IPL 2023: ಎಲ್ಲಾ ತಂಡಗಳಿಗೂ ಈ ವಿದೇಶಿಗರೇ ಬೇಕು, ಐವರ ಮೇಲೆ ಎಲ್ಲಾ ತಂಡಗಳ ಕಣ್ಣು. ಆರ್ಸಿಬಿ ಯಾರನ್ನು ಖರೀದಿ ಮಾಡಬೇಕು??
IPL 2023: Cricket News: ಎಲ್ಲಾ ತಂಡಗಳಿಗೂ ಈ ವಿದೇಶಿಗರೇ ಬೇಕು, ಐವರ ಮೇಲೆ ಎಲ್ಲಾ ತಂಡಗಳ ಕಣ್ಣು. ಆರ್ಸಿಬಿ ಯಾರನ್ನು ಖರೀದಿ ಮಾಡಬೇಕು??
IPL 2023: ಐಪಿಎಲ್ 16 (IPL 16) ನೇ ಆವೃತ್ತಿಯ ಆಕ್ಷನ್ ಗೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ಹರಾಜಿಗೆ ಆಯ್ಕೆ ಆಗಿರುವುದು 273 ಆಟಗಾರರು, ಇದರಲ್ಲಿ 132 ವಿದೇಶಿ ಆಟಗಾರರಿದ್ದಾರೆ. ಈಗಾಗಲೇ ಐಪಿಎಲ್ ನ 10 ಫ್ರಾಂಚೈಸಿಗಳು ತಮ್ಮ ತಂಡಗಳಲ್ಲಿ ಬೇಡದ ಆಟಗಾರರನ್ನು ರಿಲೀಸ್ ಮಾಡಿದ್ದು, ಆ ಸ್ಥಾನ ತುಂಬಲು ಆಕ್ಷನ್ (IPL Suction) ಗೆ ಬರಲಿದ್ದಾರೆ. ಎಲ್ಲರ ಕಣ್ಣು ಈಗ ವಿದೇಶಿ ಆಟಗಾರರ ಮೇಲಿದೆ, ಕೆಲವು ವಿದೇಶಿ ಸ್ಟಾರ್ ಆಟಗಾರರನ್ನು ಖರೀದಿ ಮಾಡಲು ಎಲ್ಲಾ ತಂಡಗಳು ಕಾದು ಕುಳಿತಿದೆ. ನಮ್ಮ ಆರ್ಸಿಬಿ (RCB) ತಂಡ ಕೂಡ ಕೆಲವು ಆಟಗಾರರನ್ನು ಖರೀದಿ ಮಾಡಲು ಪ್ಲಾನ್ ಹಾಕಿದ್ದು, ಆರ್ಸಿಬಿ ಯಾರನ್ನು ಖರೀದಿ ಮಾಡಿದರೆ ಎಂದು ತಿಳಿಸುತ್ತೇವೆ ನೋಡಿ..
ಸ್ಯಾಮ್ ಕರನ್ (Sam Curran) :- ಟಿ20 ವಿಶ್ವಕಪ್ ವಿನ್ನರ್ ತಂಡ ಇಂಗ್ಲೆಂಡ್ ನ ಆಲ್ ರೌಂಡರ್ ಆಗಿರುವ ಇವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಇಂಗ್ಲೆಂಡ್ ತಂಡ ಗೆಲ್ಲುವಲ್ಲಿ ಇವರ ಪಾತ್ರ ಪ್ರಮುಖವಾದದ್ದು ಎಂದು ಹೇಳಬಹುದು. ಇವರನ್ನು ಖರೀದಿ ಮಾಡಿ, ತಮ್ಮ ತಂಡವನ್ನು ಇನ್ನಷ್ಟು ಬಲಶಾಲಿ ಆಗುವ ಹಾಗೆ ಮಾಡಲು ಎಲ್ಲಾ ತಂಡಗಳು ಕಾಯುತ್ತಿವೆ. ಐಪುಎಲ್ ಆಕ್ಷನ್ ನಲ್ಲಿ ಇವರ ಬೇಸ್ ಪ್ರೈಸ್ 2ಕೋಟಿ ರೂಪಾಯಿ ಆಗಿದೆ. ಇದನ್ನು ಓದಿ.. Sports News: ಮೆಸ್ಸಿ ಅಥವಾ ರೊನಾಲ್ಡೊ ಎಂದಾಗ ಇವರಿಬ್ಬರಲ್ಲಿ ತನಗೆ ಇಷ್ಟವಾದ ಆಟಗಾರನನ್ನು ಆಯ್ಕೆ ಮಾಡಿ ಸುನಿಲ್. ಯಾರು ಅಂತೇ ಗೊತ್ತೆ?
