ಕರುನಾಡ ವಾಣಿ
ಇದು ನಿಮ್ಮ ಧ್ವನಿ

T20 Worldcup: ಕೊನೆಗೂ ಸೆಮಿಫೈನಲ್ ಗೂ ಮುನ್ನ ಭಾರತಕ್ಕೆ ನೆಮ್ಮದಿ: ಆತಂಕದಲ್ಲಿ ಇದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಏನು ಗೊತ್ತೇ??

1,247

Get real time updates directly on you device, subscribe now.

T20 Worldcup: ಟಿ20 ವರ್ಲ್ಡ್ ಕಪ್ ನಲ್ಲಿ ಭಾರತ ತಂಡ ಈಗ ಬಹುಮುಖ್ಯ ಹಂತಕ್ಕೆ ತಲುಪಿದೆ. ಸೂಪರ್ 12 ಹಂತದಲ್ಲಿ 4 ಪಂದ್ಯಗಳಲ್ಲಿ ಗೆದ್ದ ಭಾರತ ತಂಡ (Team India), ಸೆಮಿಫೈನಲ್ಸ್ ಹಂತಕ್ಕೆ ತಲುಪಿದೆ. ಇದರ ಸಂತೋಷದ ನಡುವೆಯೇ ಭಾರತ ತಂಡಕ್ಕೆ ಒಂದು ಬೇಸರ ಉಂಟಾಗಿದ್ದು, ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ಗಾಯಕ್ಕೆ ಒಳಗಾಗಿದ್ದರು. ಅಡಿಲೇಡ್ ನಲ್ಲಿ ನೆಟ್ಸ್ ನಲ್ಲಿ ಪ್ರಾಕ್ಟೀಸ್ ಮಾಡುವಾಗ, ರೋಹಿತ್ ಶರ್ಮಾ ಅವರ ಕೈಗೆ ಬಾಲ್ ಇಂದ ಪೆಟ್ಟಾಗಿ, ನೋವಾಗಿತ್ತು. ಒಂದು ಸಾರಿ ಬಾಲ್ ಇಂದ ಪೆಟ್ಟಾದರು, ಪ್ರಾಕ್ಟೀಸ್ ಮುಂದುವರೆಸಲು ಪ್ರಯತ್ನ ಪಟ್ಟರು ರೋಹಿತ್ ಶರ್ಮಾ.

ಆದರೆ ನೋವು ಹೆಚ್ಚಾದ ಕಾರಣ, ಪ್ರಾಕ್ಟೀಸ್ ಮಾಡಲು ಸಾಧ್ಯವಾಗದೆ, ಮೈದಾನದಿಂದ ಹೊರಹೋಗಿದ್ದರು. ಸ್ವಲ್ಪ ಹೊತ್ತಿನ ಸಮಯ ರೋಹಿತ್ ಶರ್ಮಾ ಅವರ ಕೈಗೆ ಐಸ್ ಬಾಕ್ಸ್ ಇಟ್ಟು, ರೋಹಿತ್ ಶರ್ಮಾ ಅವರು ರೆಸ್ಟ್ ತೆಗೆದುಕೊಂಡರು. ಸಹಾಯಕ ಸಿಬ್ಬಂದಿಗಳು ರೋಹಿತ್ ಶರ್ಮಾ ಅವರ ಸಹಾಯಕ್ಕೆ ಧಾವಿಸಿ ಬಂದಿದ್ದರು. ಸೆಮಿ ಫೈನಲ್ಸ್ ಹತ್ತಿರ ಇರುವಾಗ ಈ ರೀತಿ ಆಗಿದ್ದು, ಭಾರತ ತಂಡದ ಅಭಿಮಾನಿಗಳಿಗೆ ಆತಂಕ ತಂದಿತ್ತು. ಆದರೆ ಇದೀಗ ಎಲ್ಲರಿಗೂ ರಿಲೀಫ್ ಆಗುವಂತ ವಿಚಾರ ಸಿಕ್ಕಿದೆ. ಅದೇನೆಂದರೆ ರೋಹಿತ್ ಶರ್ಮಾ ಅವರು ಚೇತರಿಸಿಕೊಂಡು ಪ್ರಾಕ್ಟೀಸ್ ಗೆ ಮರಳಿ ಬಂದಿದ್ದಾರೆ. ಇದನ್ನು ಓದಿ.. T20 World Cup: ರೋಹಿತ್, ಕಾರ್ತಿಕ್ ಇಬ್ಬರದ್ದು ಅಲ್ಲದೇ ಭಾರತಕ್ಕೆ ಮತ್ತೊಬ್ಬರ ಚಿಂತೆ ಶುರು, ಈತನ ಆಟವಿಲ್ಲದೆ ಕಪ್ ಗೆಲ್ಲಲು ಸಾಧ್ಯವೇ??

ರೋಹಿತ್ ಶರ್ಮ ಅವರು ಕೆಲ ಸಮಯ ರೆಸ್ಟ್ ಮಾಡಿದ್ದು, ಅದಾದ ಬಳಿಕ ಗ್ರೌಂಡ್ ಗೆ ಬಂದಿದ್ದು ಮಾತ್ರವಲ್ಲದೆ, ಪ್ರಾಕ್ಟೀಸ್ ಸಹ ಮಾಡಿದ್ದಾರೆ. ಇದು ಭಾರತ ತಂಡದ ಅಭಿಮಾನಿಗಳಿಗೆ ತುಸು ನೆಮ್ಮದಿ ನೀಡಿದೆ. ಯಾಕೆಂದರೆ, ಮುಂಬರುವ ಎರಡು ಪಂದ್ಯಗಳಿಗೆ ಕ್ಯಾಪ್ಟನ್ ರೋಹಿತ್ ಶರ್ಮ ಅವರು ಬಹಳ ಮುಖ್ಯವಾಗುತ್ತಾರೆ. ಹಾಗಾಗಿ ರೋಹಿತ್ ಅವರ ಕೈಗೆ ಪೆಟ್ಟಾದಾಗ ತಂಡದಲ್ಲಿ ಆತಂಕ ಹೆಚ್ಚಾಗಿತ್ತು. ಆದರೆ ಈಗ ಕ್ಯಾಪ್ಟನ್ ಅವರು ಮರಳಿ ಬಂದಿರುವುದು ತಂಡಕ್ಕೆ ಒಳ್ಳೆಯದಾಗಿದೆ. ಇದನ್ನು ಓದಿ.. T20 World Cup: ಕೊಹ್ಲಿ ಹಾಗೂ ಸೂರ್ಯ ಕುಮಾರ್ ರವರಿಗೆ ಎಚ್ಚರಿಕೆ ಕೊಟ್ಟ ಬೆನ್ ಸ್ಟೋಕ್ಸ್. ಹೇಳಿದ್ದೇನು ಗೊತ್ತೇ?? ಏನು ಮಾಡಿದ್ದರಂತೆ ಗೊತ್ತೇ??

Get real time updates directly on you device, subscribe now.