Kannada News: ಕೇವಲ ಮೂರು ಸಾವಿರ ಖರ್ಚು ಮಾಡಿ 5 ಲಕ್ಷ ಗಳಿಸುತ್ತಿರುವ ರೈತ: ನೌಕರಿ ಬಿಟ್ಟು ಹೇಗೆ ಲಕ್ಷ ಲಕ್ಷ ದುಡಿಯುತ್ತಿದ್ದಾರೆ ಗೊತ್ತೇ??

Kannada News: ಕೇವಲ ಮೂರು ಸಾವಿರ ಖರ್ಚು ಮಾಡಿ 5 ಲಕ್ಷ ಗಳಿಸುತ್ತಿರುವ ರೈತ: ನೌಕರಿ ಬಿಟ್ಟು ಹೇಗೆ ಲಕ್ಷ ಲಕ್ಷ ದುಡಿಯುತ್ತಿದ್ದಾರೆ ಗೊತ್ತೇ??

Kannada News: ಈಗಿನ ಕಾಲದಲ್ಲಿ ಸಿಟಿಯವರು ಅಲ್ಲಿನ ಕೆಲಸಗಳನ್ನು ಮಾಡಲಾಗದೆ, ಅಥವಾ ಮಣ್ಣಿನ ಮೇಲಿನ ಪ್ರೀತಿಯಿಂದ ಹಲವು ಜನರು ತಮ್ಮ ಹುಟ್ಟೂರಿಗೆ ಬಂದು ಕೃಷಿ ಮಾಡುತ್ತಿರುವ ಅನೇಕ ಉದಾಹರಣೆಗಳನ್ನು ನೋಡುತ್ತೇವೆ. ಕೃಷಿಯಲ್ಲಿ ಯಶಸ್ಸು ಪಡೆದು, ಲಕ್ಷಗಟ್ಟಲೇ ಸಂಪಾದನೆ ಮಾಡುತ್ತಿರುವ ಅನೇಕ ಉದಾಹರಣೆಗಳು ಸಹ ಇದೆ. ಇಂತಹ ವ್ಯಕ್ತಿಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಈ ವ್ಯಕ್ತಿಯ ಹೆಸರು ಅಜಯ್ ರತ್ನ, ಇವರು ಮೂಲತಃ ಹಿಮಾಚಲ ಪ್ರದೇಶದವರು. ಅಜಯ್ ಅವರು ಸಿಟಿ ಕೆಲಸವನ್ನು ಬಿಟ್ಟು ಹಳ್ಳಿಯಲ್ಲಿ ವ್ಯವಸಾಯ ಮಾಡಬೇಕು ಎಂದುಕೊಂಡರು.

ಹಳ್ಳಿಗೆ ಬಂದು ನೋಡಿದಾಗ, ಇಲ್ಲಿ ಕೃಷಿಗೆ ಹೆಚ್ಚು ಹಣ ಖರ್ಚಾಗುತ್ತಿದೆ ಎಂದು ಅರಿವಾಗಿ, ತಾವು ಬೇರೆ ರೀತಿಯಲ್ಲಿ ಕೃಷಿ ಮಾಡುವುದನ್ನು ಶುರು ಮಾಡಿದರು, ಇವರು ಅನುಸರಿಸಿದ್ದು ನೈಸರ್ಗಿಕ ಕೃಷಿ, ಇದಕ್ಕೆ ಕೆಲವು ತಂತ್ರಗಳನ್ನು ಅಳವಡಿಸಿ ಕೃಷಿ ಮಾಡಲು ಶುರು ಮಾಡಿದರು. ಇದಕ್ಕೆ ಹಣ ಖರ್ಚಾಗುತ್ತಿದ್ದದ್ದು ಕಡಿಮೆ, ಆದರೆ ಅದರಿಂದ ಒಳ್ಳೆಯ ಬೆಳೆ ಬರಲು ಶುರುವಾಯಿಯು. ಅವರ ಊರಿನಲ್ಲಿ ಈ ಕೃಷಿ ಕ್ರಾಂತಿ ಶುರು ಮಾಡಿ, 25 ಬಿಘಾದಲ್ಲಿ ಇವರು ಈಗ ಕೃಷಿ ಮಾಡುತ್ತಿದ್ದಾರೆ. ತಾವು ಅನುಸರಿಸಿದ ನೈಸರ್ಗಿಕ ಕೃಷಿಯ ತಂತ್ರಗಳನ್ನು ಅನೇಕ ಜನರಿಗೆ ಹೇಳಿಕೊಟ್ಟರು. ಇದಕ್ಕಾಗಿ ಅಜಯ್ ರತ್ನ ಅವರಿಗೆ ಕೃಷಿ ಅನನ್ಯ ಪ್ರಶಸ್ತಿಯನ್ನು 2019ರಲ್ಲಿ ನೀಡಲಾಯಿತು. ಇದನ್ನು ಓದಿ..Railway Jobs 2023: ನಿರುದ್ಯೋಗಿಗಳಿಗೆ ಸಿಹಿ ಸುದ್ದಿ; ಬಾರಿ ಹುದ್ದೆಗಳನ್ನು ಭಾರ್ತಿ ಮಾಡಲು ಮುಂದಾದ ರೈಲ್ವೆ; ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ??

