ಚಿದಂಬರಂಗೆ ಮತ್ತೊಂದು ಶಾಕ್ ನೀಡಿದ ಸಿಬಿಐ: ಮುಗಿಯಿತೇ ಚಿದಂಬರಂ ಕಥೆ??

ಕಾಂಗ್ರೆಸ್ ನ ಹಿರಿಯ ನಾಯಕರಾಗಿರುವ ಚಿದಂಬರಂ ರವರಿಗೆ ಒಂದಲ್ಲ ಒಂದು ಕಾರಣಗಳಿಂದ ತಲೆನೋವು ತಪ್ಪುತ್ತಿಲ್ಲ. ಈಗ ಮತ್ತೊಂದು ಹೊಸ ತಲೆ ನೋವು ಶುರುವಾಗಿದ್ದು ಚಿದಂಬರಂ ರವರ ರಾಜಕೀಯ ಭವಿಷ್ಯ ಮುಗಿದು ಹೋಗಲಿದೆಯೇ  ಎಂಬ ಪ್ರಶ್ನೆ ಕಾಡತೊಡಗಿದೆ, ಯಾಕೆಂದರೆ ಈ ಬಾರಿ  ಈ ಡಿ ಹಾಗೂ ಸಿಬಿಐ ಅಧಿಕಾರಿಗಳು ನೇರವಾಗಿ ಚಿದಂಬರಂ ರವರ ಕದ ತಟ್ಟಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಿದಂಬರಂ ರವರು ಹಣಕಾಸು ಸಚಿವರಾಗಿದ್ದ ವೇಳೆಯಲ್ಲಿ ಪೀಟರ್ ಮುಖರ್ಜಿ ಹಾಗೂ ಪತ್ನಿ ಇಂದ್ರಾಣಿ ಒಡೆತನದ ಐಎನ್ ಎಕ್ಸ್ ಮೀಡಿಯಾ ಕಂಪನಿಯಲ್ಲಿ 305 ಕೋಟಿ ವಿದೇಶಿ ಹೂಡಿಕೆಗೆ ಈ ಮೊದಲು ಕಾರ್ಯನಿರ್ವಹಿಸುತ್ತಿದ್ದ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯು ಅನುಮತಿಯನ್ನು ನೀಡಿತ್ತು ಆದರೆ ಅನುಮತಿ ನೀಡುವ ಸಂದರ್ಭದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಚಿದಂಬರಂ ರವರ ಮೇಲೆ ಆರೋಪ ಕೇಳಿಬಂದಿತ್ತು.

ಇದರ ವಿಚಾರವಾಗಿ ದೆಹಲಿ ಹೈಕೋರ್ಟ್ ಗೆ ಇಂದು ಸಿಬಿಐ ಹಾಗೂ ಅಧಿಕಾರಿಗಳು ನೇರವಾಗಿ ಚಿದಂಬರಂ ರವರ ಕದ ತಟ್ಟಿದ್ದು, ಕಾಂಗ್ರೆಸ್ನ ಚಿದಂಬರಂ ರವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ ಎಂಬುದನ್ನು ಹೈಕೋರ್ಟಿಗೆ ಮನದಟ್ಟು ಮಾಡಲು ಹೊರಟಿದ್ದಾರೆ.

ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಪಿ ಚಿದಂಬರಂ ಅವರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ನ ಮುಂದಿಟ್ಟಿದ್ದರು ಆದರೆ ಇದಕ್ಕೆ ನಿರಾಕರಿಸಿರುವ ಸಿಬಿಐ ಅಧಿಕಾರಿಗಳು ನ್ಯಾಯಾಲಯದ ಮುಂದೆ ತಮ್ಮ ಮನವಿಯನ್ನು ಸಲ್ಲಿಸಿ ಚಿದಂಬರಂ ರವರಿಗೆ ಹೊಸ ತಲೆನೋವು ತಂದಿದ್ದಾರೆ. ಒಂದು ವೇಳೆ ಹೈ ಕೋರ್ಟ್ ಅಸ್ತು ಎಂದಲ್ಲಿ ಚಿದಂಬರಂ ರವರ ರಾಜಕೀಯ ಭವಿಷ್ಯ ಮುಗಿಯುತ್ತದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.

Post Author: Ravi Yadav