ಬೆನ್ ಸ್ಟೋಕ್ಸ್ (Ben Stokes) :- ಇವರು ಕೂಡ ಟಿ20 ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ ಆಗಿದ್ದು, ಆಲ್ ರೌಂಡರ್ ಆಗಿ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಕೂಡ ಗಮನೀಯ ಪ್ರದರ್ಶನ ನೀಡುತ್ತಾರೆ. ಇವರನ್ನು ಖರೀದಿ ಮಾಡಲು, ರಾಜಸ್ತಾನ್ ರಾಯಲ್ಸ್ ಸೇರಿದಂತೆ, ಇನ್ನು ಕೆಲವು ತಂಡಗಳು ಪ್ಲಾನ್ ಹಾಕಿವೆ.
ಸಿಕಂದರ್ ರಾಜ (Sikandar Raza) :- ಇವರು ಜಿಂಬಾಬ್ವೆ ತಂಡದ ಆಟಗಾರ, ಇವರು ಕೂಡ ಟಿ20 ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಹಾಗಾಗಿ ಇವರನ್ನು ಖರೀದಿ ಮಾಡಲು ಈಗ ಐಪಿಎಲ್ ನಲ್ಲಿ ಫ್ರಾಂಚೈಸಿಗಳು ಕಾದು ನಿಂತಿದೆ. ಐಪಿಎಲ್ ಮಿನಿ ಹರಾಜಿನಲ್ಲಿ ಇವರ ಬೇಸ್ ಪ್ರೈಸ್, 50 ಲಕ್ಷ ರೂಪಾಯಿ ಆಗಿದೆ. ಇದನ್ನು ಓದಿ..Cricket News: ವಿರಾಟ್ ನಂತರ ಈತನೇ ಮುಂದಿನ ದೊಡ್ಡ ಬ್ಯಾಟ್ಸಮನ್ ಎಂದು ಮತ್ತೊಬ್ಬ ಆಟಗಾರರನ್ನು ಆಯ್ಕೆ ಮಾಡಿದ ಜಾಫರ್. ಮತ್ತೊಬ್ಬ ಕೊಹ್ಲಿ ಸಿಕ್ಕಿ ಬಿಟ್ಟನೇ??
ಶಕೀಬ್ ಅಲ್ ಹಸನ್ (Shakib al Hasan) :- ಬಾಂಗ್ಲಾದೇಶ್ ಗಂಡದ ಈ ಆಲ್ ರೌಂಡರ್ ಆಟಗಾರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ಮಿನಿ ಹರಾಜಿನಲ್ಲಿ ಇವರ ಬೇಸ್ ಪ್ರೈಸ್ 1.5ಕೋಟಿ ರೂಪಾಯಿ ಆಗಿದೆ. ಇವರನ್ನು ಖರೀದಿ ಮಾಡಲು, ತಂಡಗಳು ಕಾದಿದೆ..
ಕ್ಯಾಮರಾನ್ ಗ್ರೀನ್ (Cameron Green) :- ಟೀಮ್ ಇಂಡಿಯಾ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಇವರು ಎರಡು ಸಾರಿ ಅರ್ಧಶತಕ ಗಳಿಸಿದ್ದಾರೆ. ಈ ಮೂಲಕ ಐಪಿಎಲ್ ಫ್ರಾಂಚೈಸಿಗಳ ಗಮನವನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಐಪಿಎಲ್ ಮಿನಿ ಹರಾಜಿನಲ್ಲಿ ಇವರ ಬೇಸ್ ಪ್ರೈಸ್ 2 ಕೋಟಿ ರೂಪಾಯಿ ಆಗಿದೆ. ಇದನ್ನು ಓದಿ.. IPL 2023: ಬಿಗ್ ನ್ಯೂಸ್: ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡ ಕಟ್ಟಿರುವ ಟಾಪ್ ಮೂವರು ಆಟಗಾರರು ಯಾರ್ಯಾರು ಗೊತ್ತೇ? ಇದಪ್ಪ ಗೇಮ್ ಪ್ಲಾನ್ ಅಂದ್ರೆ.