IPL 2023: ಈ ಬಾರಿಯ ಐಪಿಎಲ್ ನಲ್ಲಿ ಕೋಟಿ ಕೋಟಿ ಹಣಪಡೆಯುವಷ್ಟು ಡಿಮ್ಯಾಂಡ್ ಹೊಂದಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

IPL 2023: ಈ ಬಾರಿಯ ಐಪಿಎಲ್ ನಲ್ಲಿ ಕೋಟಿ ಕೋಟಿ ಹಣಪಡೆಯುವಷ್ಟು ಡಿಮ್ಯಾಂಡ್ ಹೊಂದಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

IPL 2023: ಐಪಿಎಲ್ 16ನೇ (IPL 16) ಸೀಸನ್ ಗೆ ಈಗಾಗಲೇ ತಯಾರಿ ಶುರುವಾಗಿದೆ. ಐಪಿಎಲ್ ನ ಆಕ್ಷನ್ (IPL Auction) ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ (Kerala, Kochi) ನಡೆಯಲಿದೆ. ಆ ದಿನ ಎಲ್ಲಾ ಫ್ರಾಂಚೈಸಿಗಳು ತಮ್ಮ ಟೀಮ್ ನಲ್ಲಿರುವ ಖಾಲಿ ಜಾಗವನ್ನು ಭರ್ತಿ ಮಾಡಿಕೊಂಡು, ತಮ್ಮ ತಂಡವನ್ನು ಇನ್ನು ಉತ್ತಮವಾಗಿಸಿಕೊಳ್ಳಬಹುದು. ಇದಕ್ಕಾಗಿ ತಂಡಗಳು ಕಾತುರರಾಗಿ ಕಾಯುತ್ತಿವೆ. ಈ ವರ್ಷ ಐಪಿಎಲ್ ನಲ್ಲಿ ಕೆಲವು ಆಟಗಾರರಿಗೆ ಭಾರಿ ಡಿಮ್ಯಾಂಡ್ ಇದ್ದು, ಅವರುಗಳ ಮೇಲೆ ಕೋಟಿಗಟ್ಟಲೆ ಹಣ ಸುರಿಯಲಿ ಫ್ರಾಂಚೈಸಿಗಳು ತಯಾರಾಗಿದೆ. ಅತಿಹೆಚ್ಚು ಹಣಕ್ಕೆ ಖರೀದಿ ಮಾಡಬಹುದಾದ ಟಾಪ್ ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

5.ಜೋಶ್ ಲಿಟ್ಲ್ (Joshua Little) :- ಐರ್ಲೆಂಡ್ (Ireland) ನ ಈ ಯುವಪ್ರತಿಭೆಗೆ ಈಗ 23 ವರ್ಷಗಳು. ಇವರ ಬೌಲಿಂಗ್ ಶೈಲಿ ಅದ್ಭುತವಾಗಿದೆ. 7.58 ಎಕಾನಮಿಯಲ್ಲಿ ಬೌಲಿಂಗ್ ಮಾಡುತ್ತಾರೆ ಜೋಶ್. ಈ ವರ್ಷ ಇವರು 26 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, ಅದರಲ್ಲಿ 39 ವಿಕೆಟ್ಸ್ ಪಡೆದಿದ್ದಾರೆ. ಟಿ20 ವರ್ಲ್ಡ್ ಕಪ್ ನಲ್ಲಿ 7 ಪಂದ್ಯಗಳಲ್ಲಿ 11 ವಿಕೆಟ್ಸ್ ಪಡೆದುಕೊಂಡಿದ್ದಾರೆ ಜೋಶ್. ಐಪಿಎಲ್ ಫ್ರಾಂಚೈಸಿಗಳಿಗೆ ವಿಕೆಟ್ಸ್ ತೆಗೆಯುವ ಬೌಲರ್ ಗಳ ಆಯ್ಕೆಗೆ ಇವರು ಅತ್ಯುತ್ತಮರು ಎಂದು ಹೇಳಬಹುದು. ಇವರಿಗೆ ಐಪಿಎಲ್ ಆಕ್ಷನ್ ನಲ್ಲಿ ಭಾರಿ ಬೇಡಿಕೆ ಇರುವುದರಲ್ಲಿ ಸಂಶಯವಿಲ್ಲ. ಇದನ್ನು ಓದಿ..IPL 2023: ಒಂದು ಕಾಲದಲ್ಲಿ ಕೋಟಿ ಕೋಟಿ ರೂ ಗಳಿಸಿದ್ದ ಟಾಪ್ ಆಟಗಾರರು ಈ ಬಾರಿ ಹರಾಜಿನಲ್ಲಿ ಮಾರಾಟವಾಗೋದೇ ಡೌಟ್. ಟಾಪ್ 5 ಯಾರು ಗೊತ್ತೇ??

