ವಿಮಾನದಲ್ಲೂ ಮೊಳಗಲಿದೆ ಜೈ ಹಿಂದ್ ಘೋಷಣೆ, ಮೋದಿಯಿಂದ ಮತ್ತೊಂದು ಐತಿಹಾಸಿಕ ನಿರ್ಧಾರ

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ರಾಷ್ಟ್ರೀಯತೆಯ ವಿಷಯವಾಗಿ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಈಗಾಗಲೇ ದೇಶದ ಪ್ರಮುಖ ನಗರಗಳಲ್ಲಿ 50 ಅಡಿ ಉದ್ದದ ರಾಷ್ಟ್ರಧ್ವಜ ಸ್ತಂಭವನ್ನು ನಿರ್ಮಿಸಲು ಕೇಂದ್ರ ಸರ್ಕಾರ ಯೋಜನೆಯನ್ನು ರೂಪಿಸಿ ಹಲವಾರು ನಗರಗಳಲ್ಲಿ ಈಗಾಗಲೇ ಅನುಷ್ಠಾನಕ್ಕೆ ತಂದಿದೆ. ಇಷ್ಟೇ ಅಲ್ಲದೆ ರೈಲ್ವೆ ನಿಲ್ದಾಣಗಳಲ್ಲಿ ರಾಷ್ಟ್ರೀಯತೆಯನ್ನು ಮೆರೆಯುವ ಬೃಹತ್ ರಾಷ್ಟ್ರಧ್ವಜ ಹಾರಾಡಲಿದೆ. ಇದೇ ಸಾಲಿಗೆ ಇಂದು ನರೇಂದ್ರ ಮೋದಿರವರು ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ ಹಾಗೂ ಈ ಮೂಲಕ ದೇಶದ ಜನರಲ್ಲಿ ರಾಷ್ಟ್ರೀಯತೆಯನ್ನು ಹೆಚ್ಚಿಸುವ ಕೆಲಸ ಮಾಡಲಿದ್ದಾರೆ.

ಇನ್ನು ಮುಂದೆ ಭಾರತೀಯ ವಿಮಾನ ಸಂಸ್ಥೆ ಏರ್ ಇಂಡಿಯಾದ ವಿಮಾನಗಳಲ್ಲಿ ನೀಡುವ ಪ್ರತಿಯೊಂದು ಮಾಹಿತಿಯ ನಂತರ ಕೊನೆಯಲ್ಲಿ ಜೈ ಹಿಂದ್ ಎಂಬ ಘೋಷವಾಕ್ಯ ಮೊಳಗಲಿದೆ. ಪ್ರತಿಯೊಂದು ಮಾಹಿತಿಯ ನಂತರ ಜೈ ಹಿಂದ್ ಹೇಳುವುದನ್ನು ಕಡ್ಡಾಯಗೊಳಿಸಲಾಗಿದೆ. ನರೇಂದ್ರ ಮೋದಿ ರವರ ಈ ನಿರ್ಧಾರಕ್ಕೆ ದೇಶದ ಎಲ್ಲೆಡೆಯಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಇನ್ನೂ ಹತ್ತು ಹಲವಾರು ಕಡೆ ಇದೇ ರೀತಿಯ ನಿರ್ಧಾರಗಳನ್ನು ಜಾರಿಗೊಳಿಸಿದರೆ ರಾಷ್ಟ್ರೀಯತೆ ಜನರ ಮನದಲ್ಲಿ ಉಳಿಯುತ್ತದೆ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ. ಜೈ ಹಿಂದ್

Post Author: Ravi Yadav