ ಮೋದಿ ರವರ ಕೆಲವು ದಿಟ್ಟ ನಿರ್ಧಾರಗಳಿಂದ ರೂಪಾಯಿ ಬೆಲೆ ಏರಿಕೆ ಕಾಣುತ್ತಿದೆ, ಪೆಟ್ರೋಲ್ ಬೆಲೆ ಹಲವಾರು ವರ್ಷಗಳಿಂದ ಸ್ಥಿರವಾಗಿ ನಿಂತಿದೆ. ಜನರಿಗೆ ಈಗಾಗಲೇ ಹಲವಾರು ಆಫರ್ ಗಳನ್ನು ಘೋಷಿಸಿರುವ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ 5 ಲಕ್ಷದವರೆಗೆ ಯಾವುದೇ ಟ್ಯಾಕ್ಸ್ ಕಟ್ಟುವ ಹಾಗೆ ಇಲ್ಲ ಎಂದು ಮಧ್ಯಮ ವರ್ಗದವರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಅಧಿಕಾರ ನಡೆಸುತ್ತಿದ್ದೇವೆ ಎಂಬುದನ್ನು ಸಾಬೀತುಪಡಿಸಿದರು.

ಇನ್ನು ದೇಶದೆಲ್ಲೆಡೆ ಒಂದು ತೆರಿಗೆ ವ್ಯವಸ್ಥೆಯ ಮೂಲಕ ಸಂಚಲನ ಸೃಷ್ಟಿಸಿದ ನರೇಂದ್ರ ಮೋದಿರವರು, ಕೆಲವೊಂದು ವರದಿಗಳ ಪ್ರಕಾರ ಪ್ರತಿ ಗೃಹಿಣಿಯು ತಿಂಗಳಿಗೆ ಸಾವಿರಕ್ಕೂ ಹೆಚ್ಚು ರೂಪಾಯಿ ಕೇವಲ ಜಿಎಸ್ಟಿ ಎಂಬ ತೆರಿಗೆ ಪದ್ಧತಿ ಇಂದ ಉಳಿಸುತ್ತಿದ್ದಾರೆ. ಹೀಗೆ ಹೇಳುತ್ತಾ ಹೋದರೆ ಕೇಂದ್ರ ಸರ್ಕಾರವು ಈಗಾಗಲೇ ಮಧ್ಯಮ ವರ್ಗದ ಜನರಿಗೆ ಹಲವಾರು ಯೋಜನೆಗಳನ್ನು ಘೋಷಿಸಿ, ಮಧ್ಯಮ ವರ್ಗದವರಿಗೆ ತುಸು ನೆಮ್ಮದಿಯ ಜೀವನವನ್ನು ನೀಡಿದ್ದಾರೆ. ಇಷ್ಟೇ ಅಲ್ಲದೆ ವೈದ್ಯಕೀಯ ಕ್ಷೇತ್ರದಲ್ಲಿ ನರೇಂದ್ರ ಮೋದಿ ಅವರು ಈಗಾಗಲೇ ಯಾವ ಸರ್ಕಾರವೂ ಕಂಡುಕೇಳರಿಯದ ನಿರ್ಧಾರಗಳನ್ನು ತೆಗೆದುಕೊಂಡು ಬಡವರ ಪಾಲಿಗೆ ಆಶಾಕಿರಣವಾಗಿದ್ದಾರೆ.