4.ರಿಲೇ ರುಸೋ (Rilee Russuow) :- ಟಿ20 ಪಂದ್ಯಕ್ಕೆ ಇವರು ಬಲಿಷ್ಠ ಆಟಗಾರ ಎಂದು ಹೇಳಬಹುದು. 33 ವರ್ಷದ ಈ ಆಟಗಾರ ಇದುವರೆಗೂ 269 ಟಿ20 ಮ್ಯಾಚ್ ಗಳನ್ನಾಡಿದ್ದಾರೆ, ಇದರಲ್ಲಿ 143.44 ರ ಸ್ಟ್ರೈಕ್ ರೇಟ್ ನಲ್ಲಿ 6874 ರನ್ಸ್ ಗಳಿಸಿದ್ದಾರೆ. ಇವರು ನ್ಯಾಷನಲ್ ಟೀಮ್ ಗೆ ಕಂಬ್ಯಾಕ್ ಮಾಡಿದ ನಂತರ 11 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, 372 ರನ್ಸ್ ಸ್ಕೋರ್ ಮಾಡಿದ್ದಾರೆ. ಕ್ರೀಸ್ ಗೆ ಬಂದ ನಂತರ ಕೆಲವೇ ಕೆಲವು ಎಸೆತಗಳಲ್ಲಿ ಭರ್ಜರಿಯಾಗಿ ರನ್ಸ್ ಸಿಡಿಸಿ, ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಇವರಿಗೆ ಇದೆ. ಹಾಗಾಗಿ ಇವರಿಗು ಭಾರಿ ಬೇಡಿಕೆ ಇರಲಿದೆ.

3.ಕೆಮೆರಾನ್ ಗ್ರೀನ್ (Cameron Green) :- ಆಸ್ಟ್ರೇಲಿಯಾ ತಂಡದ ಈ ಯುವ ಆಟಗಾರ ಓಡಿಐ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ, 12 ಮ್ಯಾಚ್ ಗಳಲ್ಲಿ 270 ರನ್ಸ್ ಸ್ಕೋರ್ ಮಾಡಿ, 4.98 ಎಕಾನಮಿಯಲ್ಲಿ 11 ವಿಕೆಟ್ಸ್ ಪಡೆದಿದ್ದಾರೆ. ಟಿ20 ಪಂದ್ಯಗಳ ಬಗ್ಗೆ ಹೇಳುವುದಾದರೆ, ಈ ವರ್ಷ ಎಂಟ್ರಿ ಕೊಟ್ಟಿರುವ ಇವರು, 8 ಪಂದ್ಯಗಳಲ್ಲಿ 173.75 ಸ್ಟ್ರೈಕ್ ರೇಟ್ ನಲ್ಲಿ, 139 ರನ್ಸ್ ಗಳಿಸಿದ್ದಾರೆ, 5 ವಿಕೆಟ್ಸ್ ಕಬಳಿಸಿದ್ದಾರೆ. ಉತ್ತಮ ಆಲ್ ರೌಂಡರ್ ಪ್ರದರ್ಶನ ನೀಡುವ ಇವರನ್ನು ತಂಡದ ಆರನೇ ಬೌಲರ್ ಆಗಿ ಖರೀದಿ ಮಾಡಬಹುದು. ಇದನ್ನು ಓದಿ.. Business: ಬರೋಬ್ಬರಿ 7 ಸಾವಿರ ಕೋಟಿಗೆ ಬಿಸ್ಲೇರಿ ಕಂಪನಿ ಯನ್ನು TATA ಗೆ ಮಾರಲು ನಿರ್ಧಾರ ಮಾಡಿದ ಘೋಷಣೆ. ಕಾರಣ ಏನು ಅಂತೇ ಗೊತ್ತೇ?