ನೈಸರ್ಗಿಕ ಕೃಷಿಯಲ್ಲಿ ಯಶಸ್ಸು ಪಡೆದ ಕಾರಣ ಈ ಪ್ರಶಸ್ತಿ ನೀಡಲಾಗಿದೆ..ಅಜಯ್ ಅವರು ಈ ಕೃಷಿಯಿಂದ 5 ಲಕ್ಷ ರೂಪಾಯಿವರೆಗು ಹಣ ಗಳಿಸುತ್ತಿದ್ದಾರೆ. ಇದಕ್ಕಾಗಿ ಅಜಯ್ ಅವರು ಹೂಡಿಕೆ ಮಾಡಿರುವುದು ಕೇವಲ 3 ಸಾವಿರ ರೂಪಾಯಿ. ಹಿಮಾಚಲ ಪ್ರದೇಶದಲ್ಲಿ ಇರುವ ಕೃಷಿ ಇಲಾಖೆಯ ಪ್ರಕಾರ ನೈಸರ್ಗಿಕ ಕೃಷಿ ಮಾಡುವವರು ಮಾರುಕಟ್ಟೆಯಿಂದ ಯಾವ ವಸ್ತುವನ್ನು ಖರೀದಿ ಮಾಡುವ ಹಾಗಿಲ್ಲ. ನೈಸರ್ಗಿಕ ಕೃಷಿ ಮನುಷ್ಯರ ಆರೋಗ್ಯಕ್ಕೆ ಒಳ್ಳೆಯ ಪ್ರಯೋಜನ ನೀಡುತ್ತದೆ ಎಂದು ಹೇಳುತ್ತಾರೆ. ಕಬ್ಬು, ಗೋಧಿ, ಜೋಳ, ಸೋಯಾಬೀನ್, ಮಾವಿನ ಹಣ್ಣು, ಟೊಮ್ಯಾಟೋ, ಕ್ಯಾಪ್ಸಿಕಂ ಇನ್ನಿತರ ಬೆಳೆಗಳನ್ನು ಬೆಳೆಯುತ್ತಾರೆ. ರಾಸಾಯನಿಕ ಕೃಷಿಯಲ್ಲಿ ಇದಕ್ಕೆ ವಿರುದ್ಧ, ಖರ್ಚು ಹೆಚ್ಚಾಗಿ ಲಾಭ ಕಡಿಮೆ, ಹಾಗಾಗಿ ನೈಸರ್ಗಿಕ ಕೃಷಿ ಮಾಡುವುದು ಒಳ್ಳೆಯದು ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ತನ್ನ ಮೂರನೇ ಪತ್ನಿಗೆ ಡೈವೋರ್ಸ್ ಕೊಡಲು ಮುಂದಾದರೆ ಪವನ್ ಕಲ್ಯಾಣ್: ಕಾರಣ ಅದೇನಾ?? ತೆಲುಗಿನಲ್ಲಿ ಮತ್ತೊಂದು ಕರ್ಮಕಾಂಡ??