ದರ್ಶನ್ ಗೆ ಠಾಕೂರ್ ಅನೂಪ್ ನೀಡಿದ ಉಡುಗೊರೆ ಏನು ಗೊತ್ತಾ??

  • 281
    Shares

ಯಜಮಾನ ಚಿತ್ರದಲ್ಲಿ ವಿಲನ್ ಆಗಿ ನಟಿಸಿ ಇಡೀ ಕರ್ನಾಟಕದ ಜನರ ಕೈಯಲ್ಲಿ ಭೇಷ್ ಎನಿಸಿಕೊಂಡಿರುವ ಠಾಕೂರ್ ಅನೂಪ್ ಸಿಂಗ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಉದ್ವರ್ಷ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಯಜಮಾನ ಚಿತ್ರದಲ್ಲಿ ವಿಲನ್ ಗೆ ಬೇಕಾಗಿರುವ ಎಲ್ಲಾ ಆಯ್ಕೆಗಳಲ್ಲಿ ಯೂ ಬಹಳ ಅತ್ಯುತ್ತಮವಾಗಿ ನಟಿಸಿ ಯಜಮಾನ ಚಿತ್ರದ ಯಶಸ್ಸಿಗೆ ತಮ್ಮದೇ ಆದ ಜೀವ ತುಂಬಿರುವ ಠಾಕೂರ್ ಅನೂಪ್ ರವರ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ನಟ ದರ್ಶನ್ ರವರು ಆಗಮಿಸಿದ್ದರು. ಠಾಕೂರ್ ಅನೂಪ್ ಸಿಂಗ್ ರವರ ಬಗ್ಗೆ ಮಾತನಾಡಿದ ದರ್ಶನ್ ರವರು ಇವರ ಕೆಲಸವನ್ನು ನಾನು ಬಹಳ ಮೆಚ್ಚಿದ್ದೇನೆ, ಅವರೇ ನಟಿಸಿ, ಕನ್ನಡದ ಡೈಲಾಗ್ ಅಭ್ಯಾಸ ಮಾಡಿ ಅವರೇ ಡಬ್ ಮಾಡಿದ್ದಾರೆ ಎಂದು ಠಾಕೂರ್ ಅನೂಪ್ ಸಿಂಗ್ ರವರನ್ನು ಹಾಡಿ ಹೊಗಳಿದ್ದಾರೆ.

ಗೆಳೆಯನ ಹಾಗೂ ಸುನೀಲ್ ಕುಮಾರ್ ದೇಸಾಯಿ ರವರ ಆಹ್ವಾನ ದಿಂದ ಆಗಮಿಸಿದ್ದ ದರ್ಶನ್ ರವರಿಗೆ ಠಾಕೂರ್ ಅನೂಪ್ ರವರು ಎಲ್ಲರ ಹುಬ್ಬೇರಿಸುವಂತೆ ಗಿಫ್ಟ್ ನೀಡಿದ್ದಾರೆ. ದರ್ಶನ್ ರವರಿಗೆ ಬರೋಬ್ಬರಿ 1 ಕೆಜಿ ತೂಕದ ವಾಚ್ ಗಿಫ್ಟ್ ನೀಡಿದ್ದಾರೆ. 1 ಕೆಜಿ ವಾಚ್ ಉಡುಗೊರೆಯನ್ನಾಗಿ ಪಡೆದ ದರ್ಶನ ರವರು ಒಂದು ಕ್ಷಣ ದಂಗಾಗಿ ಕಟ್ಟುವುದು ಹೇಗೆ ಎಂದು ಟಾಕುರ್ ಅನುಪ್ ರವರನ್ನು ಕಿಚಾಯಿಸಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಆದರೆ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದನ್ನು ಅರಿತ ದರ್ಶನ್ ರವರು ಸ್ನೇಹಿತನ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಹಾಜರಾಗಿ ನೆರೆದಿದ್ದವರಿಗೆ ಹಾಗೂ ಸ್ನೇಹಿತರಿಗೆ ಖುಷಿ ನೀಡಿದರು.

Facebook Comments

Post Author: RAVI