2.ಸ್ಯಾಮ್ ಕರನ್ (Sam Curran) :- ಇಂಗ್ಲೆಂಡ್ ನ 24 ವರ್ಷದ ಈ ಆಟಗಾರ, ಇದುವರೆಗೂ 144 ಟಿ20 ಪಂದ್ಯಗಳನ್ನಾಡಿದ್ದು, ಅದರಲ್ಲಿ 146 ವಿಕೆಟ್ಸ್ ಉರುಳಿಸಿದ್ದಾರೆ, ಹಾಗೆಯೇ 135.65 ಸ್ಟ್ರೈಕ್ ರೇಟ್ ನಲ್ಲಿ 1731 ರನ್ಸ್ ಗಳಿಸಿದ್ದಾರೆ. ಐಪಿಎಲ್ ನಲ್ಲಿ ಸಹ ಆಲ್ ರೌಂಡರ್ ಆಗಿ ಗುರುತಿಸಿಕೊಂಡಿರುವ ಇವರು, ಐಪಿಎಲ್ ನಲ್ಲಿ 32 ವಿಕೆಟ್ಸ್ ಪಡೆದಿದ್ದಾರೆ, ಹಾಗೆಯೇ 149.78 ಸ್ಟ್ರೈಕ್ ರೇಟ್ ನಲ್ಲಿ 337 ರನ್ಸ್ ಭಾರಿಸಿದ್ದಾರೆ. ಈ ವರ್ಷದ ಟಿ20 ವಿಶ್ವಕಪ್ ನ 7 ಪಂದ್ಯಗಳಲ್ಲಿ 7.28 ಎಕಾನಮಿಯಲ್ಲಿ 10 ವಿಕೆಟ್ಸ್ ಕಬಳಿಸಿದ್ದಾರೆ. ಪಂದ್ಯ ನಡೆಯುವಾಗ ಯಾವುದೇ ಫೇಸ್ ನಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಇವರು ಹೊಂದಿದ್ದಾರೆ. ಹಾಗಾಗಿ ಇವರಿಗೆ ಐಪಿಎಲ್ ಆಕ್ಷನ್ ನಲ್ಲಿ ಭಾರಿ ಬೇಡಿಕೆ ಇರುತ್ತದೆ.

1.ಬೆನ್ ಸ್ಟೋಕ್ಸ್ (Ben Stokes) :- ಪ್ರಸ್ತುತ ವಿಶ್ವದ ಬೆಸ್ಟ್ ಆಲ್ ರೌಂಡರ್ಸ್ ಗಳಲ್ಲಿ ಇವರು ಒಬ್ಬರು. ಟಿ20 ಪಂದ್ಯಗಳಲ್ಲಿ 130.63ರ ಸ್ಟ್ರೈಕ್ ರೇಟ್ ನಲ್ಲಿ 533 ರನ್ಸ್ ಗಳಿಸಿದ್ದಾರೆ. 8.40 ಎಕಾನಮಿಯಲ್ಲಿ 25 ವಿಕೆಟ್ಸ್ ಉರುಳಿಸಿದ್ದಾರೆ. 31 ವರ್ಷದ ಬೆನ್ ಸ್ಟೋಕ್ಸ್ ಅವರು, ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ, 43 ಮ್ಯಾಚ್ ಗಳಲ್ಲಿ 134.50 ಸ್ಟ್ರೈಕ್ ರೇಟ್ ನಲ್ಲಿ 920 ರನ್ಸ್ ಗಳಿಸಿದ್ದಾರೆ, 8.56 ಎಕಾನಮಿಯಲ್ಲಿ 28 ವಿಕೆಟ್ಸ್ ಉರುಳಿಸಿದ್ದಾರೆ. ಭಾರಿ ಬೇಡಿಕೆ ಇರುವ ಬ್ಯಾಟ್ಸ್ಮನ್ ಇವರೇ ಆಗಿದ್ದು, ಐಪಿಎಲ್ ನಲ್ಲಿ ಇವರನ್ನು ಖರೀದಿ ಮಾಡಲು ಎಲ್ಲಾ ಫ್ರಾಂಚೈಸಿಗಳು ಕಾದು ನಿಂತಿದೆ. ಇದನ್ನು ಓದಿ.. Business: ಒಂದು ರೂಪಾಯಿ ಕೂಡ ಬಂಡವಾಳ ಹಾಕದೆ, ಸ್ವಂತವಾಗಿ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ??