ಶಾಕಿಂಗ್: ಯೋಧರ ಕುಟುಂಬಕ್ಕೆ ಈ ಕುರುಡ ವಿಜ್ಞಾನಿ ಮಾಡಿದ್ದೇನು ಗೊತ್ತಾ??

ಶಾಕಿಂಗ್: ಯೋಧರ ಕುಟುಂಬಕ್ಕೆ ಈ ಕುರುಡ ವಿಜ್ಞಾನಿ ಮಾಡಿದ್ದೇನು ಗೊತ್ತಾ??

ಕಳೆದ ತಿಂಗಳ ಫೆಬ್ರವರಿ 14ರಂದು ಇಡೀ ವಿಶ್ವವೇ ದಂಗ್ ಆಗುವಂತೆ ಭಾರತದ ಸೈನಿಕರ ಮೇಲೆ ಹೇಡಿ ಉಗ್ರರು ದಾಳಿ ನಡೆಸಿದ್ದರು. ಅಂದು ಇಡೀ ದೇಶವೇ ಹುತಾತ್ಮರ ಕಂಡು ಕಣ್ಣೀರನ್ನು ಇಟ್ಟಿತ್ತು, ಅದರ ಪ್ರತಿಕಾರವಾಗಿ ಭಾರತ ದೇಶವು ಸಹ ಸರಿ ಸುಮಾರು ಮುನ್ನೂರಕ್ಕೂ ಹೆಚ್ಚು ಉಗ್ರರನ್ನು ಕೊಂದು ಸೇಡು ತೀರಿಸಿಕೊಂಡಿತು. ಆದರೆ ಹುತಾತ್ಮರಾದವರು ಮತ್ತೆ ವಾಪಸ್ಸು ಬರುವುದಿಲ್ಲ ಎಂಬ ದುಃಖ ಎಲ್ಲರನ್ನೂ ಕಾಡತೊಡಗಿದೆ. ಹುತಾತ್ಮರ ಕುಟುಂಬಕ್ಕೆ ಸರ್ಕಾರ ನೆರವು ನೀಡುತ್ತದೆ ಆದರೂ ಸಹ ಹಲವಾರು ದಾನಿಗಳು ಯೋಧರ ಕುಟುಂಬಕ್ಕೆ ನೆರವಾಗಲು ನಿರ್ಧರಿಸಿದ್ದಾರೆ ಅದರಲ್ಲಿ ಈ ಕುರುಡ ವಿಜ್ಞಾನಿಯು ಒಬ್ಬರು.

ಹುಟ್ಟಿನಿಂದಲೇ ಕುರುಡ ರಾಗಿರುವ ಮರ್ತಝ ಅಲಿ ರವರು ಮುಂಬೈನಲ್ಲಿ ವೈಜ್ಞಾನಿಕ ಸಂಶೋಧನೆಯಲ್ಲಿ ನಿರತರಾಗಿರುತ್ತಾರೆ. ತಮ್ಮ ಅಂಧತ್ವ ತಮಗೆ ಅಡ್ಡಿ ಬಾರದಂತೆ ರೇಡಿಯೇಶನ್ ಟೆಕ್ನಾಲಜಿಯಲ್ಲಿ ಹಲವಾರು ಸಾಧನೆಗಳನ್ನು ಇವರು ಈಗಾಗಲೇ ಮಾಡಿದ್ದಾರೆ. ಇಂತಹ ಮಹಾನ್ ವ್ಯಕ್ತಿ ಯು ಹುತಾತ್ಮರಾದ ಯೋಧರ ಕುಟುಂಬಕ್ಕೆ ಬರೋಬ್ಬರಿ 110 ಕೋಟಿ ಹಣ ನೀಡಿದ್ದಾರೆ, ಹಣ ನೀಡುವ ಮುನ್ನ ನರೇಂದ್ರ ಮೋದಿ ಅವರನ್ನು ನಾನು ಒಮ್ಮೆ ಬೇಟಿ ಯಾಗಬೇಕು ತದನಂತರ ನೇರವಾಗಿ ಯೋಧರ ಖಾತೆಗಳಿಗೆ 110 ಕೋಟಿ ಜಮಾ ಆಗುತ್ತದೆ ಎಂದು ಘೋಷಿಸಿದ್ದಾರೆ. ಇದಕ್ಕೆ ಒಪ್ಪಿಕೊಂಡಿರುವ ನರೇಂದ್ರ ಮೋದಿರವರು ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ವಿಜ್ಞಾನಿಯನ್ನು ಭೇಟಿಯಾಗಿ ಅವರ ಕುಟುಂಬಕ್ಕೆ ಹಣ ತಲುಪಿಸುವಲ್ಲಿ ನಿರತರಾಗಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಇಂತಹ ಸಾಮಾಜಿಕ ಕಾರ್ಯಕರ್ತರು ಸಿಗುವುದು ಬಹಳ ವಿರಳ, ಜೈ ಹಿಂದ್.