ದೇಶಭಕ್ತ ಗಂಭೀರ್ ರವರಿಗೆ ಮತ್ತೊಂದು ಗೌರವ

  • 4.1K
    Shares

ಗೌತಮ್ ಗಂಭೀರ್ ಹೆಸರು ಕೇಳಿದ ತಕ್ಷಣ ಕೆಲವು ಜನರಿಗೆ ಗೌತಮ್ ಗಂಭೀರ್ ಒಬ್ಬರು ಅತ್ಯುತ್ತಮ ಕ್ರಿಕೆಟ್ ಆಟಗಾರ ಎಂಬ ನೆನಪಾಗುತ್ತದೆ. ಇನ್ನು ಕ್ರಿಕೆಟ್ ಪ್ರೇಮಿಗಳಿಗೆ ಗೌತಮ್ ಗಂಭೀರ್ ಅವರು ವಿಶ್ವ ಕಪ್ ಫೈನಲ್ ನಲ್ಲಿ ಆಡಿದ ಅತ್ಯುತ್ತಮ ಆಟ ನೆನಪಾಗುತ್ತದೆ. ಇನ್ನು ಕೆಲವು ದೇಶಭಕ್ತರಿಗೆ ಸದಾ ಸೈನಿಕರ ಪರವಾಗಿ ನಿಲ್ಲುವ ದೇಶಭಕ್ತ ಎಂದು ನೆನಪಿಗೆ ಬರುತ್ತದೆ.

ಆದರೆ ಹಲವಾರು ದೆಹಲಿಯ ಜನರಿಗೆ ಮಾತ್ರ ಗೌತಮ್ ಗಂಭೀರ್ ಒಬ್ಬರು ದೇವರಂತೆ ಕಾಣುತ್ತಾರೆ ಯಾಕೆಂದರೆ ಹಸಿದ ಹೊಟ್ಟೆಗಳಿಗೆ ಗೌತಮ್ ಗಂಭೀರ್ ಅವರು ತಮ್ಮ ಸ್ವಂತ ಹಣದಿಂದ ಹೊಟ್ಟೆ ತುಂಬಿಸುತ್ತಿದ್ದಾರೆ ಹಾಗೂ ಅದೆಷ್ಟೋ ಸೈನಿಕ ಕುಟುಂಬಗಳಿಗೆ ಗೌತಮ್ ಗಂಭೀರ್ ಅವರು ತಾವು ಆಡಿದ ಕ್ರಿಕೆಟ್ ಆಟದಿಂದ ಬಂದ ಹಣವನ್ನು ಕಾಣಿಕೆಯ ರೂಪದಲ್ಲಿ ದಾನ ಮಾಡಿದ್ದಾರೆ.

ಅದೆಷ್ಟು ಜನ ಗೌತಮ್ ಗಂಭೀರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ನಂತರ ಅವರನ್ನು ಮರೆತಿದ್ದರೂ ಆದರೆ ಯಾವೊಬ್ಬ ದೇಶ ಭಕ್ತರು ಸಹ ಇವರನ್ನು ಮರೆಯಲು ಸಾಧ್ಯವಿರಲಿಲ್ಲ.ಇದೇ ಗೌತಮ್ ಗಂಭೀರ್ ಅವರಿಗೆ ಕೇಂದ್ರ ಸರ್ಕಾರವು ಗೌರವ ಪ್ರಶಸ್ತಿಯನ್ನು ನೀಡಿದ್ದು ಕೇಂದ್ರ ಸರ್ಕಾರದ ಈ ನಡೆ ಭಾರಿ ಪ್ರಶಂಸೆಗೆ ಕಾರಣವಾಗಿದೆ.

ಹತ್ತು ಹಲವು ಬಾರಿ ಸೈನಿಕರ ಕುಟುಂಬಕ್ಕೆ ನೆರವಾಗಿದ್ದ ಈ ಗೌತಮ್ ಗಂಭೀರ್ ಅವರಿಗೆ ಕೇಂದ್ರ ಸರ್ಕಾರವು ಎಲ್ಲಾ ಸಾಧನೆಗಳನ್ನು ಗಣನೆಗೆ ತೆಗೆದುಕೊಂಡು ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಆದರೆ ಕ್ರೀಡೆಯಲ್ಲಿ ಅನನ್ಯ ಸೇವೆ ಸಲ್ಲಿಸಿದ ಕಾರಣ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದ್ದರು ಸಹ ಅವರಿಗೆ ಯಾವ ಪ್ರಶಸ್ತಿ ನೀಡಿದರು ಕಡಿಮೆ ಎಂದು ಹಲವಾರು ದೇಶಭಕ್ತರು ಅಭಿಪ್ರಾಯ ಹೊರಹಾಕಿದ್ದಾರೆ.

Facebook Comments

Post Author: Ravi Yadav