ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kantara: ಸಿನಿಮಾ ಬಿಡುಗಡೆಯಾಗಿ ಇಷ್ಟು ದಿನಗಳು ಆದಮೇಲೆ ಕ್ಲೈಮಾಕ್ಸ್ ಬಗ್ಗೆ ಅಸಲಿ ಸತ್ಯ ತಿಳಿಸಿದ ರಿಷಬ್. ಹೇಳಿದ್ದೇನು ಗೊತ್ತೇ??

39

Kantara: ಕಾಂತಾರ (Kantara) ಸಿನಿಮಾ ಇಡೀ ದೇಶವೇ ಕರ್ನಾಟಕದ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿದ ಸಿನಿಮಾ. 15 ಕೋಟಿ ವೆಚ್ಚದಲ್ಲಿ ತಯಾರಾದ ಕಾಂತಾರ ಸಿನಿಮಾ ಇಂದು 400 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿ, ಬಾಕ್ಸ್ ಆಫೀಸ್ ಧೂಳೆಬ್ಬಿಸಿದೆ. ಎಲ್ಲಾ ರೆಕಾರ್ಡ್ ಗಳನ್ನು ಬೀಟ್ ಮಾಡಿದೆ. ಕಾಂತಾರ ಸಿನಿಮಾ ನೋಡಲು ಸಿನಿಪ್ರಿಯರು ಮುಗಿಬಿದ್ದು ಥಿಯೇಟರ್ ಗೆ ಬರುತ್ತಿದ್ದರು. ಭಾಷೆಯ ಹಂಗಿಲ್ಲದೆ ಜನರು ಈ ಸಿನಿಮಾ ಗೆಲ್ಲಿಸಿದ್ದರು, ಬಳಿಕ ಎಲ್ಲಾ ಭಾಷೆಗಳಿಗೂ ಡಬ್ ಆಗಿ ಬಿಡುಗಡೆ ಆಯಿತು ಕಾಂತಾರ. ಪ್ರಸ್ತುತ ಕಾಂತಾರ ಸಿನಿಮಾ ಓಟಿಟಿಯಲ್ಲಿ ಭಾರಿ ಸದ್ದು ಮಾಡುತ್ತಿದೆ..

ಕಾಂತಾರ ಸಿನಿಮಾವನ್ನು ಜನರು ಮಾತ್ರವಲ್ಲ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ಮೆಚ್ಚಿ ಕೊಂಡಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು, ಕಮಲ್ ಹಾಸನ್ ಅವರು, ನಟ ಸೂರ್ಯ, ಕಾರ್ತಿಕ್, ಪ್ರಭಾಸ್, ಶಿಲ್ಪಾ ಶೆಟ್ಟಿ ಈಗಿನ ಕಂಗನಾ ರನಾವತ್, ಪೂಜಾ ಹೆಗ್ಡೆ, ವಿವೇಕ್ ಅಗ್ನಿಹೋತ್ರಿ ಎಲ್ಲರೂ ಕಾಂತಾರ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ವಿಶೇಷವಾಗಿ ಎಲ್ಲರಿಗೂ ಇಷ್ಟ ಆಗಿರುವುದು ಕೊನೆಯ 20 ನಿಮಿಷ, ಆ ಕ್ಲೈಮ್ಯಾಕ್ಸ್ ಇಂದ ಹೊರಬರಲು ತುಂಬಾ ಸಮಯ ತೆಗೆದುಕೊಂಡಿತು ಎಂದೇ ಎಲ್ಲರೂ ಹೇಳುತ್ತಿದ್ದಾರೆ. ಅಷ್ಟಕ್ಕೂ ಈ ಕ್ಲೈಮ್ಯಾಕ್ಸ್ ಚಿತ್ರೀಕರಣದ ತೆರೆಯ ಹಿಂದಿನ ಕಹಾನಿಯನ್ನು ರಿಷಬ್ ಶೆಟ್ಟಿ (Rishab Shetty) ಅವರು ಶೇರ್ ಮಾಡಿದ್ದಾರೆ. ಇದನ್ನು ಓದಿ..Business Plans: ಬಿಸಿನೆಸ್ ಮಾಡಬೇಕು ಆದರೆ ದುಡ್ಡಿಲ್ಲವೇ? ಈ ಬಿಸಿನೆಸ್ ಮಾಡಲು ದುಡ್ಡು ಬೇಡವೇ ಬೇಡ, ಸುಲಭವಾಗಲಿ ಲಕ್ಷ ಲಕ್ಷ ಗಳುಸುವುದು ಹೇಗೆ ಗೊತ್ತೇ?

ಇತ್ತೀಚೆಗೆ ನೆಟ್ ಫ್ಲಿಕ್ಸ್ (Netflix) ಗೆ ನೀಡಿದ ಸಂದರ್ಶನ ಕ್ಲೈಮ್ಯಾಕ್ಸ್ ಚಿತ್ರೀಕರಣ ಎಷ್ಟು ಕಷ್ಟವಾಗಿತ್ತು ಎಂದು ರಿವೀಲ್ ಮಾಡಿದ್ದಾರೆ ರಿಷಬ್ ಶೆಟ್ಟಿ. ಕ್ಲೈಮ್ಯಾಕ್ಸ್ ನಲ್ಲಿ ಬೆಂಕಿ ದೊಣ್ಣೆಗಳಿಂದ ನಿಜವಾಗಲು ಪೆಟ್ಟು ತಿಂದಿದ್ದಾರೆ ರಿಷಬ್ ಶೆಟ್ಟಿ, ವಿಲ್ಲನ್ ಗಳು ಹೊಡೆದಾಗ ಅವರ ಬೆನ್ನಿಗೆ ಹೊಡೆದು ಬೆನ್ನಲ್ಲಿ ಬೊಬ್ಬೆ ಬರುತ್ತಿತ್ತಂತೆ, ಆ ನೋವಿನಲ್ಲಿ ಎದುರುಗಡೆ ಬರುವವರನ್ನು ಸಾಯಿಸಿ ಬಿಡಬೇಕು ಎನ್ನುವಷ್ಟು ಕೋಪ ಕೂಡ ಬರುತ್ತಿತ್ತಂತೆ. ಗುಳಿಗ ದೈವದ ದೃಶ್ಯದಲ್ಲಿ ಈ ರೀತಿ ನಡೆದಿದೆ, ರಿಷಬ್ ಅವರು ವಿ.ಎಫ್.ಎಕ್ಸ್ ಬಳಸಿ ಈ ದೃಶ್ಯಗಳನ್ನು ಚಿತ್ರೀಕರಣ ಮಾಡಬಹುದಿತ್ತು, ಆದರೆ ನೈಜವಾಗಿ ಇರಲಿ ಎಂದು ಬಹಳ ಕಷ್ಟಪಟ್ಟು ಈ ದೃಶ್ಯಗಳು ಚಿತ್ರೀಕರಣ ಮಾಡಿದ್ದಾರೆ. ಇದನ್ನು ಓದಿ.. ಕೆಲಸಕ್ಕೆ ಹೋದ ಹೆಂಡತಿ ಅಲ್ಲಿ ಮಾಡಿದ್ದು ಮಾಡಬಾರದ ಕೆಲಸ. ಅಸಲಿ ಕಥೆ ತಿಳಿದ ಆಕೆಯ ತಮ್ಮ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾನೆ ಗೊತ್ತೇ??