ಯಾವುದೇ ಅಪ್ಲಿಕೇಶನ್ / ಅರ್ಜಿ ತುಂಬದೆಯೇ ಬಡವರ ಮನೆ ಬಾಗಿಲಿಗೆ ಯಶಸ್ವಿನಿ ಎಂಬ ಯೋಜನೆಯ ಹೆಸರಿನಲ್ಲಿ ಆರೋಗ್ಯ ವಿಮಾ ಕಾರ್ಡ್ ಗಳು ಬರುತ್ತಿವೆ. ಸುಮಾರು ಈಗಾಗಲೇ ಲಕ್ಷಾಂತರ ಜನ ಈ ವಿಮಾ ಯೋಜನೆಯ ಲಾಭವನ್ನು ಪಡೆದು ಕೊಂಡಿದ್ದು, ನರೇಂದ್ರ ಮೋದಿ ರವರ ಕೆಲಸಕ್ಕೆ ಬಾರಿ ಶ್ಲಾಘನೆಗಳು ಕೇಳಿಬಂದಿವೆ. ಈ ಯೋಜನೆಯನ್ನು ಐಟಿ ದಿಗ್ಗಜ ಮೈಕ್ರೋಸಾಫ್ಟ್ ನ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಸಹ ಹಾಡಿ ಹೊಗಳಿದ್ದಾರೆ ಹಾಗೂ ನರೇಂದ್ರ ಮೋದಿ ಅವರ ಈ ಕಾರ್ಯಕ್ಕೆ ಜೈ ಎಂದಿದ್ದಾರೆ. ಇನ್ನೂ ಹತ್ತು ಹಲವಾರು ದಿಗ್ಗಜ ನಾಯಕರು ನರೇಂದ್ರ ಮೋದಿಯವರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇಷ್ಟೆಲ್ಲ ಮಾಡಿದ ನರೇಂದ್ರ ಮೋದಿ ಅವರು ಬಡವರಿಗೆ ಕಡಿಮೆ ದರದಲ್ಲಿ ಔಷಧಗಳನ್ನು ನೀಡುವ ಜನೌಷಧಿ ಎಂಬ ಯೋಜನೆಯ ಅಡಿಯಲ್ಲಿ ಆರು ಸಾವಿರ ಬೆಲೆಬಾಳುವ ಔಷಧವನ್ನು ಕೇವಲ 600 ರೂಪಾಯಿ ನೀಡುವ ಮಳಿಗೆಗಳನ್ನು ಭಾರತದಲ್ಲಿ ತೆರೆದು ಅದೆಷ್ಟೊ ಬಡವರಿಗೆ ಸಹಾಯ ಮಾಡಿದರು. ಆದರೆ ಯೋಜನೆ ಜಾರಿಯಾದ ಕ್ಷಣದಿಂದಲೂ ಹಲವಾರು ಜನರು ಜನೌಷಧಿ ಕೇಂದ್ರಗಳು ಎಲ್ಲಾ ಸ್ಥಳಗಳಲ್ಲಿ ಇಲ್ಲ ನಾವು ಹುಡುಕಿಕೊಂಡು ಹೋಗಬೇಕು ಎಂಬ ಆರೋಪವನ್ನು ನರೇಂದ್ರ ಮೋದಿ ರವರ ಮುಂದೆ ಇಟ್ಟಿದ್ದರು. ಇದನ್ನು ಸ್ವತಃ ನರೇಂದ್ರ ಮೋದಿ ಅವರ ಸರ್ಕಾರ ನಿವಾರಿಸಲು ಇಂದು ಮತ್ತೊಮ್ಮೆ ಹೆಜ್ಜೆ ಇಟ್ಟಿದೆ. ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಅಂದರೆ ಮುಂದಿನ ವರ್ಷದ ಕೊನೆಯ ತಿಂಗಳಿನ ಹೊತ್ತಿಗೆ ದೇಶದ ಪ್ರತಿ ಗಲ್ಲಿ ಗಳಿಗೂ ಜನೌಷದ ಕೇಂದ್ರವನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಸಚಿವ ಮನ್ಸುಕ್ ಅವರು ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಎಲ್ಲಾ ಯೋಜನೆಗಳನ್ನು ತಾನು ಅಂದುಕೊಂಡದ್ದಕ್ಕಿಂತಲೂ ಮೊದಲು ಮುಗಿಸಿ ಸಾಧನೆ ಮಾಡಿರುವ ನರೇಂದ್ರ ಮೋದಿ ರವರ ಸರ್ಕಾರ ಈ ಯೋಜನೆಯನ್ನು ಆದಷ್ಟು ಬೇಗ ಜಾರಿಗೆ ತಂದಲ್ಲಿ ಅದೆಷ್ಟೋ ಬಡವರು ಪ್ರತಿದಿನವೂ ನರೇಂದ್ರ ಮೋದಿ ರವರ ಈ ಕಾರ್ಯವನ್ನು ಶ್ಲಾಘನೆ ಮಾಡುತ್ತಾರೆ.