Cricket News: ಕೊನೆಗೂ ಸಿಕ್ತು ವಿಡಿಯೋ: ಧೋನಿಯನ್ನು ಮೀರಿಸುವಂತಹ ಕ್ಯಾಚ್ ಹಿಡಿದ ಇಶಾನ್ ಕಿಶನ್, ಈತನೇ ಮುಂದಿನ ಧೋನಿ ಅಂತೇ. ವಿಡಿಯೋ ನೋಡಿ.
Cricket News: ಕೊನೆಗೂ ಸಿಕ್ತು ವಿಡಿಯೋ: ಧೋನಿಯನ್ನು ಮೀರಿಸುವಂತಹ ಕ್ಯಾಚ್ ಹಿಡಿದ ಇಶಾನ್ ಕಿಶನ್, ಈತನೇ ಮುಂದಿನ ಧೋನಿ ಅಂತೇ. ವಿಡಿಯೋ ನೋಡಿ.
Cricket News:2023ರ ಹೊಸ ವರ್ಷ ಟೀಮ್ ಇಂಡಿಯಾ ಕ್ರಿಕೆಟ್ ತಂಡಕ್ಕೂ ಒಳ್ಳೆಯ ಆರಂಭ ನೀಡಿದೆ. ಇಂಡಿಯಾ ವರ್ಸಸ್ ಶ್ರೀಲಂಕಾ (India vs Srilanka) ಟಿ20 ಪಂದ್ಯದಲ್ಲಿ ಭಾರತ ತಂಡ ಎರಡು ರನ್ ಗಳ ಅಂತರದಿಂದ ಮ್ಯಾಚ್ ಗೆದ್ದಿದೆ.. ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿತು, ದೀಪಕ್ ಹೂಡಾ (Deepak Hooda) ಮತ್ತು ಅಕ್ಷರ್ ಪಟೇಲ್ (Axar Patel) ಇಬ್ಬರು ಉತ್ತಮ ಪ್ರದರ್ಶನ ನೀಡಿದರು. ಆದರೆ ಬೇರೆ ಬ್ಯಾಟ್ಸ್ಮನ್ ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ಬೌಲರ್ ಗಳು ಅದ್ಭುತ ಪ್ರದರ್ಶನವನ್ನೇ ನೀಡಿದರು, ಆಗಾಗ ವಿಕೆಟ್ಸ್ ಪಡೆಯುತ್ತಲೇ ಇದ್ದ ಕಾರಣ, ಟೀಮ್ ಇಂಡಿಯಾ (Team India) ಗೆಲ್ಲಲು ಸಾಧ್ಯವಾಯಿತು. 162 ರನ್ ಗಳ ಗುರಿ ನೀಡಿದ ಟೀಮ್ ಇಂಡಿಯಾ, ಶ್ರೀಲಂಕಾ ತಂಡವನ್ನು 160 ರನ್ ಗಳಿಗೆ ಆಲ್ ಔಟ್ ಮಾಡಿತು. ತಂಡದ ಬೌಲಿಂಗ್ ಮತ್ತು ಫೀಲ್ಡಿಂಗ್ ಎರಡು ಕೂಡ ಮೊದಲ ಪಂದ್ಯದಲ್ಲಿ ಚೆನ್ನಾಗಿ ನಡೆದಿದೆ..
