ಎಲ್ಲರಿಗೂ ಶಾಕ್ ನೀಡಿದ ಸನ್ನಿಧಿ: ಫುಲ್ ಟ್ರೊಲ್ ಮಾಡಿದ ನೆಟ್ಟಿಗರು

ಅಗ್ನಿಸಾಕ್ಷಿ, ಕಳೆದ ಹಲವಾರು ವರ್ಷಗಳಿಂದ 8:00 ಗಂಟೆ ಆಯಿತು ಎಂದರೆ ಸರಿಸುಮಾರು ಹಲವಾರು ಮನೆಗಳಲ್ಲಿ ಒಂದೇ ಧಾರವಾಹಿ ಹೆಸರು ಕೇಳಿಬರುತ್ತದೆ ಅದುವೇ ಅಗ್ನಿಸಾಕ್ಷಿ. ನಟಿ ಚಂದ್ರಿಕಾ ರವರ ಮುಖವಾಡ ಕಳಚಿ ಬಿದ್ದ ನಂತರ ಅಗ್ನಿಸಾಕ್ಷಿ ಧಾರವಾಹಿ ಇನ್ನೇನು ಕೊನೆಗೊಳ್ಳುತ್ತದೆ ಎಂದುಕೊಂಡಿದ್ದರು. ಅದಕ್ಕೆ ತಕ್ಕಂತೆ  ಅದರ ಜೊತೆಗೆ ಕಿಶೋರ್ ತಮ್ಮನಾದ ಕೌಶಿಕ್ ಸಹ ಸಿಕ್ಕಿ ಬಿದ್ದಿದ್ದನ್ನು, ಆದರೆ ಕಥೆಯ ಬಗ್ಗೆ ಅಗ್ನಿ ಸಾಕ್ಷಿಯ ಸನ್ನಿಧಿ ರವರ ಮಾತು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಧಾರವಾಹಿಕ್ಲೈಮ್ಯಾಕ್ಸ್ ಮುಗಿದುಹೋಯಿತು ಇನ್ನೇನಿದ್ದರೂ ಒಂದೆರಡು ಫೈಟ್ ಗಳ ನಂತರ ಇತಿಶ್ರೀ ಆಡಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.

ಆದರೆ ಅಗ್ನಿಸಾಕ್ಷಿ ಖ್ಯಾತಿಯ ಸನ್ನಿಧಿ ರವರು ಮಾಧ್ಯಮಗಳು ಮುಂದೆ ಅಗ್ನಿಸಾಕ್ಷಿ ಧಾರಾವಾಹಿ ಇನ್ನೇನು ಕೊನೆಗೊಳ್ಳುತ್ತದೆ ತದನಂತರ ನಿಮ್ಮ ಮುಂದಿನ ಯೋಜನೆಗಳು ಯಾವುವು ಎಂದು ಪ್ರಶ್ನಿಸಿದಾಗ, ಅಗ್ನಿಸಾಕ್ಷಿ ಧಾರವಾಹಿಯಲ್ಲಿ ದೊಡ್ಡ ತಿರುವು ಸಿಕ್ಕಿರುವುದು ನಿಜ, ಎಲ್ಲವೂ ಈಗ ಹೊರಬಿದ್ದಿದೆ. ಆದರೆ ಧಾರವಾಹಿ ಸದ್ಯ ಮುಗಿಯುವುದಿಲ್ಲ ಹಾಗೂ ಅಸಲಿ ಕತೆ ಇದೀಗ ಶುರುವಾಗಿದೆ ಎಂದು ಉತ್ತರ ನೀಡಿದ್ದಾರೆ. ಈ ಉತ್ತರದ ಮೂಲಕ ಅಗ್ನಿಸಾಕ್ಷಿ ಹಲವಾರು ವರ್ಷಗಳ ಪಯಣವನ್ನು ಮುಗಿಸುತ್ತದೆ ಎಂದು ಸಂತಸ ಪಟ್ಟಿದ್ದ ನೋಡುಗರು ಶಾಕ್ ಆಗಿದ್ದಾರೆ ಹಾಗೂ ಧಾರಾವಾಹಿ ಇನ್ನು ಕೆಲವು ವರ್ಷಗಳ ಕಾಲ ಮುಂದು ವರಿಯಲಿದೆ ಎಂಬ ಸುಳಿವು ನಿರಾಸೆಗೊಂಡಿದ್ದಾರೆ. ಒಟ್ಟಿನಲ್ಲಿ ಇನ್ನು ಅಗ್ನಿಸಾಕ್ಷಿ ಮುಗಿಯುವುದು ಯಾವಾಗ ಎಂದು ಯಾರಿಗೂ ತಿಳಿದಿಲ್ಲ.

Post Author: Ravi Yadav