Cricket News: ತಾನು ವಿಶ್ವದ ನಂಬರ್ ಆಗಲು ಹಿಂದೆ ನಿಂತದ್ದು ಯಾರು ಎಂದು ತಿಳಿಸಿದ ಸಿರಾಜ್: ಸಂಪೂರ್ಣ ಶ್ರೇಯ ಕೊಟ್ಟಿದ್ದು ಯಾರಿಗೆ ಗೊತ್ತೆ??
Cricket News: ತಾನು ವಿಶ್ವದ ನಂಬರ್ ಆಗಲು ಹಿಂದೆ ನಿಂತದ್ದು ಯಾರು ಎಂದು ತಿಳಿಸಿದ ಸಿರಾಜ್: ಸಂಪೂರ್ಣ ಶ್ರೇಯ ಕೊಟ್ಟಿದ್ದು ಯಾರಿಗೆ ಗೊತ್ತೆ??
Cricket News: ಮೊಹಮ್ಮದ್ ಸಿರಾಜ್ (Mohammad Siraj) ಅವರು ಕಳೆದ ವರ್ಷದಿಂದ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನ ನೀಡುತ್ತಾ, ಹೆಚ್ಚು ವಿಕೆಟ್ಸ್ ಪಡೆದುಕೊಂಡು ಸಾಧನೆ ಮಾಡುತ್ತಿದ್ದಾರೆ. ಈಗಷ್ಟೇ ನಡೆದ ಇಂಡಿಯಾ ವರ್ಸಸ್ ಶ್ರೀಲಂಕಾ (India vs Srilanka) ನಡುವಿನ ಸರಣಿಯ 3 ಪಂದ್ಯಗಳಲ್ಲಿ 9 ವಿಕೆಟ್ಸ್ ಪಡೆದು, ಇಂಡಿಯಾ ವರ್ಸಸ್ ನ್ಯೂಜಿಲೆಂಡ್ (India vs New Zealand) ನಡುವಿನ 2 ಪಂದ್ಯಗಳಲ್ಲಿ 5 ವಿಕೆಟ್ಸ್ ಪಡೆದಿದ್ದಾರೆ. ಸಿರಾಜ್ ಅವರು ಕಳೆದ ವರ್ಷ ಏಕದಿನ ಪಂದ್ಯಗಳಲ್ಲಿ ಅತಿಹೆಚ್ಚು ವಿಕೆಟ್ಸ್ ಪಡೆದವರ ಪೈಕಿ ಮೊದಲ ಸ್ಥಾನದಲ್ಲಿದ್ದರು, ಈ ವರ್ಷ ಆರಂಭದಲ್ಲಿಯೇ ಉತ್ತಮ ಪ್ರದರ್ಶನ ನೀಡಿ 14 ವಿಕೆಟ್ಸ್ ಪಡೆದುಕೊಂಡಿದ್ದಾರೆ.
ಸಿರಾಜ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು 2019ರ ಜನವರಿ 15ರಂದು ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಪಂದ್ಯದ ಮೂಲಕ. ಸಿರಾಜ್ ಅವರು ಇದುವರೆಗೂ 21 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಇಷ್ಟು ಕಡಿಮೆ ಸಮಯದಲ್ಲಿ ಅಗ್ರಸ್ಥಾನಕ್ಕೆ ಏರಿರುವ ಸಿರಾಜ್ ಅವರು ಕಪಿಲ್ ದೇವ್ (Kapil Dev) ಮತ್ತು ಜಸ್ಪ್ರೀತ್ ಬುಮ್ರ (Jasprit Bumrah) ಅವರ ಬಳಿಕ ಈ ಸ್ಥಾನಕ್ಕೆ ಏರಿರುವ 3ನೇ ಆಟಗಾರ ಆಗಿದ್ದಾರೆ. ಸಿರಾಜ್ ಅವರು ಮೊದಲ ಸ್ಥಾನಕ್ಕೆ ಬಂದ ನಂತರ ಅವರು ಮಾತನಾಡಿರುವ ಹಳೆಯ ವಿಡಿಯೋ ಈಗ ವೈರಲ್ ಆಗಿದೆ, ಅದರಲ್ಲಿ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli) ಅವರನ್ನು ಹಾಡಿ ಹೊಗಳಿದ್ದಾರೆ ಸಿರಾಜ್. ಇದನ್ನು ಓದಿ..Cricket News: ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಆಯ್ಕೆ ಮಾಡಿದ ಮೈಕಲ್ ವಾನ್. ಯಾವ ತಂಡ ಗೆಲ್ಲಲಿದೆ ಅಂತೇ ಗೊತ್ತೇ??
ಆರ್ಸಿಬಿ (RCB) ಪರವಾಗಿ ಮತ್ತು ಟೀಮ್ ಇಂಡಿಯಾ (Team India) ಪರವಾಗಿ ಆಡುವಾಗ, ವಿರಾಟ್ ಅವರು ನೀಡಿದ ಸಪೋರ್ಟ್, ಮಾಡಿದ ಸಹಾಯವನ್ನು ನೆನೆದಿದ್ದಾರೆ. ಆ ವಿಡಿಯೋದಲ್ಲಿ ಸಿರಾಜ್ ಅವರು ಹೇಳಿರುವುದು ಹೀಗೆ.. “ಆರ್ಸಿಬಿ ತಂಡದಲ್ಲಿ ಆಡುವಾಗ ನಾನು ಬಹಳ ಕಳಪೆ ಮಟ್ಟದ ಕೆಟ್ಟ ಪ್ರದರ್ಶನ ನೀಡಿದ್ದೆ. ಆಗ ವಿರಾಟ್ ಭಾಯ್ ಮತ್ತು ಆರ್ಸಿಬಿ ಮ್ಯಾನೇಜ್ಮೆಂಟ್ ನನಗೆ ಸಪೋರ್ಟ್ ಮಾಡಿ, ನನ್ನ ಮೇಲೆ ನಂಬಿಕೆ ಇಟ್ಟು ತಂಡದಲ್ಲಿ ನನ್ನನ್ನು ಉಳಿಸಿಕೊಂಡಿತ್ತು. ನನಗೆ ಪ್ರೋತ್ಸಾಹ ನೀಡಿದ್ದರು… ನನ್ನ ಈ ಯಶಸ್ಸಿನ ಶ್ರೇಯಾಂಕ ವಿರಾಟ್ ಕೊಹ್ಲಿ ಅವರಿಗೆ ಸೇರಬೇಕು..” ಎಂದು ಮೊಹಮ್ಮದ್ ಸಿರಾಜ್ ಅವರು ಹೇಳಿದ್ದರು. ಈ ವಿಡಿಯೋ ಈಗ ವೈರಲ್ ಆಗಿದೆ. ಇದನ್ನು ಓದಿ.. Cricket News: ಸಚಿನ್ vs ವಿರಾಟ್ ಕೊಹ್ಲಿ ರವರಲ್ಲಿ ಬೆಸ್ಟ್ ಯಾರು ಎಂದಿದ್ದಕ್ಕೆ ಪ್ಯಾಟ್ ಕಮ್ಮಿನ್ಸ್ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?? ಇವರಿಬ್ಬರಲ್ಲಿ ನಿಜಕ್ಕೂ ಬೆಸ್ಟ್ ಯಾರು ಅಂತೇ ಗೊತ್ತೆ?