ಕೊನೆಯ ಓವರ್ ನಲ್ಲಿ ಶ್ರೀಲಂಕಾ ತಂಡ ಗೆಲ್ಲಲು 13 ರನ್ ಗಳ ಅವಶ್ಯಕತೆ ಇತ್ತು, ಆಗ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ (Hardik Pandya) ಅವರು ಬೌಲಿಂಗ್ ಮಾಡಲು ಅಕ್ಷರ್ ಪಟೇಲ್ (Axar Patel) ಅವರನ್ನು ಕಳಿಸಿದರು. ಈ ಓವರ್ ನಲ್ಲಿ ಅವರು 10 ರನ್ಸ್ ನೀಡಿ, ಎರಡು ರನ್ ಔಟ್ ಮಾಡಿಫ ಕಾರಣ, ಭಾರತ ತಂಡವು ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿತು. ಈ ಗೆಲುವಿನ ಜೊತೆಗೆ ಭಾರತ ತಂಡವು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಎಲ್ಲಕ್ಕಿಂತ ಹೆಚ್ಚು ಹೈಲೈಟ್ ಆಗಿದ್ದು, ಇಶಾನ್ ಕಿಶನ್ (Ishan Kishan) ಅವರು ಹಿಡಿದ ಆ ಕ್ಯಾಚ್ ಎಂದು ಹೇಳಬಹುದು. ಥೇಟ್ ಚಿರತೆಯ ಹಾಗೆಯೇ ಇತ್ತು ಇಶಾನ್ ಅವರ ಶೈಲಿ. ಇದನ್ನು ಓದಿ..Cricket News: ಅಶ್ವಿನ್ ಗಿಂತ ಚಾಹಲ್ ವಿಶ್ವಕಪ್ ಆಡಿದ್ದರೇ ಚೆನ್ನಾಗಿರುತ್ತದೆ ಎಂದ ದಿನೇಶ್ ಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು, DK ಗೆ ತಿರುಗು ಬಾಣ.
ಅದೇ ಕ್ಯಾಚ್ ಹಿಡಿಯಲು ಹರ್ಷಲ್ ಪಟೇಲ್ (Harshal Patel) ಅವರು ಕೂಡ ಓಡಿ ಬಂದರು, ಆದರೆ ಅಷ್ಟರಲ್ಲಾಗಲೇ ಇಶಾನ್ ಕಿಶನ್ ಅವರು ಚಿರತೆಯ ಹಾಗೆ ಆಈ ಬಂದು, ಹರ್ಷಲ್ ಪಟೇಲ್ ಅವರಿಗೆ ನಿಲ್ಲುವುದಕ್ಕೆ ಹೇಳಿ, ಗಾಳಿಯಲ್ಲಿ ಅದ್ಭುತವಾಗಿ ಡೈವ್ ಮಾಡಿ, ಕ್ಯಾಚ್ ಹಿಡಿದು, ಶ್ರೀಲಂಕಾ ತಂಡದ ಒಂದು ವಿಕೆಟ್ ಉರುಳಿಸಿದರು. ಇಶಾನ್ ಕಿಶನ್ ಅವರು ಈ ಕ್ಯಾಚ್ ಅನ್ನು ಚಿರತೆಯ ಹಾಗೆ ಹಿಡಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇಶಾನ್ ಕಿಶನ್ ಅವರು ಈ ರೀತಿ ಕ್ಯಾಚ್ ಹಿಡಿದದ್ದು ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರಿಗಾಗಲಿ, ಇನ್ನುಳಿದ ಆಟಗಾರರಿಗಾಗಲಿ ನಂಬಲು ಸಾಧ್ಯವಾಗಲಿಲ್ಲ. ಇತ್ತೀಚಿನ ದಿನಗಳಲ್ಲಿ ಒಬ್ಬ ವಿಕೆಟ್ ಕೀಪರ್ ಹಿಡಿದ ಅದ್ಭುತ ಕ್ಯಾಚ್ ಗಳಲ್ಲಿ ಇದು ಕೂಡ ಒಂದು ಕ್ಯಾಚ್ ಆಗಿದೆ. ಒಟ್ಟಿನಲ್ಲಿ ಇಶಾನ್ ಕಿಶನ್ ಅವರಿಗೆ ಭಾರಿ ಮೆಚ್ಚುಗೆ ಬರುತ್ತಿದೆ. ಇದನ್ನು ಓದಿ.. Cricket News: ಅಂದು ಕೊಹ್ಲಿ ಹೇಳಿದ ಮಾತನ್ನು ಧಿಕ್ಕರಿಸಿದ್ದ ಬಿಸಿಸಿಐ: ಇಂದು ಕೊಹ್ಲಿ ಬಳಿಯೇ ತಂತ್ರ ರೂಪಿಸಲು ಮೊರೆ. ವಿಶ್ವಕಪ್ ಗೆಲ್ಲಲು ಏನು ಪ್ಲಾನ್ ಗೊತ್ತೇ??
What a cath #ishankishan ❤️#INDvsSL pic.twitter.com/aX80FBxU43
— Rahul Sisodia (@Sisodia19Rahul) January 3, 2023